Advertisment

Dhananjay Dhanyatha Wedding; ಚಾಮುಂಡಿ ದೇವಿ ಗುಡಿಯಂತೆ ಕಲ್ಯಾಣ ಮಂಟಪ, ಹೇಗಿದೆ ಸಿದ್ಧತೆ?

author-image
Bheemappa
Updated On
Dhananjay Dhanyatha Wedding; ಚಾಮುಂಡಿ ದೇವಿ ಗುಡಿಯಂತೆ ಕಲ್ಯಾಣ ಮಂಟಪ, ಹೇಗಿದೆ ಸಿದ್ಧತೆ?
Advertisment
  • ಮದುವೆಯಲ್ಲಿ ಭಾಗಿಯಾಗಲಿರುವ ಚಿತ್ರರಂಗದ, ರಾಜಕೀಯ ಗಣ್ಯರು
  • ವೇಗದಿಂದ ನಡೆಯುತ್ತಿರುವ ಕಲ್ಯಾಣ ಮಂಟಪದ ಕೆಲಸ ಕಾರ್ಯಗಳು
  • ಧನಂಜಯ-ಧನ್ಯತಾ ವಿವಾಹ ಸಂಭ್ರಮದ ಇಂದಿನ ಕಾರ್ಯಕ್ರಮಗಳೇನು?

ಮೈಸೂರು: ಇಂದು ಮತ್ತು ನಾಳೆ ಸ್ಯಾಂಡಲ್​ವುಡ್​ನ ಸ್ಟಾರ್ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ಮದುವೆ ಅದ್ಧೂರಿಯಾಗಿ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಸಕಲ ಸಿದ್ಧತೆ ಜೋರಾಗಿ ನಡೆಯುತ್ತಿದ್ದು ಚಾಮುಂಡಿದೇವಿಯ ದೇವಾಲಯದ ಮಾದರಿ ಜೋಡಿ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದೆ.

Advertisment

publive-image

ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹ ಸಮಾರಂಭಕ್ಕೆ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಚಿತ್ರರಂಗದ ಗಣ್ಯರು, ರಾಜಕೀಯ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನರು ಮದುವೆಗೆ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲೇ ವೇದಿಕೆ, ಮಂಟಪ, ಊಟದ ಹಾಲ್​ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಇದೆಲ್ಲದರ ಜವಾಬ್ದಾರಿಯನ್ನು ಸಹನಟ ಅರುಣ್ ಸಾಗರ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

publive-image

ಧನಂಜಯ ಅವರ ಮದುವೆ ಇರುವುದರಿಂದ ಕಳೆದ ಎರಡ್ಮೂರು ದಿನಗಳಿಂದ ವಸ್ತು ಸಂಗ್ರಹಾಲಯದ ಮೈದಾನದಲ್ಲಿ ಕೆಲಸಗಳು ವೇಗದಿಂದ ನಡೆದಿವೆ. ಚಾಮುಂಡಿಬೆಟ್ಟದ ಚಾಮುಂಡಿದೇವಿಯ ದೇವಾಲಯದ ರೂಪದಲ್ಲಿ ಜೋಡಿ ಕಲ್ಯಾಣ ಮಂಟಪವನ್ನು ರೋಮನ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕಂಬಗಳು, ಶಿಲೆ, ಗೋಪುರದ ಒಳಗಿನ ವೈಭವ ಎಲ್ಲವೂ ವಿಭಿನ್ನವಾಗಿ ಕಾಣಲಿದೆ. ಹೀಗಾಗಿಯೇ ಪ್ರತಿಯೊಂದನ್ನು ಸೂಕ್ಷ್ಮವಾಗಿ ತಯಾರು ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಸೆಟ್​ ಕೂಡಿಸಲು k್ರೇನ್ ಬಳಕೆ ಮಾಡಲಾಗುತ್ತಿದೆ. ಬಗೆ ಬಗೆಯ ಹೂಗುಚ್ಛಗಳಿಂದ ಸಿಂಗರಿಸಲಾಗುತ್ತಿದೆ. ಮಂಟಪದ ಕಂಬಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್​ನಿಂದ ತಯಾರಿಸಲಾಗಿದೆ. ಹಳೆ ಮೈಸೂರು ಹಾಗೂ ಹೊಯ್ಸಳ ಶೈಲಿಯಲ್ಲಿ ಮದುವೆ ಮಂಟಪ ಇದೆ.

ಇದನ್ನೂ ಓದಿ: Photos; ಡಾಲಿ ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಸಂಭ್ರಮ.. ಇಂದು ಅದ್ಧೂರಿ ಆರತಕ್ಷತೆ

Advertisment

publive-image

ಧಾರ್ಮಿಕ ದೇವಾಲಯ ಮಂಟಪದ ಅಂಗಳದಲ್ಲಿ ಗಟ್ಟಿಮೇಳ ನಡೆಯಲಿದೆ. ಒಂದು ವೇದಿಕೆಯಲ್ಲಿ ಮದುವೆ ಆರತಕ್ಷತೆ ನಡೆದರೆ ಇನ್ನೊಂದು ಸ್ಟೇಜ್​ನಲ್ಲಿ ಧಾರಾ ಮುಹೂರ್ತ ನಡೆಯುತ್ತದೆ. ಧಾರಾ ಮುಹೂರ್ತದ ಸ್ಥಳವನ್ನು ದೇಗುಲದಂತೆ ನಿರ್ಮಿಸಲಾಗಿದ್ದು, ಆರತಕ್ಷತೆಯ ಸ್ಥಳವನ್ನು ಪ್ಯಾಲೇಸ್ ಥೀಮ್​ನಲ್ಲಿ ನಿರ್ಮಾಣ ಮಾಡಲಾಗಿದೆ. ಈ ಎಲ್ಲ ನಿರ್ಮಾಣದ ಜವಾಬ್ದಾರಿಯನ್ನು ಕಲಾ ನಿರ್ದೇಶಕ ಅರುಣ್ ಸಾಗರ ಹೊತ್ತುಕೊಂಡಿದ್ದಾರೆ.

ಇಂದಿನ ಮದುವೆ ಕಾರ್ಯಕ್ರಮಗಳು ಏನು?

  • ಇಂದು ಗಂಗೆ ತರುವ ಪೂಜೆ
  • ವಧು- ವರರ ಪೋಷಕರ ವಾಗ್ದಾನ ಶಾಸ್ತ್ರ
  • ಬಳೆ ಶಾಸ್ತ್ರ- ಪ್ರಥಮ ನಿರೀಕ್ಷಣೆ ಶಾಸ್ತ್ರಗಳು
  • ಸಂಜೆ ಆರತಕ್ಷತೆ ಸಮಾರಂಭ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment