/newsfirstlive-kannada/media/post_attachments/wp-content/uploads/2025/07/dharmasthala-case6.jpg)
ಮಂಗಳೂರು: ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರೋ ಧರ್ಮಸ್ಥಳ ಬುರುಡೆ ರಹಸ್ಯ ತನಿಖೆ ಚುರುಕು ಪಡೆದಿದೆ. ಅನಾಮಿಕನ ವಿಚಾರಣೆ ಬಳಿಕ ಆತ ಹೇಳಿದ ಸ್ಥಳಗಳಲ್ಲಿ ಹಿಟಾಚಿ ಹಾಗೂ ಕಾರ್ಮಿಕರು ಮಣ್ಣು ಅಗೆದು ಅಸ್ಥಿಪಂಜರಕ್ಕಾಗಿ ತಲಾಶ್ ಮಾಡ್ತಿದ್ದಾರೆ. ಆದ್ರೆ, ನಿನ್ನೆ ಒಂದು ಹಾಗೂ ಇಂದು 4 ಕಡೆ ಅಗೆದ್ರೂ ಯಾವುದೇ ಕಳೇಬರ ಸಿಕ್ಕಿರಲಿಲ್ಲ.
/newsfirstlive-kannada/media/post_attachments/wp-content/uploads/2025/07/dharmasthala-case2.jpg)
ಇದಾದ ಬಳಿಕ ಇಂದು ಧರ್ಮಸ್ಥಳದ ನೇತ್ರಾವತಿ ತಟದಲ್ಲಿ 1, 2,3 ನೇ ಪಾಯಿಂಟ್‌ನಲ್ಲಿ ಮಣ್ಣು ಅಗೆಯಲಾಗಿತ್ತು. ಆದರೆ, ಮಣ್ಣು ಅಗೆಯುವಾಗ ಪಾಯಿಂಟ್-1ರಲ್ಲಿ ಒಂದು ಪ್ಯಾನ್ ಕಾರ್ಡ್​, ಡೆಬಿಟ್ ಕಾರ್ಡ್ ಹಾಗೂ ಕೆಂಪು ಬ್ಲೌಸ್​ ಪತ್ತೆಯಾಗಿದೆ ಎಂದು ವಕೀಲ ಮಂಜುನಾಥ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿನ್ನೆ ಪಾಯಿಂಟ್1ರ ಸ್ಥಳದಲ್ಲಿ ಲಕ್ಷ್ಮೀ ಎಂಬ ಮಹಿಳೆಯ ಪ್ಯಾನ್ ಕಾರ್ಡ್​ ಪತ್ತೆಯಾಗಿದೆ. ಅಲ್ಲದೇ ಪುರುಷನ ಡೆಬಿಟ್ ಕಾರ್ಡ್​ಗಳು ಪತ್ತೆಯಾಗಿವೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ 20 ಕಾರ್ಮಿಕರಿಂದ ದೂರುದಾರನ ನಿರ್ದೇಶನದಂತೆ ಅಗೆಯೋ ಕಾರ್ಯಾಚರಣೆ ಮುಂದುವರಿದಿದೆ.
ಈ ಕೇಸ್​ ಬಗ್ಗೆ ಧರ್ಮಸ್ಥಳದಲ್ಲಿ SIT ಮುಖ್ಯಸ್ಥ ಪ್ರಣವ್ ಮೊಹಾಂತಿ ಮಾತಾಡಿದ್ದಾರೆ. ಬುರುಡೆ ಮಹಜರು ಕೂಡ ಮುಗಿಸಿದ್ದೇವೆ. ತನಿಖೆ ಪ್ರಾರಂಭಿಕ ಹಂತದಲ್ಲಿ ಇದೆ ಎಂದು ಹೇಳಿದ್ದಾರೆ. ಸದ್ಯ SIT ಅಧಿಕಾರಿಗಳು ಇಂದಿನ ಕಾರ್ಯಾಚರಣೆ ಮುಗಿಸಿದ್ದಾರೆ. ಐದು ಸ್ಥಳಗಳಲ್ಲೂ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ. ನಾಳೆ ಇನ್ನುಳಿದ ಎಂಟು ಪಾಯಿಂಟ್​ಗಳ ಶೋಧ ಕಾರ್ಯ ನಡೆಸಲಿದ್ದಾರೆ. ಅನಾಮಧೇಯ ವ್ಯಕ್ತಿಯಿಂದ ಮತ್ತೆ ನಾಳೆಯೂ ಕಾರ್ಯಾಚರಣೆ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us