ತಿರುಪತಿ ದರ್ಶನ; ಕನ್ನಡಿಗರೂ ಸೇರಿ 700ಕ್ಕೂ ಹೆಚ್ಚು ಭಕ್ತರನ್ನ ಶೆಡ್​ನಲ್ಲಿ ಕೂಡಿ ಹಾಕಿದ ಟಿಟಿಡಿ; ಗಂಭೀರ ಆರೋಪ

author-image
Bheemappa
Updated On
ತಿರುಪತಿ ದರ್ಶನ; ಕನ್ನಡಿಗರೂ ಸೇರಿ 700ಕ್ಕೂ ಹೆಚ್ಚು ಭಕ್ತರನ್ನ ಶೆಡ್​ನಲ್ಲಿ ಕೂಡಿ ಹಾಕಿದ ಟಿಟಿಡಿ; ಗಂಭೀರ ಆರೋಪ
Advertisment
  • ಮೂಲ ಸೌಕರ್ಯಗಳು ಇಲ್ಲದೇ ಮಹಿಳೆಯರು, ಮಕ್ಕಳು ಪರದಾಟ
  • ಗುಡಿ ಬಳಿ ಅವ್ಯವಸ್ಥೆ ಬಗ್ಗೆ ಬೇಸರ ಹೊರ ಹಾಕುತ್ತಿರುವ ಭಕ್ತಾದಿಗಳು
  • ಕಳೆದ 15 ಗಂಟೆಗಳಿಂದಲೂ ಶೆಡ್​ನಲ್ಲಿ ಇರುವ ಭಕ್ತರು, ಪರದಾಟ

ಹೈದರಾಬಾದ್: ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳಿದ್ದ 700ಕ್ಕೂ ಹೆಚ್ಚು ಭಕ್ತರನ್ನು ಕಳೆದ 15 ಗಂಟೆಗಳಿಂದ ಶೆಡ್​ನಲ್ಲಿ ಕೂಡಿ ಹಾಕಿರುವ ಆರೋಪ ಕೇಳಿ ಬಂದಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲೆಂದು ನಿನ್ನೆ ಸಂಜೆ 6 ಗಂಟೆಯಿಂದ ಭಕ್ತಾದಿಗಳು ಕ್ಯೂನಲ್ಲಿ ನಿಂತಿದ್ದರು. ಆದರೆ ರಾತ್ರಿ 9 ಗಂಟೆಗೆ ಕ್ಯೂನಲ್ಲಿ ನಿಂತವರನ್ನು ಟಿಟಿಡಿ ಮಂಡಳಿ ಶೆಡ್​ ಹಾಕಿ ಲಾಕ್ ಮಾಡಿ ಬೆಳಗ್ಗೆ ದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದೆ ಎನ್ನಲಾಗಿದೆ. ಇದರಲ್ಲಿ ಕನ್ನಡಿಗರು ಕೂಡ ಸೇರಿದ್ದಾರೆ. ಆದರೆ ಇದುವರೆಗೂ ಶೆಡ್​ನಲ್ಲಿ ಇದ್ದವರನ್ನು ಹೊರಗೆ ಬಿಟ್ಟಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:CMಗೆ ತಂದಿದ್ದ ಸಮೋಸಾ, ಕೇಕ್​ಗಳು ಮಂಗಮಾಯ.. CID ತನಿಖೆ ಹೇಳಿದ್ದೇನು?

publive-image

ರಾತ್ರಿಯಿಂದಲೂ ಒಳಗೆ ಕೂಡಿ ಹಾಕಿದ್ದರಿಂದ ರಾತ್ರಿ ಮಲಗಲು ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲದೇ ಮಹಿಳೆಯರು, ಮಕ್ಕಳು, ವೃದ್ಧರು ಪರದಾಡುತ್ತಿದ್ದಾರೆ. ರಾತ್ರಿ ನಿದ್ದೆ ಇಲ್ಲದೇ ಶೆಡ್​ನಲ್ಲೇ 700ಕ್ಕೂ ಹೆಚ್ಚು ಭಕ್ತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಈ ಸಂಬಂಧ ಸಹಾಯ ಕೋರಿ‌ ನ್ಯೂಸ್​ಫಸ್ಟ್​ಗೆ ಮನವಿ ಮಾಡಿದ್ದು ಅವ್ಯವಸ್ಥೆ ಬಗ್ಗೆ ಭಕ್ತಾದಿಗಳು ಬೇಸರ ಹೊರಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment