newsfirstkannada.com

EXCLUSIVE: ಶ್ರೀರಾಮನ ಭಕ್ತರೇ ಗಮನಿಸಿ.. ಅಯೋಧ್ಯೆಯ ರಾಮ ಲಲ್ಲಾ ಮೂರ್ತಿ ಇದಲ್ಲವೇ ಅಲ್ಲ; ಹೇಗಿರುತ್ತೆ?

Share :

Published January 2, 2024 at 4:41pm

Update January 2, 2024 at 5:02pm

    ರಾಮನ ಮೂರ್ತಿ ಪಕ್ಕದಲ್ಲಿರೋ ಶಿಲ್ಪಿ ಅರುಣ್ ಯೋಗಿರಾಜ್ ಫೋಟೋ ವೈರಲ್!

    ಅಸಲಿಗೆ ಇದು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗೋ ಮೂರ್ತಿ ಅಲ್ಲವೇ ಅಲ್ಲ

    ರಾಮ ಲಲ್ಲಾ ಮೂರ್ತಿಯನ್ನ ಇಡೀ ದೇಶದಲ್ಲಿ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಉದ್ಘಾಟನೆಯ ಸುವರ್ಣ ಕ್ಷಣಗಳು ಹತ್ತಿರವಾಗುತ್ತಿದೆ. ಜನವರಿ 22ರ ಆ ಶುಭ ಗಳಿಗೆಗೆ ಕೋಟ್ಯಾಂತರ ರಾಮನ ಭಕ್ತರು ಬೆರಗು ಕಣ್ಣುಗಳಿಂದ ಕಾಯುತ್ತಿದ್ದಾರೆ. ಈ ಸಂತಸದ ಮಧ್ಯೆ ಕನ್ನಡಿಗರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮ ಲಲ್ಲಾ ಮೂರ್ತಿಯೇ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ ಎನ್ನಲಾಗಿದೆ.

ಶಿಲ್ಪಿ ಅರುಣ್ ಯೋಗಿರಾಜ್‌ ಕೆತ್ತಿರುವ ರಾಮ ಲಲ್ಲಾ ಮೂರ್ತಿ ಆಯ್ಕೆ ಆಗಿದೆ ಅನ್ನೋ ಸಂಗತಿಯ ಜೊತೆಗೆ ಮತ್ತೊಂದು ತಪ್ಪು ಸಂದೇಶ ಹರಿದಾಡುತ್ತಿದೆ. ಎಲ್ಲರೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಜೊತೆಗಿರೋ ರಾಮನ ಮೂರ್ತಿಯನ್ನು ನೋಡಿ ಇದೇ ರಾಮ ಲಲ್ಲಾ ಮೂರ್ತಿ ಎಂದು ನಂಬಿದ್ದಾರೆ. ಆದರೆ ಅರುಣ್ ಯೋಗಿರಾಜ್ ಫೋಟೋದಲ್ಲಿರೋ ರಾಮನ ಮೂರ್ತಿಗೂ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಆಗುತ್ತಿರುವ ರಾಮ ಲಲ್ಲಾ ಮೂರ್ತಿಗೂ ಸಂಬಂಧವೇ ಇಲ್ಲ.

ರಾಮನ ಮೂರ್ತಿ ಪಕ್ಕದಲ್ಲಿರೋ ಶಿಲ್ಪಿ ಅರುಣ್ ಯೋಗಿರಾಜ್ ಫೋಟೋವನ್ನು ಎಲ್ಲಾ ಕಡೆ ವೈರಲ್ ಮಾಡಲಾಗಿದೆ. ಸಾಕಷ್ಟು ಮಂದಿ ಇದನ್ನೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವ ರಾಮ ಲಲ್ಲಾ ಮೂರ್ತಿ ಎಂದು ಭಾವಿಸಿದ್ದಾರೆ. ಆದರೆ ಅಸಲಿಗೆ ಇದು ರಾಮ ಲಲ್ಲಾ ಮೂರ್ತಿಯೇ ಅಲ್ಲ. ಅಸಲಿಗೆ ಇದು ಕೋದಂಡ ರಾಮ, ಪಟ್ಟಾಭಿರಾಮನ ಮೂರ್ತಿಯಾಗಿದೆ. ದಕ್ಷಿಣ ಭಾರತದ ಶೈಲಿಯದ್ದಾಗಿದೆ. ರಾಮ ಲಲ್ಲಾ ಮೂರ್ತಿ ಈ ರೀತಿ ಇರುವುದೇ ಇಲ್ಲ.

ನ್ಯೂಸ್ ಫಸ್ಟ್‌ಗೆ ಸಿಕ್ಕ ಮಾಹಿತಿಯ ಪ್ರಕಾರ ಅಸಲಿಗೆ ರಾಮ ಲಲ್ಲಾ ಅಂದ್ರೆ ಮಗುವಿನ ರೀತಿ ನಿಂತಿರುವ ಬಾಲಕ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡ್ತಿರೋ ರಾಮ ಲಲ್ಲಾ ಮೂರ್ತಿ ವಿಶೇಷದ್ದಾಗಿರುತ್ತೆ. ಇಡೀ ಭಾರತದಲ್ಲಿ ಇರೋ ರೀತಿ ಅದು ಇರೋದೇ ಇಲ್ಲ. ರಾಮಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆ ಆಗುತ್ತಿರುವ ರಾಮ ಲಲ್ಲಾ ಮೂರ್ತಿಯನ್ನ ಇಡೀ ದೇಶದಲ್ಲಿ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ.

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವ ರಾಮಲಲ್ಲಾ ಮೂರ್ತಿಯನ್ನು ಅಂತಿಮಗೊಳಿಸಿದೆ. ಇದೇ ಜನವರಿ 17ರಂದು ಮೂರರಲ್ಲಿ ಒಂದು ರಾಮ ಲಲ್ಲಾ ಮೂರ್ತಿಯನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಅಧಿಕೃತವಾಗಿ ಪ್ರಕಟವಾಗುವ ತನಕ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಯಾವುದೇ ಫೋಟೋಗಳು ರಾಮ ಲಲ್ಲಾ ಮೂರ್ತಿಗೆ ಹೋಲಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ ಲಲ್ಲಾ ಮೂರ್ತಿ ಆಯ್ಕೆಗೆ ಮಹತ್ವದ ನಿರ್ಧಾರ; ಮೂರರಲ್ಲಿ ಯಾವುದು ಅಂತಿಮ?

ದೇಶದ ಪ್ರಖ್ಯಾತ ಮೂವರು ಶಿಲ್ಪಿಗಳಿಂದ 51 ಇಂಚು ಎತ್ತರದ ಮೂರು ರಾಮ ಲಲ್ಲಾ ಮೂರ್ತಿಗಳನ್ನು ಕೆತ್ತನೆ ಮಾಡಲಾಗಿದೆ. ಮೈಸೂರಿನ ಅರುಣ್ ಯೋಗಿರಾಜ್, ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಹಾಗೂ ಜಿ.ಎಲ್.ಭಟ್ ಅವರಿಂದ ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದೆ. ಮೂವರು ಕೆತ್ತಿರುವ ಮೂರು ಮೂರ್ತಿಗಳಲ್ಲಿ ಒಂದನ್ನು ಮಾತ್ರ ಗರ್ಭಗೃಹದಲ್ಲಿ ಕಮಲದ ಮೇಲೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಉಳಿದೆರಡು ಮೂರ್ತಿಯನ್ನು ಮಂದಿರದ ಆವರಣದಲ್ಲಿ ಗೌರವಪೂರ್ವಕವಾಗಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXCLUSIVE: ಶ್ರೀರಾಮನ ಭಕ್ತರೇ ಗಮನಿಸಿ.. ಅಯೋಧ್ಯೆಯ ರಾಮ ಲಲ್ಲಾ ಮೂರ್ತಿ ಇದಲ್ಲವೇ ಅಲ್ಲ; ಹೇಗಿರುತ್ತೆ?

https://newsfirstlive.com/wp-content/uploads/2024/01/Ayodhya-Ram-lala-Idol.jpg

Load More