ಟ್ರಂಪ್​ಗೆ ಗೆಲುವು; ಮಹಾಕಾಳೇಶ್ವರನಿಗೆ ಡಾಲರ್​ಗಳ ನೋಟಿನ ಹಾರ ಅರ್ಪಣೆ; ಯಾರಿಂದ ಸಲ್ಲಿಕೆಯಾಯ್ತು ಗೊತ್ತಾ?

author-image
Gopal Kulkarni
Updated On
ಟ್ರಂಪ್​ಗೆ ಗೆಲುವು; ಮಹಾಕಾಳೇಶ್ವರನಿಗೆ ಡಾಲರ್​ಗಳ ನೋಟಿನ ಹಾರ ಅರ್ಪಣೆ; ಯಾರಿಂದ ಸಲ್ಲಿಕೆಯಾಯ್ತು ಗೊತ್ತಾ?
Advertisment
  • ಡೊನಾಲ್ಡ್​ ಟ್ರಂಪ್​ ಗೆಲುವಿನ ಸಂಭ್ರಮ, ಮಹಾಕಾಳೇಶ್ವರನಿಗೆ ವಿಶೇಷ ಕೊಡುಗೆ
  • 200 ಅಮೆರಿಕಾ ಡಾಲರ್​ ಕರೆನ್ಸಿಯ ನೋಟಿನ ಹಾರ ಅರ್ಪಿಸಿದ ಅನಾಮಿಕ ಭಕ್ತ
  • ಅಮೆರಿಕಾದ ಚುನಾವಣೆ ವಿಶ್ವದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಎನ್ನಲು ಇದು ಸಾಕ್ಷಿ

ಎಲ್ಲಿಯ ಅಮೆರಿಕಾ ಎಲ್ಲಿಯ ಉಜ್ಜಯನಿ ಮಹಾಕಾಳೇಶ್ವರ, ಅಮೆರಿಕಾದಲ್ಲಿ ಏನೇ ರಾಜಕೀಯ ಪಲ್ಲಟಗಳು ನಡೆದರು ಅದು ವಿಶ್ವದ ಮೇಲೆ ಒಂದಿಲ್ಲ ಒಂದು ಪರಿಣಾಮವನ್ನು ಬೀರುತ್ತವೆ. ಅಲ್ಲಿ ಕಮಲಾ ಹ್ಯಾರೀಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆ ಆದ್ರೆ ಇಲ್ಲಿ ತಮಿಳುನಾಡಿನಲ್ಲಿ ಸಂಭ್ರಮಗಳು ಕಳೆಗಟ್ಟುತ್ತವೆ. ಅಲ್ಲಿ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆದ್ದರೆ, ಇಲ್ಲಿ ಮಧ್ಯಪ್ರದೇಶದ ಉಜ್ಜಯನಿಯ ಮಹಾಕಾಳೇಶ್ವರನಿಗೆ ಡಾಲರ್​ ಕರನ್ಸಿ ನೋಟಿನ ಮಾಲೆ ಅರ್ಪಣೆಯಾಗುತ್ತದೆ.

ಇದನ್ನೂ ಓದಿ: ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವಾಗ ಎದ್ದು ಬಂದ ಉದ್ಯಮಿ; ಪೋಸ್ಟ್‌ಮಾರ್ಟಂ ಮಾಡಿದ್ದ ಪೊಲೀಸರಿಗೆ ಶಾಕ್‌!

ಉಜ್ಜಯನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ 200 ಡಾಲರ್​ ಕರನ್ಸಿಯ ನೋಟಿನ ಹಾರವನ್ನು ಭಕ್ತರೊಬ್ಬರು ಅರ್ಪಿಸಿದ್ದಾರೆ. ಕಾರಣ ಅಮೆರಿಕಾದಲ್ಲಿ ಡೊನಾಲ್ಡ್​ ಟ್ರಂಪ್ ಗೆದ್ದ ಖುಷಿಯೆಂದು ಹೇಳಲಾಗಿದೆ. ಈ ಒಂದು ಹಾರವನ್ನು ಮಹಾಕಾಳೇಶ್ವರ ಡೊನಾಲ್ಡ್ ಟ್ರಂಪ್​ಗೆ ಮತ್ತಷ್ಟು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿ ಸಲ್ಲಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ಇದನ್ನೂ ಓದಿ:ಭಾರತದ ಮನೆ ಒಂದರ ಬಾವಿಯಲ್ಲಿ ಉಕ್ಕಿದ ಪೆಟ್ರೋಲ್; ಕೊಡಪಾನ ಹಿಡಿದು ಸಾಲುಗಟ್ಟಿ ನಿಂತ ಜನ!

ಈ ಒಂದು ನೋಟಿನ ಹಾರವನ್ನು ಯಾರು ನೀಡಿದರು ಎಂಬುದು ಇನ್ನೂ ಕೂಡ ಬಹಿರಂಗಗೊಂಡಿಲ್ಲ. ಅನಾಮಿಕ ಭಕ್ತರೊಬ್ಬರು ಈ ಡಾಲರ್​ ಕರೆನ್ಸಿ ನೋಟಿನ ಹಾರವನ್ನು ಮಹಾಕಾಳೇಶ್ವರನಿಗೆ ಸಲ್ಲಿಸಿದ್ದಾರೆ. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾದ ಜ್ಯೋತಿರ್ಲಿಂಗ ಉಜ್ಜಯನಿಯ ಮಹಾಕಾಳೇಶ್ವರ. ಶಕ್ತಿಗಾಗಿ ಹಾಗೂ ಶತ್ರುಗಳ ಧಮನಕ್ಕಾಗಿ ಮಹಾಕಾಳೇಶ್ವರನನ್ನು ಪೂಜಿಸಲಾಗುತ್ತದೆ. ಮಹಾಕಾಳೇಶ್ವರ ಶಕ್ತಿಯ ಒಂದು ಪ್ರತಿರೂಪ ಎಂದೇ ನಂಬಲಾಗುತ್ತೆ. ಸದ್ಯ ಮಹಾಕಾಳನಿಗೆ ಟ್ರಂಪ್ ಗೆಲುವಿನ ಸಂಭ್ರಮದಿಂದ ಭಕ್ತರೊಬ್ಬರು ಈ ರೀತಿ ವಿಶೇಷ ಹಾರವನ್ನು ನೀಡಿದ್ದು. ತಮ್ಮ ಹೆಸರು ಬಹಿರಂಗಪಡಿಸಬಾರದು ಎಂದು ಹೇಳಿದ್ದಾರೆ.


">November 16, 2024


ಭಾರೀ ಕುತೂಹಲ ಮೂಡಿಸಿದ್ದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್ ಮತ್ತೊಂದು ಬಾರಿ ಅಧಿಕಾರ ಗದ್ದುಗೆಯನ್ನು ಹಿಡಿದಿದ್ದಾರೆ. ಈಗಾಗಲೇ ಹೇಳಿದಂತೆ ಅಮೆರಿಕಾ ರಾಜಕಾರಣದಲ್ಲಿ ಸಣ್ಣ ಗಾಳಿ ಬೀಸಿದರು ಕೂಡ ಜಗತ್ತಿನಲ್ಲಿ ಸುಂಟರಗಾಳಿ ಉಂಟಾಗುತ್ತದೆ. ಅಲ್ಲಿ ನಡೆಯುವ ಚುನಾವಣೆ ಇಡೀ ಜಗತ್ತನ್ನೇ ತನ್ನತ್ತ ಸೆಳೆಯುತ್ತದೆ. ಅದಕ್ಕೆ ದೊಡ್ಡ ನಿದರ್ಶನವೇ ಈಗ ಮಹಾಕಾಳೇಶ್ವರನಿಗೆ ಅರ್ಪಿತವಾಗಿರುವ ಡಾಲರ್​​ ಕರೆನ್ಸಿ ನೋಟಿನ ಹಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment