ನಾಳೆ ಒಂದೇ ದಿನ ಅಲ್ಲ, ಎಷ್ಟು ದಿನ ಡ್ರಿಲ್..? ಯುದ್ಧ ಕವಾಯತು ಬಗ್ಗೆ ಅಧಿಕಾರಿ ನೀಡಿದ ಮಾಹಿತಿ ಏನು..?

author-image
Ganesh
Updated On
ನಾಳೆ ಒಂದೇ ದಿನ ಅಲ್ಲ, ಎಷ್ಟು ದಿನ ಡ್ರಿಲ್..? ಯುದ್ಧ ಕವಾಯತು ಬಗ್ಗೆ ಅಧಿಕಾರಿ ನೀಡಿದ ಮಾಹಿತಿ ಏನು..?
Advertisment
  • ಕರ್ನಾಟಕದ ಮೂರು ಭಾಗದಲ್ಲಿ ಮಾಕ್ ಡ್ರಿಲ್
  • ರಾಯಚೂರು, ಬೆಂಗಳೂರು ಹಾಗೂ ಕಾರವಾರ
  • ಡಿಜಿಪಿ ಪ್ರಸಾದ್ ಕುಮಾರ್ ಠಾಕೂರ್ ಮಾಹಿತಿ

ದೇಶದ 259 ಸ್ಥಳಗಳಲ್ಲಿ ನಾಳೆ ಯುದ್ಧ ಗ್ರಿಲ್ ನಡೆಯಲಿದೆ. ಪಾಕ್ ವಿರುದ್ಧ ಯುದ್ಧದ ಸಿದ್ಧತೆಯಲ್ಲಿರುವ ಭಾರತ, ಸುರಕ್ಷಿತ ಕ್ರಮವಾಗಿ ಬೇಕಾಗಿರುವ ಎಲ್ಲಾ ತಯಾರಿಗಳನ್ನೂ ಮಾಡಿಕೊಳ್ತಿದೆ. ಅಂತೆಯೇ ನಾಳೆ ದೇಶದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಯುದ್ಧ ತಾಲೀಮು ನಡೆಯಲಿದೆ. ಅಂತೆಯೇ ಕರ್ನಾಟಕದಲ್ಲೂ ಮೂರು ಪ್ರದೇಶಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಈ ಮಾಕ್​ ಡ್ರಿಲ್ ಹೇಗೆ ನಡೆಯಲಿದೆ? ಎಷ್ಟು ಗಂಟೆಗೆ ನಡೆಯಲಿದೆ. ಯಾವ ರೀತಿ ನಡೆಯಲಿದೆ ಅನ್ನೋದ್ರ ಬಗ್ಗೆ ಅಗ್ನಿ ಶಾಮಕ ಮತ್ತು ತುರ್ತು ವಿಭಾಗದ ಡಿಜಿಪಿ ಪ್ರಸಾದ್ ಕುಮಾರ್ ಠಾಕೂರ್​ ಅವರು ಮಾಹಿತಿ ನೀಡಿದ್ದಾರೆ.

ಹೇಗೆ ನಡೆಯುತ್ತದೆ..?

ಬೆಂಗಳೂರು ನಗರ, ರಾಯಚೂರು ಹಾಗೂ ಕಾರವಾರದಲ್ಲಿ ಮಾಕ್ ಗ್ರಿಲ್ ನಡೆಯಲಿದೆ. ನಾಳೆ ಮಧ್ಯಾಹ್ನ 4 ಗಂಟೆಯಿಂದ ಮಾಕ್ ಗ್ರಿಲ್ ಶುರುವಾಗಲಿದೆ. ಬೆಂಗಳೂರು ಬಗ್ಗೆ ಹೇಳಬೇಕು ಅಂದರೆ ಸುಮಾರು 4000 ಮಂದಿ ಸಿವಿಲ್ ಡಿಫೆನ್ಸ್​ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ. ಇದರ ಹೊರತಾಗಿ ಒಂದು ಸಾವಿರ ಮಂದಿ ವಿವಿಧ ಜಿಲ್ಲೆಯಲ್ಲಿ ಇದ್ದಾರೆ. ಅವರೆಲ್ಲರೂ ನಾಳೆಯ ಯುದ್ಧ ಕವಾಯತ್​​ನಲ್ಲಿ ಭಾಗಿಯಾಗಲಿದ್ದಾರೆ. ಯಾರೆಲ್ಲ ಏನೆಲ್ಲ ತರಬೇತಿ ಪಡೆದುಕೊಂಡಿದ್ದಾರೋ, ಅವರೆಲ್ಲರೂ ಬಂದು ತುರ್ತು ಸಂದರ್ಭದಲ್ಲಿ ನಾವು ಹೇಗೆ ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಅನ್ನೋದರ ಬಗ್ಗೆ ಮಾಹಿತಿ ನೀಡುತ್ತೇವೆ. ಇದು ಸುಮಾರು ಒಂದು ವಾರಗಳ ಕಾಲ ಈ ಗ್ರಿಲ್ ನಡೆಯಲಿದೆ.

ಜನರ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ರಕ್ಷಣೆ ನೀಡುವುದು. ವೈದ್ಯಕೀಯ ಸಂದರ್ಭಗಳಿಗೆ ತುರ್ತಾಗಿ ಸ್ಪಂದಿಸುವುದು ಗ್ರಿಲ್ ಉದ್ದೇಶವಾಗಿದೆ. ಇದರಲ್ಲಿ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ಸಿವಿಲ್ ಡಿಫೆನ್ಸ್​ ಸರ್ವೀಸ್ ಹಾಗೂ ಸಿಆರ್​ಪಿಎಫ್​ ಪಡೆ, ಸಿವಿಲ್ ಪೊಲೀಸ್ ಅಧಿಕಾರಿಗಳು ಎಲ್ಲರೂ ಭಾಗಿಯಾಗಲಿದ್ದಾರೆ ಅಂತಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಂಕರ್​​ಗಳಲ್ಲಿ ಪರಮಾಣು ದಾಳಿಯಿಂದ ರಕ್ಷಣೆ ಸಿಗುತ್ತಾ? ಗಡಿಯಲ್ಲಿರೋ ಬಂಕರ್​​ಗಳು ಎಷ್ಟು ಸೇಫ್..?

ಯುದ್ಧ ಸೈರನ್ ನಾಲ್ಕು ಗಂಟೆಯಿಂದ ಆರಂಭ ಆಗಲಿದೆ. ಅದು ರಾತ್ರಿವರೆಗೂ ನಡೆಯಲಿದೆ. ಮಧ್ಯರಾತ್ರಿ ಕಂಟಿನ್ಯೂ ಆಗಲ್ಲ. ಆದರೆ, ಜನರಿಗೆ ತಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು. ಅದಕ್ಕೆ ಏನೆಲ್ಲ ತರಬೇತಿ ನೀಡಬೇಕು ಅನ್ನೋದೇ ನಮ್ಮ ಉದ್ದೇಶ. ಹೀಗಾಗಿ ಅದಕ್ಕಾಗಿ ನಾವು 7 ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತಿದ್ದೇವೆ. 7 ದಿನಗಳ ನಂತರ ಕಂಪ್ಲೀಟ್ ಪ್ಲಾನ್ ಆಗಲಿದೆ ಎಂದು ತಿಳಿಸಿದ್ದಾರೆ.

ಸೂಚನೆ ಹೇಗಿರುತ್ತದೆ..?

ಒಟ್ಟು ಮೂರು ರೀತಿಯಲ್ಲಿ ಸೈರನ್ ಕೇಳಿಸುತ್ತದೆ. ಮೊದಲ ಸೈರನ್ ಜನರಿಗೆ ಅಲರ್ಟ್ ಕೊಡುತ್ತದೆ. ಅಟ್ಯಾಕ್ ನಡೆಯುವ ಸ್ಥಳದ ಬಗ್ಗೆ ಜನರಿಗೆ ಸೂಚನೆ ನೀಡಲಾಗುತ್ತದೆ. ಎರಡನೇ ಸೈರನ್ ಅಟ್ಯಾಕ್ ಟೈಂನಲ್ಲಿ ಆಗಲಿದೆ. ಮೂರನೇ ಸೈರನ್ ಪರಿಸ್ಥಿತಿ ಮತ್ತೆ ನಾರ್ಮಲ್​ಗೆ ಬಂದಾಗ ಆಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಿದ್ರೆಯಿಂದ ಬೆಚ್ಚಿಬಿದ್ದಂತಾದ ಪಾಕಿಸ್ತಾನ.. ಅಯ್ಯಯ್ಯೋ, ಯುದ್ಧದ ಆತಂಕದಲ್ಲಿ ಏನ್ಮಾಡ್ತಿದ್ದಾರೆ ನೋಡಿ..!​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment