/newsfirstlive-kannada/media/post_attachments/wp-content/uploads/2024/11/JOBS_ITBPF.jpg)
ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DFCCIL) ಹೊಸ ಉದ್ಯೋಗಗಳನ್ನು ಭರ್ತಿ ಮಾಡಲು ಸಿದ್ಧವಾಗಿದೆ. ಈ ಸಂಬಂಧ ನೋಟಿಫಿಕೆಶನ್ ಅನ್ನು ರಿಲೀಸ್ ಮಾಡಲಾಗಿದ್ದು ಅರ್ಜಿ ಸಲ್ಲಿಕೆಯ ದಿನಾಂಕ ಕೂಡ ಘೋಷಣೆ ಮಾಡಲಾಗಿದೆ. ಯಾರಿಗೆ ಇಷ್ಟ ಇದೆಯೋ ಅವರು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS), ಎಕ್ಸಿಕ್ಯೂಟಿವ್ ಮತ್ತು ಜೂನಿಯರ್ ಮ್ಯಾನೇಜರ್ ಹುದ್ದೆಗಳನ್ನು ಆಹ್ವಾನ ಮಾಡಲಾಗುತ್ತಿದೆ. ಜನವರಿ 13 ರಂದು ಈ ಕುರಿತು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಇಲಾಖೆಯ ಅಧಿಕೃತ ವೆಬ್ಸೈಟ್ https://dfccil.com/ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಆಯ್ಕೆ ಪ್ರಕ್ರಿಯೆ, ಎಷ್ಟು ಕೆಲಸಗಳು ಖಾಲಿ ಇವೆ, ಯಾವ ಕೋರ್ಸ್ ಮಾಡಿದವರು ಅಪ್ಲೇ ಮಾಡಬಹುದು, ಅರ್ಜಿ ಶುಲ್ಕ ಎಷ್ಟು ಎನ್ನುವ ಇನ್ನಿತರ ಮಾಹಿತಿ ಇಲ್ಲಿ ನೀಡಲಾಗಿದೆ. ಉದ್ಯೋಗಾಕಾಂಕ್ಷಿಗಳು ಸಂಪೂರ್ಣವಾಗಿ ಇದನ್ನು ಮನನ ಮಾಡಿಕೊಳ್ಳಬೇಕು.
ಮಾಸಿಕ ವೇತನ ಶ್ರೇಣಿ
16,000 ದಿಂದ 1,60,000 ರೂಪಾಯಿಗಳು
ಒಟ್ಟು ಹುದ್ದೆಗಳು ಎಷ್ಟು?
642 ಕೆಲಸಗಳು
ಹುದ್ದೆಗಳ ಹಂಚಿಕೆ ಹೇಗಿದೆ?
- ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS)- 464
- ಎಕ್ಸಿಕ್ಯೂಟಿವ್ ಎಲೆಕ್ಟ್ರಿಕಲ್- 64
- ಎಕ್ಸಿಕ್ಯೂಟಿವ್ (ಸಿಂಗಲ್ & ಟೆಲಿಕಮ್)- 75
- ಎಕ್ಸಿಕ್ಯೂಟಿವ್ (ಸಿವಿಲ್)- 36
- ಜೂನಿಯರ್ ಮ್ಯಾನೇಜರ್ (ಫೈನಾನ್ಸ್)- 3
ಇದನ್ನೂ ಓದಿ: ಮಹತ್ವದ ಉದ್ಯೋಗಗಳನ್ನ ಆಹ್ವಾನಿಸಿದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
ಶೈಕ್ಷಣಿಕ ಅರ್ಹತೆ ಏನು?
SSLC, ITI, ಡಿಪ್ಲೊಮಾ (3 ವರ್ಷ) ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಪವರ್ ಸಪ್ಲೈ/ ಸಿವಿಲ್ ಇಂಜಿನಿಯರಿಂಗ್, ಸಿಎ, ಸಿಡಬ್ಲುಎ, ಸಿಎಸ್, ಎಂಬಿಎ, ಪಿಜಿ ಡಿಪ್ಲೊಮಾ
ವಯೋಮಿತಿ- 18 ವರ್ಷದಿಂದ 33 ವರ್ಷಗಳು
ಅರ್ಜಿ ಶುಲ್ಕ
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS)- 500 ರೂಪಾಯಿ
ಎಕ್ಸಿಕ್ಯೂಟಿವ್ ಮತ್ತು ಜೂ. ಮ್ಯಾನೇಜರ್- 1000 ರೂ.ಗಳು
ಆಯ್ಕೆ ಪ್ರಕ್ರಿಯೆ ಹೇಗಿದೆ?
- ಕಂಪ್ಯೂಟರ್ ಬೇಸ್ ಟೆಸ್ಟ್ (CBT 1, CBT 2)
- ದೈಹಿಕ ಪರೀಕ್ಷೆ (ಕೆಲ ಪೋಸ್ಟ್‌ಗಳಿಗೆ ಮಾತ್ರ)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆಯ ದಿನಾಂಕ- 18 ಜನವರಿ 2025
- ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 16 ಫೆಬ್ರವರಿ 2025
- ಅರ್ಜಿ ಮರು ಪರಿಶೀಲನೆ ದಿನಾಂಕ- ಫೆಬ್ರವರಿ 23 ರಿಂದ 27
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ