ಅಯೋಧ್ಯೆಯಲ್ಲಿ ಎಷ್ಟು ಗಂಟೆಗೆ ಶ್ರೀರಾಮನ ದರ್ಶನಕ್ಕೆ ಅವಕಾಶ ಇದೆ.. ಐಡಿ ಕಾರ್ಡ್​ ಬೇಕೇಬೇಕಾ?

author-image
Ganesh
Updated On
ಉದ್ಘಾಟನೆಯಾದ ಮರುದಿನವೇ ಅಯೋಧ್ಯೆಗೆ ಬಂದಿದ್ನಂತೆ ರಾಮನ ಭಂಟ; ಸಂಜೆ 5.50ಕ್ಕೆ ನಡೀತು ಪವಾಡ ಎಂದ ಟ್ರಸ್ಟ್
Advertisment
  • ಇಂದಿನಿಂದ ಭಕ್ತರಿಗೆ ರಾಮಲಲ್ಲಾನ ದರ್ಶನ ಭಾಗ್ಯ
  • 5 ಡಿಗ್ರಿಯ ಕೊರೆಯುವ ಚಳಿಯಲ್ಲೂ ರಾಮ ಭಕ್ತರು
  • ಶ್ರೀರಾಮನ ದರ್ಶನ ಪಡೆಯೋರು ಏನೆಲ್ಲ ಮಾಡಬೇಕು?

500 ವರ್ಷಗಳ ಬಳಿಕ ಶ್ರೀರಾಮ ಅಯೋಧ್ಯೆಗೆ ಮತ್ತೆ ಆಗಮಿಸಿದ್ದು, ಕೋಟಿ ಕೋಟಿ ಭಾರತೀಯ ಮನಸ್ಸಿನಲ್ಲಿ ಮರ್ಯಾದಾ ಪುರುಷೋತ್ತಮ ವಿರಾಜಮಾನನಾಗಿದ್ದಾನೆ. ನಿನ್ನೆ ರಾಮ ಮಂದಿರ ಉದ್ಘಾಟನೆ ಬೆನ್ನಲ್ಲೇ, ಇಂದಿನಿಂದ ಅಂದರೆ ಜೂನ್ 23 ರಿಂದ ಶ್ರೀರಾಮ ಭಕ್ತಿರಿಗೆ ದರ್ಶನ ಕರುಣಿಸ್ತಿದ್ದಾನೆ.

ಇಂದು ಬೆಳಗ್ಗೆಯಿಂದಲೇ ಸಾರ್ವಜನಿಕರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇಂದಿನಿಂದ ಭಕ್ತರಿಗೆ ರಾಮಲಲ್ಲಾನ ದರ್ಶನ ಭಾಗ್ಯ ಆರಂಭ-ಬಾಲ ರಾಮನ ಕಣ್ತುಂಬಿಕೊಳ್ಳಲು 5 ಡಿಗ್ರಿಯ ಕೊರೆಯುವ ಚಳಿಯಲ್ಲೂ ರಾಮನ ದರ್ಶನಕ್ಕೆ ಭಕ್ತರು ಮುಗಿಬಿದ್ದು, ಬೆಳಗ್ಗೆ ಮೂರು ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮೊದಲ ದಿನವಾದ ಇಂದು ಲಕ್ಷಾಂತರ ಮಂದಿ ಬರುತ್ತಿರುವ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಗಿದೆ. ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತಾ ಗುಂಪಾಗಿ ಹೆಜ್ಜೆ ಇಡುತ್ತಿದ್ದಾರೆ.

ಶ್ರೀರಾಮನ ದರ್ಶನ ಯಾವಾಗ..?

  • ಬೆಳಗ್ಗೆ 7 ರಿಂದ 11.30ರವರೆಗೆ ಮಾತ್ರ ದರ್ಶನ ಅವಕಾಶ
  • ಮತ್ತೆ ಮಧ್ಯಾಹ್ನ 2 ರಿಂದ ಸಂಜೆ 7ರವರೆಗೆ ರಾಮ ದರ್ಶನ
  • ನಿತ್ಯ ಬೆಳಗ್ಗೆ ಶೃಂಗಾರ ಆರತಿ, ಸಂಜೆ ಸಂಧ್ಯಾ ಆರತಿ ನಡೆಯಲಿದೆ
  • ಐ.ಡಿ ಕಾರ್ಡ್​ ನೀಡಿ ಭಕ್ತರು ಆರತಿ ಪಾಸ್​ ಪಡೆಯಬಹುದು
  • ಟ್ರಸ್ಟ್​ ವೆಬ್​ಸೈಟ್​ನಲ್ಲಿ ನಿಮ್ಮ ಹೆಸರನ್ನು ನಮೂದಿಸಿರಬೇಕು
  • ಆಫ್​ಲೈನ್​, ಆನ್​ ಲೈನ್​ ಎರಡರಲ್ಲೂ ಪಾಸ್​ ಪಡೆಯಬಹುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment