/newsfirstlive-kannada/media/post_attachments/wp-content/uploads/2024/12/JOB_BANK-6.jpg)
ಡೈರೆಕ್ಟರೇಟ್ ಜನರಲ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ (DG EME) ಇಲ್ಲಿ ಖಾಲಿ ಇರುವಂತ ಗ್ರೂಪ್- C ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಸದ್ಯ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. 600ಕ್ಕೂ ಅಧಿಕ ಉದ್ಯೋಗಗಳನ್ನು ತುಂಬಲಾಗುತ್ತಿರುವ ಕಾರಣ ಆಕಾಂಕ್ಷಿಗಳು ಹೆಚ್ಚಿನ ಮಟ್ಟದಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
ಈ ಹುದ್ದೆಗಳಿಗೆ ಭಾರತೀಯ ಸೇನಾ ಎಂಜಿನಿಯರಿಂಗ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಆರಂಭದ ದಿನಾಂಕದಿಂದ 21 ದಿನಗಳ ಒಳಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಇಲಾಖೆಯ ವೆಬ್ಸೈಟ್ನಿಂದ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಬಹುದು. ಲಿಂಕ್ ಅನ್ನು ಈ ಲೇಖನದಲ್ಲಿ ನೀಡಲಾಗಿದೆ.
ರಕ್ಷಣಾ ಸಚಿವಾಲಯದಡಿ ಈ ಉದ್ಯೋಗಗಳು ಇರುತ್ತವೆ. ಆಸಕ್ತ ಅರ್ಜಿದಾರರು ಶೈಕ್ಷಣಿಕ ಅರ್ಹತೆಗಳು, ವಯಸ್ಸಿನ ಮಿತಿ, ಮಾನದಂಡಗಳು ಹಾಗೂ ಈ ಹುದ್ದೆಗಳಿಗೆ ಸಂಬಂಧಿಸಿದ ಇತರ ವಿವರ ಇಲ್ಲಿ ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ದೈಹಿಕ ಸಾಮರ್ಥ್ಯ ಹಾಗೂ ಪರೀಕ್ಷೆ ಸೇರಿ ಇನ್ನೊಂದು ಎರಡು ಹಂತಗಳಿವೆ. ಈ ಬಗ್ಗೆ ಡೀಟೆಲ್ಸ್ ಇಲ್ಲಿದೆ ಗಮನಿಸಿ.
ತಿಂಗಳ ಸಂಬಳ
18,000 ದಿಂದ 81,000 ರೂಪಾಯಿ
ಒಟ್ಟು ಉದ್ಯೋಗಗಳು- 625
ಇದನ್ನೂ ಓದಿ:ಕೇಂದ್ರ ಸರ್ಕಾರದಡಿ ಉದ್ಯೋಗ ಅವಕಾಶ.. 40 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು
ಆಯ್ಕೆ ಪ್ರಕ್ರಿಯೆಗಳು
- ಲಿಖಿತ ಪರೀಕ್ಷೆ
- ದೈಹಿಕ ಪರೀಕ್ಷೆ
- ಕೌಶಲ್ಯ ಟೆಸ್ಟ್ (skill)
- ವ್ಯಾಪಾರ ಪರೀಕ್ಷೆ (trade tests)
- ದಾಖಲಾತಿ ಪರಿಶೀಲನೆ
ವಯೋಮಿತಿ
18 ರಿಂದ 30 ವರ್ಷದ ಒಳಗಿನವರಿಗೆ ಅವಕಾಶ
ವಿದ್ಯಾರ್ಹತೆ (ಹುದ್ದೆಗಳಿಗೆ ತಕ್ಕಂತೆ ಕೇಳಲಾಗಿದೆ)
- ಪಿಯುಸಿ- ಡಿಪ್ಲೋಮಾ ಇನ್ ಫಾರ್ಮಾಸಿ
- ಪಿಯುಸಿ- ಐಟಿಐ ಸರ್ಟಿಫಿಕೆಟ್
- ಪಿಯುಸಿ- ಐಟಿಐ ಮೋಟಾರ್ ಮೆಕ್ಯಾನಿಕ್ ಟ್ರೇಡ್
- ಪಿಯುಸಿ ಪಾಸ್ ಆಗಿದ್ದು ಹಿಂದಿ, ಇಂಗ್ಲಿಷ್ ಟೈಪಿಂಗ್
- ಮೆಟ್ರಿಕ್ಯುಲೇಷನ್ (10ನೇ ತರಗತಿ ಪಾಸ್)
- ಐಟಿಐ ಪಾಸ್ ಆಗಿರಬೇಕು
Application Form 2024
DG EME Indian Army Group C Application Form 2024
Downlode link- https://t.co/XPxRvVdniH— Bhima (@Bhima895143)
DG EME Indian Army Group C Application Form 2024
Downlode link- https://t.co/XPxRvVdniH— Bhima (@Bhima895143) December 29, 2024
">December 29, 2024
ಪ್ರಮುಖ ದಿನಾಂಕ
ಡಿಸೆಂಬರ್ 28 ರಂದು ಅರ್ಜಿ ಪ್ರತಿ ಬಿಡುಗಡೆ ಮಾಡಲಾಗಿದ್ದು ಇಲ್ಲಿಂದ 21 ದಿನಗಳ ಒಳಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ