‘ಈ ತರಹದ ಮದುವೆ ಎಕ್ಸ್​ಪೆಕ್ಟ್​ ಮಾಡಿರಲಿಲ್ಲ’ -ಧನಂಜಯ ಮದುವೆ ಕುರಿತು ಅಕ್ಕನ ಮಾತುಗಳು?

author-image
Bheemappa
Updated On
‘ಈ ತರಹದ ಮದುವೆ ಎಕ್ಸ್​ಪೆಕ್ಟ್​ ಮಾಡಿರಲಿಲ್ಲ’ -ಧನಂಜಯ ಮದುವೆ ಕುರಿತು ಅಕ್ಕನ ಮಾತುಗಳು?
Advertisment
  • ನಮ್ಮ ರೀತಿಯಲ್ಲೇ ಬೆಳೆದಿರುವ ಹುಡುಗಿ ಬೇಕು ಎನ್ನುವುದಿತ್ತು
  • ತಮ್ಮನ ಮದುವೆ ಕುರಿತು ಸಿಂಪಲ್ ಆಗಿ ಮಾತನಾಡಿದ ಅಕ್ಕ
  • ಸಿಂಪಲ್ ಆಗಿ, ತಮ್ಮ ಧನಂಜಯಗೆ ತಕ್ಕನಾದ ಜೋಡಿ ಸಿಕ್ಕಿದೆ

ಮೈಸೂರು: ಸ್ಯಾಂಡಲ್​ವುಡ್​ನಲ್ಲಿ ಸದ್ಯ ಮದುವೆ ಸೀಸನ್ ಜೋರಾಗಿ ಇದೆ. ಮೊನ್ನೆ ಮೊನ್ನೇ ಅಷ್ಟೇ ಹಿರಿಯ ನಟಿ ಜಯಮಾಲ ಅವರ ಮಗಳ ಮದುವೆ ಅದ್ಧೂರಿಯಾಗಿ ನಡೆಯಿತು. ರಕ್ಷಿತಾ ಪ್ರೇಮ್ ಅವರ ಸಹೋದರನ ವಿವಾಹ ಕೂಡ ಸಡಗರದಿಂದ ನಡೆಯಿತು. ಇದರ ಬೆನ್ನಲ್ಲೇ ಇಂದು ಮತ್ತು ನಾಳೆ ಡಾಲಿ ಧನಂಜಯ ಅವರ ಮದುವೆ ವಿಜೃಂಭಣೆಯಿಂದ ನಡೆಯುತ್ತಿದೆ. ಸದ್ಯ ಈ ಸಂಬಂಧ ಧನಂಜಯ ಅವರ ಅಕ್ಕ ಖುಷಿ ಹಂಚಿಕೊಂಡಿದ್ದಾರೆ.

ನ್ಯೂಸ್​ಫಸ್ಟ್ ಜೊತೆ ಮಾತನಾಡಿದ ಧನಂಜಯ ಅವರ ಅಕ್ಕ, ಮದುವೆ ನಡೆಯುತ್ತಿರುವುದು ತುಂಬಾ ಖುಷಿ ಇದೆ. ಧನಂಜಯ ಹಾಗೂ ಧನ್ಯತಾ ಇಬ್ಬರ ಜೋಡಿ ಚೆನ್ನಾಗಿದೆ. ಇಬ್ಬರು ಕೂಡ ತುಂಬಾ ಸಾಫ್ಟ್ ಆಗಿದ್ದಾರೆ. ಸಿಂಪಲ್ ಆಗಿ ಅವರಿಗೆ ತಕ್ಕನಾಗೆ ಜೋಡಿ ಆಗಿದೆ. ನನ್ನ ತಮ್ಮ ಏನು ಹೇಳಿಕೊಳ್ಳುತ್ತಿದ್ದ ಅಂತಹ ಹುಡುಗಿಯೇ ಅವನಿಗೆ ಸಿಕ್ಕಿದ್ದಾಳೆ. ತಮ್ಮನನ್ನು ಚೆನ್ನಾಗಿ ನೋಡಿಕೊಂಡು ಹೋಗಬೇಕು ಎಂದು ಇತ್ತು. ಹುಡುಗಿ ನಮ್ಮಂಗೆ ಬೆಳೆದಿರಬೇಕು. ಸಿಂಪಲ್ಲಾಗಿರಬೇಕು, ಕುಟುಂಬಕ್ಕೆ ಅಜೆಸ್ಟ್ ಆಗಬೇಕು ಎಂದು ನಾವೆಲ್ಲಾ ಅಂದುಕೊಳ್ಳುತ್ತಿದ್ದೇವು. ಹಾಗೆಯೇ ಹುಡುಗಿ ಈಗ ಸಿಕ್ಕಿದ್ದಾಳೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಡಾಲಿ ಕಲ್ಯಾಣ; ಸೊಸೆ ಬಗ್ಗೆ ಮುತ್ತಿನಂತ ಮಾತು ಹೇಳಿದ ಧನಂಜಯ ತಂದೆ

publive-image

ಧನಂಜಯದು ಒಳ್ಳೆಯ ಹೃದಯ, ಸಾಫ್ಟ್ ನೇಚರ್. ಫ್ಯಾಮಿಲಿ, ಫ್ರೆಂಡ್ಸ್​, ಅಭಿಮಾನಿಗಳೆಲ್ಲಾ ಸೇರಬೇಕು ಅನ್ನೋದು ಧನಂಜಯನ ಆಸೆ. ಹೀಗಾಗಿಯೇ ಇಷ್ಟೊಂದು ಗ್ರ್ಯಾಂಡ್ ಆಗಿ ಮದುವೆ ಇಟ್ಟುಕೊಂಡಿದ್ದಾನೆ. ಚಿಕ್ಕದರಿಂದ ಓದುವುದರಲ್ಲಿ, ನಾಯಕತ್ವ ಕಟ್ಟೋದರಲ್ಲಿ ಮುಂದೆ ಇರುತ್ತಿದ್ದ. ಎಲ್ಲರಿಗೂ ಪ್ರೀತಿ ಕೊಡುತ್ತಾನೆ. ಧನಂಜಯಗೆ ಈವರೆಗೂ ಕೋಪ ಬಂದಿರೋದು ನಾವು ನೋಡಿಲ್ಲ ಎಂದು ಅಕ್ಕ ಹೇಳಿದ್ದಾರೆ.

ಹೊರಗಡೆ ನೋಡುವಾಗ ಇಷ್ಟೊಂದು ದೊಡ್ಡದಾಗಿ ಮದುವೆ ಆಗುತ್ತಿದೆಯಾ ಅಂದುಕೊಂಡೇವು. ಈ ಥರ ಮದುವೆ ಆಗುತ್ತೆ ಅಂಥ ಎಕ್ಸ್​ಪೆಕ್ಟ್​ ಮಾಡಿರಲಿಲ್ಲ. ಅಷ್ಟೊಂದು ವಿಜೃಂಭಣೆಯಿಂದ ಈ ವಿವಾಹ ಸಮಾರಂಭ ನಡೆಯುತ್ತಿದೆ. ಎಲ್ಲರನ್ನೂ ಕರೆದು, ಈ ಥರದ ಮದುವೆ ಆಗುತ್ತಿದೆನಲ್ಲ ನನ್ನ ತಮ್ಮ ಎನ್ನುವುದು ತುಂಬಾ ಖುಷಿ ಇದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment