/newsfirstlive-kannada/media/post_attachments/wp-content/uploads/2025/06/AIR_INDIA_BOY_VIDEO_2.jpg)
ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ ಬಳಿಕ ಡಿಜಿಸಿಎ, ಏರ್ ಇಂಡಿಯಾದ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದೆ. ವಿಮಾನ ಸಿಬ್ಬಂದಿಯ ಶೆಡ್ಯೂಲ್ಗೆ ಸಂಬಂಧಿಸಿದಂತೆ ಗಂಭೀರ ಮತ್ತು ಪುನರಾವರ್ತಿತ ನಿಯಮ ಉಲಂಘನೆಗಾಗಿ ಮೂವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆದೇಶಿಸಿದೆ.
ಏವಿಯೇಷನ್ ರಿಸೋರ್ಸ್ ಮ್ಯಾನೇಜ್ ಮೆಂಟ್ ಸಿಸ್ಟಮ್ನ ಪರಿಶೀಲನೆ ವೇಳೆ ನಿಯಮ ಉಲಂಘನೆಯೂ ಬೆಳಕಿಗೆ ಬಂದಿದೆ. ವಿಮಾನದ ಕ್ರ್ಯೂಗಳ ಶೆಡ್ಯೂಲಿಂಗ್ನಲ್ಲಿ ವ್ಯವಸ್ಥಿತ ವೈಫಲ್ಯವಾಗಿದೆ ಎಂದು ಡಿಜಿಸಿಎ ಹೇಳಿದೆ. ವಿಮಾನಗಳ ನಿರ್ವಹಣೆಯ ಲೋಪಕ್ಕೆ ಈ ಮೂವರು ನೇರವಾಗಿ ಕಾರಣ ಎಂದು ಡಿಜಿಸಿಎ ಹೇಳಿದೆ. ಜೂನ್ 20 ರಂದು ಅಧಿಕೃತವಾಗಿ ಡಿಜಿಸಿಎ ಈ ಬಗ್ಗೆ ಆದೇಶ ಹೊರಡಿಸಿದೆ.
ಏರ್ ಇಂಡಿಯಾದ ಡಿವಿಷನಲ್ ವೈಸ್ ಪ್ರೆಸಿಡೆಂಟ್ ಚೂರಾ ಸಿಂಗ್, ಚೀಫ್ ಮ್ಯಾನೇಜರ್ ಇನ್ ಡೈರೆಕ್ಟರೇಟ್ ಆಫ್ ಅಪರೇಷನ್‌ನ ಪಿಂಕಿ ಮಿತ್ತಲ್, ಕ್ರೂ ಶೆಡ್ಯೂಲಿಂಗ್ - ಪ್ಲ್ಯಾನಿಂಗ್‌ನ ಪಾಯಲ್ ಅರೋರಾ ಅವರುಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಏರ್ ಇಂಡಿಯಾಗೆ ಡಿಜಿಸಿಎ ನಿರ್ದೇಶನ ನೀಡಿದೆ.
ಇದನ್ನೂ ಓದಿ: WTC ಟ್ರೋಫಿ ಗೆಲ್ಲಿಸಿಕೊಟ್ಟ ಆಫ್ರಿಕಾ ಕ್ಯಾಪ್ಟನ್ಗೆ ಬಿಗ್ ಶಾಕ್.. ಟೆಸ್ಟ್ ಸರಣಿಯಿಂದ ಹೊರಕ್ಕೆ
/newsfirstlive-kannada/media/post_attachments/wp-content/uploads/2025/06/AIR_INDIA_HOSTEL.jpg)
ಈ ಮೂವರು ಗಂಭೀರ ಮತ್ತು ಪುನರಾವರ್ತಿತ ತಪ್ಪುಗಳಿಗೆ ಕಾರಣ. ಅನಧಿಕೃತ, ನಿಯಮ ಪಾಲಿಸದ ಸಿಬ್ಬಂದಿಯನ್ನು ಜೊತೆಯಾಗಿರಲು ಅವಕಾಶ ಕೊಟ್ಟಿದ್ದಾರೆ. ಕಡ್ಡಾಯ ಲೈಸೆನ್ಸಿಂಗ್ ನಿಯಮದ ಉಲಂಘನೆಯಾಗಿದೆ. ಶೆಡ್ಯೂಲಿಂಗ್ ಪ್ರೊಟೋಕಾಲ್ ನಲ್ಲಿ ವ್ಯವಸ್ಥಿತ ವೈಫಲ್ಯವಾಗಿದೆ. ಹೀಗಾಗಿ ಈ ಮೂವರು ಹಿರಿಯ ಅಧಿಕಾರಿಗಳನ್ನು ಸಿಬ್ಬಂದಿಯ ಶೆಡ್ಯೂಲಿಂಗ್‌ಗೆ ಸಂಬಂಧಿಸಿದ ಎಲ್ಲ ಹೊಣೆ ಮತ್ತು ಜವಾಬ್ದಾರಿಗಳಿಂದ ಮುಕ್ತಗೊಳಿಸಬೇಕು ಎಂದು ಸ್ಪಷ್ಟವಾಗಿ ತನ್ನ ಆದೇಶದಲ್ಲಿ ಹೇಳಿದೆ. ಮೂವರ ವಿರುದ್ಧ ಅಂತರಿಕ ಶಿಸ್ತುಕ್ರಮವನ್ನು ವಿಳಂಬ ಇಲ್ಲದೆ ಕೈಗೊಳ್ಳಬೇಕು. ಇದರ ವರದಿಯನ್ನು 10 ದಿನದೊಳಗೆ ಡಿಜಿಸಿಎಗೆ ಸಲ್ಲಿಸಬೇಕು ಎಂದು ಡಿಜಿಸಿಎ ತನ್ನ ಆದೇಶದಲ್ಲಿ ಏರ್ ಇಂಡಿಯಾಗೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 168 ಪ್ರಯಾಣಿಕರಿದ್ದ ಇಂಡಿಯೋ ವಿಮಾನದಿಂದ MAYDAY ಕಾಲ್.. ಮುಂದೇನಾಯ್ತು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us