ದರ್ಶನ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ; ಜನ್ಮದಿನದಂದು ಡೆವಿಲ್ ಟೀಸರ್ ಗಿಫ್ಟ್​

author-image
Gopal Kulkarni
Updated On
ದರ್ಶನ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ; ಜನ್ಮದಿನದಂದು ಡೆವಿಲ್ ಟೀಸರ್ ಗಿಫ್ಟ್​
Advertisment
  • ದರ್ಶನ್‌ಗೆ ಚಿತ್ರರಂಗದಲ್ಲಿ ಮರುಜೀವಕ್ಕೆ ಡೆವಿಲ್‌ ಚಿತ್ರ ಬಹಳ ಮುಖ್ಯ
  • ಮತ್ತೆ ತಮ್ಮ ಕೆರಿಯರ್‌ ಮುಂದುವರಿಯಲು ಡೆವಿಲ್ ಚಿತ್ರವೇ ದಿಕ್ಕು
  • ಕೊಲೆ ಆರೋಪದಲ್ಲಿ ಇಮೇಜ್‌ ಹಾಳು ಮಾಡಿಕೊಂಡಿರುವ ದಾಸ

ನಟ ದರ್ಶನ್ 48ನೇ ವಸಂತಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಡೆವಿಲ್ ಟೀಸರ್ ಗಿಫ್ಟ್ ಆಗಿ ನೀಡಿದ್ದಾರೆ.. ಡೆವಿಲ್ ಟೀಸರ್​ಗೆ ಅಭಿಮಾನಿಗಳು ಫಿದಾ ಆಗಿದ್ದು ಸಂಭ್ರಮ ಇಮ್ಮಡಿಸಿದೆ.. ಈ ಮಧ್ಯೆ ಅನಾರೋಗ್ಯದ ಕಾರಣ ಸರಳವಾಗಿ ಬರ್ತ್​ಡೇ ಆಚರಿಸಿಕೊಳ್ತಿದ್ದು ದರ್ಶನ್​ ಮನೆ ಬಳಿ ಅಭಿಮಾನಿಗಳು ಬಾರದಂತೆ ಬಿಗಿಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ನಟ ದರ್ಶನ್​​​ ಜನ್ಮದಿನಕ್ಕೆ ‘ಡೆವಿಲ್’ ಟೀಸರ್ ಗಿಫ್ಟ್​
ಫೆಬ್ರವರಿ 16.. ಇಂದು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ ಹುಟ್ಟುಹಬ್ಬ, ಅಭಿಮಾನಿಗಳಿಗೆ ಮಹಾ ಸುದಿನ.. ಹೀಗಾಗಿ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಮತ್ತೊಮ್ಮೆ ಅಪ್​ಕಮಿಂಗ್​​ ಡೆವಿಲ್ ಚಿತ್ರದ ಟೀಸರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ದಿ ಡೆವಿಲ್ ಟೀಸರ್ 1 ನಿಮಿಷ 4 ಸೆಕೆಂಡ್ ಇದೆ.. ಯಾವುದೇ ಡೈಲಾಗ್ ಇಲ್ಲದ ಟೀಸರ್​​ನಲ್ಲಿ ಬ್ಯಾಕ್​ಗ್ರೌಂಡ್ ಮ್ಯೂಸಿಕ್​ನಲ್ಲಿ ಚಾಲೆಂಜ್ ಎಂಬ ಪದ ಮಾತ್ರ ಕೇಳಿಸುತ್ತೆ.. ನಟ ದರ್ಶನ್ ಗನ್ ಹಿಡಿದು ಅಬ್ಬರಿಸುತ್ತಿರುವ ದೃಶ್ಯ ಅಭಿಮಾನಿಗಳನ್ನು ಅಭಿಮಾನದ ಅಲೆಯಲ್ಲಿ ತೇಲಿಸಿದೆ. ಸದ್ಯ ಡೆವಿಲ್ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದ್ದು ಶೀಘ್ರದಲ್ಲೇ ಶೂಟಿಂಗ್ ಆರಂಭವಾಗುತ್ತೆ ಎನ್ನಲಾಗಿದೆ.

48ನೇ ವಸಂತಕ್ಕೆ ಕಾಲಿಟ್ಟ ಚಾಲೆಂಜಿಂಗ್ ಸ್ಟಾರ್!
ಅಭಿಮಾನಿಗಳ ಪ್ರೀತಿಯ ದಾಸ, ನಟ ದರ್ಶನ್ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ಪ್ರತಿವರ್ಷ ಅಭಿಮಾನಿಗಳ ಸಮ್ಮುಖದಲ್ಲೇ ಅದ್ಧೂರಿಯಾಗಿ ಬರ್ತ್​ಡೇ ಆಚರಿಸಿಕೊಳ್ತಿದ್ದ ದಾಸ ಈ ಬಾರಿ ಬೆನ್ನುನೋವಿನ ಕಾರಣ ಜನ್ಮದಿನವನ್ನು ಸರಳವಾಗಿ ಆಚರಿಸ್ತಿದ್ದಾರೆ.. ಬೆನ್ನುನೋವು ತೀವ್ರವಾಗಿ ಕಾಡ್ತಿದ್ದು ನಾನು ಈ ಬಾರಿ ಹುಟ್ಟುಹಬ್ಬ ಆಚರಿಸಲ್ಲ, ಅಭಿಮಾನಿಗಳಿಗೆ ಸಿಗುವುದಿಲ್ಲ ಎಂಬ ಸಂದೇಶವನ್ನು ದರ್ಶನ್ ಕೆಲ ದಿನಗಳ ಹಿಂದಷ್ಟೇ ನೀಡಿದ್ದರು.. ಸದ್ಯ ನಟ ದರ್ಶನ್ ಮೈಸೂರಿನ ಫಾರ್ಮ್​ಹೌಸ್​​ನಲ್ಲಿದ್ದು ಕೇವಲ ಕುಟುಂಬ ಸದಸ್ಯರು, ಆಪ್ತರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸ್ತಿದ್ದಾರೆ.

publive-image

ನಟ ದರ್ಶನ್​ಗೆ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್​ ಮತ್ತು ರಕ್ಷಿತಾ ಸೇರಿದಂತೆ ಹಲವರು ಬರ್ತ್​ಡೇ ವಿಶ್ ಮಾಡಿದ್ದಾರೆ.. ಹೀಗಿದ್ರೂ ಆರ್.ಆರ್​.ನಗರದಲ್ಲಿರುವ ಮನೆ ಬಳಿ ಅಭಿಮಾನಿಗಳು ಬರ್ತಾ ಇದ್ದು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಕೆಎಸ್​​ಆರ್​ಪಿ ಸೇರಿದಂತೆ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ.. ಅತ್ತ ಮೈಸೂರಿನ ದರ್ಶನ್ ಫಾರ್ಮ್​ಹೌಸ್​​​​ನಲ್ಲೂ ಅಭಿಮಾನಿಗಳನ್ನು ನಿಯಂತ್ರಿಸಲು ಬಿಗಿ ಭದ್ರತೆ ಒದಗಿಸಲಾಗಿದೆ.

publive-image

ಈ ಮಧ್ಯೆ ನಟ ದರ್ಶನ್​ ಹುಟ್ಟುಹಬ್ಬಕ್ಕೆ ‘ವೀರ ಸಿಂಧೂರ ಲಕ್ಷ್ಮಣ ಸಿನಿಮಾ’ ಪೋಸ್ಟರ್ ರಿಲೀಸ್ ಆಗಿದೆ.. ತರುಣ್​ ಸುಧೀರ್ ನಿರ್ದೇಶನದ ವೀರ ಸಿಂಧೂರ ಲಕ್ಷ್ಮಣ ಸಿನಿಮಾದಲ್ಲಿ ದರ್ಶನ್ ಲಕ್ಷ್ಮಣನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ.. ಇದು ನಟ ದರ್ಶನ್​ 59ನೇ ಸಿನಿಮಾ ಆಗಿದ್ದು ಪೋಸ್ಟರ್ ಮೂಲಕ ನಿರ್ದೇಶಕ ತರುಣ್​ ಸುಧೀರ್ ಖುಷಿ ಹಂಚಿಕೊಂಡಿದ್ದಾರೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.. ದಾಸ ಬದುಕಿಗೆ ಡೆವಿಲ್ ಮತ್ತೆ ಬ್ರೇಕ್ ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ

Advertisment