/newsfirstlive-kannada/media/post_attachments/wp-content/uploads/2025/02/DAALI_DHANANJAYA_5.jpg)
ಮೈಸೂರು: ಡಾಲಿ ಧನಂಜಯ ಹಾಗೂ ಧನ್ಯತಾ ಅವರ ಮದುವೆ ಪೂರ್ವದ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿವೆ. ಇಂದು ಸಂಜೆ ನಡೆಯುವ ಸಡಗರದ ಆರತಕ್ಷತೆ ಚಿತ್ರರಂಗದ ಗಣ್ಯರು, ರಾಜಕೀಯ ಕ್ಷೇತ್ರದ ಗಣ್ಯರು ಸೇರಿ ಅಭಿಮಾನಿಗಳು ಕೂಡ ಭಾಗಿ ಆಗಲಿದ್ದಾರೆ. ಇಂತಹ ಸಡಗರದ ಮಧ್ಯಯೇ ಡಾಲಿ ಧನಂಜಯ ಅವರ ತಂದೆ ಸ್ವಾಮಿ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ನ್ಯೂಸ್​ಫಸ್ಟ್​ ಜೊತೆ ಧನಂಜಯ ಅವರ ತಂದೆ ಸ್ವಾಮಿ ಅವರು ಮಾತನಾಡಿ, ಇದು ಶುಭವಿವಾಹ. ಮದುವೆಯ ಮೊದಲ ದಿನದ ಶಾಸ್ತ್ರ ಇಂದು ನಡೆಯುತ್ತಿವೆ. ಮೊದಲು ಗಂಗೆ ಪೂಜೆ, ಕಳಸ ಸ್ಥಾಪನೆ, ವಾಗ್ದಾನ ಶಾಸ್ತ್ರ ಎಂದು ನಾವು ತಾಂಬೂಲ ಬದಲಾಯಿಸಿಕೊಳ್ಳುತ್ತೇವೆ. ಬಳೆ ಶಾಸ್ತ್ರ, ವಧು-ವರರ ಶಾಸ್ತ್ರ ಈ ಎಲ್ಲ ಮುಗಿದ ಮೇಲೆ ಸಂಜೆ ರಿಸೆಪ್ಷನ್ ಇದೆ. ನಾಳೆ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Dhananjay Dhanyatha Wedding; ಚಾಮುಂಡಿ ದೇವಿ ಗುಡಿಯಂತೆ ಕಲ್ಯಾಣ ಮಂಟಪ, ಹೇಗಿದೆ ಸಿದ್ಧತೆ?
/newsfirstlive-kannada/media/post_attachments/wp-content/uploads/2025/02/DAALI_DHANANJAYA_3.jpg)
ವಿದ್ಯಾಭ್ಯಾಸದಲ್ಲಿ ಧನಂಜಯನನ್ನು ಡಾಕ್ಟರ್ ಮಾಡಿಸಬೇಕು ಎಂದುಕೊಂಡಿದ್ದೆ. ಅದೊಂದು ಬಹಳ ಆಸೆ ಇತ್ತು ನನಗೆ. ಕೌನ್ಸಿಲಿಂಗ್​ಗೆ ಹೋದಾಗಲೂ ಕೂಡ ಹಣ ಎಷ್ಟಾದರೂ ಹೋಗಲಿ ನೀನು ಮೆಡಿಕಲ್ ಸೀಟ್ ತಗೋ ಎಂದಿದ್ದೆ. ಆದರೆ ಇಂಜಿನಿಯರ್ ಬೇಕು ಎಂದು ತಗೊಂಡ. ಆ ಮೇಲೆ ಓದೋದು ಎಲ್ಲ ಬಿಟ್ಟ. ಮುಂದೆ ಸಿನಿಮಾ ಅಂತ ಹೋಗಿರುವುದು ಎಲ್ಲ ನಿಮಗೆಲ್ಲಾ ಗೊತ್ತಿರುವ ವಿಚಾರವೇ ಎಂದು ಹೇಳಿದ್ದಾರೆ.
ಧನಂಜಯ ಡಾಕ್ಟರ್ ಆಗಬೇಕು ಎಂದು ನಾನು ಆಸೆ ಪಟ್ಟಿದ್ದೆ. ಆದರೆ ಡಾಕ್ಟರ್ ಸೊಸೆಯನ್ನು ತಂದುಕೊಟ್ಟಿದ್ದಾನೆ. ಇದೊಂದು ದೊಡ್ಡ ಖುಷಿ ಇದೆ. ಧನಂಜಯಗೆ ನಮ್ಮವರು, ತಮ್ಮವರು ಎನ್ನುವುದು ಅಭಿಮಾನ ಜಾಸ್ತಿ ಇದೆ. ಮನೆಯಲ್ಲೂ ಅಭಿಮಾನಿಗಳನ್ನ ದೇವರು ಅಂತಾನೇ ಕರಿಯುತ್ತಾನೆ. ಸಿಟ್ಟು ಇದೆ. ಆದರೆ ಸಾಫ್ಟ್​ ನೇಚರ್ ಇದೆ. ನಮ್ಮೂರು ಶಾಲೆ, ಧನಂಜಯ ಓದಿರುವುದಲ್ಲ. ಆ ಶಾಲೆಯಲ್ಲಿ 80 ರಿಂದ 100 ಮಕ್ಕಳು ಇವೆ. ಆ ಶಾಲೆಯನ್ನು ಜೀರ್ಣೋದ್ಧಾರ ಮಾಡಿದ್ದಾನೆ. ಊರಲ್ಲಿ ಅರಳೆ ಕಟ್ಟೆಯನ್ನು ಚೆನ್ನಾಗಿ ನಿರ್ಮಾಣ ಮಾಡಿ ಕೊಟ್ಟಿದ್ದಾನೆ. ನಮ್ಮ ಆಸೆ ಎಲ್ಲ ಮಗ ಈಡೇರಿಸಿದ್ದಾನೆ. ಮದುವೆ ಈ ರೀತಿ ನಡೆಯುತ್ತಿರುವುದು ತುಂಬಾ ಖುಷಿ ಇದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us