newsfirstkannada.com

‘ಸೈಬರ್‌ ಖದೀಮರ ಮಟ್ಟ ಹಾಕಲು ಕರ್ನಾಟಕ ಪೊಲೀಸ್ ದಿಟ್ಟ ಕ್ರಮ’- ಡಾ. ಅಲೋಕ್ ಮೋಹನ್

Share :

Published February 29, 2024 at 2:16pm

Update February 29, 2024 at 2:17pm

  ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಮಾಹಿತಿ

  ಸೈಬರ್ ಅಪರಾಧಿಗಳಿಗೂ ವಂಚನೆ ಮಾಡುವ ಅವಕಾಶಗಳು ಹೆಚ್ಚಾಗಿದೆ

  ಡಿಜಿಟಲ್ ನೆಟ್‌ವರ್ಕ್‌ ಹಾಗೂ ಡಾಟಾಗಳಿಗೂ ಕನ್ನ ಹಾಕುತ್ತಿದ್ದಾರೆ

ಬೆಂಗಳೂರು: ಪ್ರತಿದಿನ ನಾವೆಲ್ಲಾ ಟೆಕ್ನಾಲಜಿ ಮೇಲೆ ಹೆಚ್ಚು, ಹೆಚ್ಚು ಅವಲಂಬನೆ ಆಗಿದ್ದೇವೆ. ಇದು ಸೈಬರ್ ಅಪರಾಧಿಗಳಿಗೆ ವಂಚನೆ ಮಾಡಲು ಹೆಚ್ಚು ಸಹಕಾರಿ ಆಗಿದೆ. ಕಳೆದ 3 ವರ್ಷದಲ್ಲಿ ಕರ್ನಾಟಕದಲ್ಲೂ ಸೈಬರ್​ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕ ಪೊಲೀಸ್ ಇಲಾಖೆ ಸೈಬರ್ ಕ್ರಿಮಿನಲ್ಸ್‌ಗಳನ್ನು ಮಟ್ಟ ಹಾಕಲು ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಹೇಳಿದ್ದಾರೆ.

ನ್ಯೂಸ್ ಫಸ್ಟ್ ವತಿಯಿಂದ ನಡೆಯುತ್ತಿರುವ ಸೈಬರ್ ಕ್ರೈಮ್ಸ್‌ ಕಾನ್​​ಕ್ಲೇವ್ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಅವರು ಭಾಗಿಯಾಗಿದ್ದರು. ಸೈಬರ್ ಕ್ರೈಮ್ ಮತ್ತು ಕರ್ನಾಟಕ ಪೊಲೀಸ್ ವಿಷಯದ ಕುರಿತು ಡಾ.ಅಲೋಕ್ ಮೋಹನ್ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.

ಇದನ್ನೂ ಓದಿ: ನ್ಯೂಸ್​ಫಸ್ಟ್​​ ಸೈಬರ್​ ಕಾನ್​ಕ್ಲೇವ್​​.. ಬ್ಯಾಂಕ್​​ & ಸ್ಟಾರ್ಟಪ್​ ಕಂಪನಿಗಳಿಗೆ ಇರೋ ಥ್ರೆಟ್​ ಏನು?

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲೂ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಟೆಕ್ನಾಲಜಿ ಮೇಲೆ ಅವಲಂಬನೆ ಹೆಚ್ಚಾದಂತೆ ಸೈಬರ್ ಅಪರಾಧಿಗಳಿಗೂ ವಂಚನೆ ಮಾಡುವ ಅವಕಾಶಗಳು ಹೆಚ್ಚಾಗುವಂತೆ ಮಾಡಿದೆ. ಸೈಬರ್ ಕ್ರಿಮಿನಲ್ಸ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಒಂದು ಸವಾಲು ಆಗಿದೆ. ಸೈಬರ್ ಅಪರಾಧಿಗಳು ಹ್ಯಾಕಿಂಗ್ ಟೆಕ್ನಿಕ್‌ಗಳನ್ನ ಬಳಸುವ ಮೂಲಕ ಡಿಜಿಟಲ್ ನೆಟ್‌ವರ್ಕ್‌ ಹಾಗೂ ಡಾಟಾಗಳಿಗೂ ಕನ್ನ ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ.

ಕರ್ನಾಟಕ ಪೊಲೀಸ್ ಇಲಾಖೆ ಸಾಕಷ್ಟು ಹೈಪ್ರೊಫೈಲ್ ಕೇಸ್‌ಗಳನ್ನ ಬಗೆಹರಿಸಿದೆ. ವಿಶೇಷವಾಗಿ ಸೈಬರ್ ಪ್ರಕರಣಗಳನ್ನು ಬಗೆಹರಿಸಲು 31 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಸೈಬರ್ ಅಪರಾಧಗಳ ಬಗ್ಗೆ ಸಾವರ್ಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಾಗೃತಿ ಜೊತೆಗೆ ಸೈಬರ್ ಕ್ರಿಮಿನಲ್ಸ್‌ಗಳ ವಿರುದ್ಧ ಕಾನೂನು ಜಾರಿಗೊಳಿಸಲಾಗಿದೆ ಎಂದು ಡಾ.ಅಲೋಕ್ ಮೋಹನ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸೈಬರ್‌ ಖದೀಮರ ಮಟ್ಟ ಹಾಕಲು ಕರ್ನಾಟಕ ಪೊಲೀಸ್ ದಿಟ್ಟ ಕ್ರಮ’- ಡಾ. ಅಲೋಕ್ ಮೋಹನ್

https://newsfirstlive.com/wp-content/uploads/2024/02/News-First-Cyber-Conclave.jpg

Load More