/newsfirstlive-kannada/media/post_attachments/wp-content/uploads/2024/11/DHANASHREE_CHAHAL.jpg)
ಟೀಮ್ ಇಂಡಿಯಾ ಕ್ರಿಕೆಟಿಗರ ಜೀವನವೇ ಸರಿಯಿಲ್ವೋ.. ಗ್ರಹಚಾರವೇ ಸರಿಯಿಲ್ವೋ ಗೊತ್ತಾಗ್ತಿಲ್ಲ. ಒಬ್ಬರಾದ ಮೇಲೆ ಒಬ್ರ ದಾಂಪತ್ಯ ಜೀವನ ಸೂತ್ರ ಹರಿದ ಗಾಳಿಪಟವಾದಂತೆ ಆಗ್ತಿದೆ. ಮೊಹಮ್ಮದ್ ಶಮಿ, ಶಿಖರ್ ಧವನ್, ಅಷ್ಟೇ ಏಕೆ ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ವಿಚ್ಚೇದನ ಪಡೆದುಕೊಂಡ್ರು. ಈ ಹಿಂದಿನ ಸೂಪರ್ ಸ್ಟಾರ್ಗಳಾದ ವಿನೋದ್ ಕಾಂಬ್ಳಿ, ರವಿ ಶಾಸ್ತ್ರಿ, ಮೊಹಮ್ಮದ್ ಅಜರುದ್ದೀನ್ ಅವ್ರ ಕಥೆನೂ ಇದೆ. ಇದೀಗ ಈ ಲಿಸ್ಟ್ಗೆ ಸ್ಪಿನ್ನರ್ ಯುಜುವೇಂದ್ರ ಚಹಲ್ ಸೇರಿದ್ದಾರೆ.
ಚಹಾಲ್ ಸಂಸಾರದಲ್ಲಿ ಬಿರುಗಾಳಿ!
ಯುಜ್ವೇಂದ್ರ ಚಹಾಲ್- ಧನಶ್ರೀ ವರ್ಮಾ. ಭಾರತೀಯ ಕ್ರಿಕೆಟ್ ಹಾಗೂ ಬಾಲಿವುಡ್ ನಡುವೆ ಬೆಸುಗೆ ಬೆಸೆದಿದ್ದ ಕ್ಯೂಟ್ ಕಪಲ್.! ಸದಾ ಪರಸ್ಪರ ಕಾಲೆಳೆದು ಕೊಳ್ತಾ, ತುಂಟಾಟ ಮಾಡ್ತಾ ನಗು ಮೊಗದಿಂದಲೇ ಜನರ ಮನ ಗೆದ್ದಿದ್ದ ಸ್ಪೆಷಲ್ ಜೋಡಿಯ ಜೀವನದಲ್ಲೀಗ ನಗು ಮಾಯವಾಗಿದೆ. ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ವೈವಾಹಿಕ ಜೀವನದ ಬಂಡಿ ಹಳಿ ತಪ್ಪಿದೆ.
ಚಹಾಲ್-ಧನಶ್ರೀ ಪ್ರತ್ಯೇಕ
ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲಾ ಅನ್ನೋ ಸುದ್ದಿ ಕಳೆದ ಕೆಲ ವರ್ಷಗಳಿಂದಲೇ ಸದ್ದು ಮಾಡಿತ್ತು. ಕಳೆದ ತಿಂಗಳಿನಿಂದಂತೂ ಪದೇ ಪದೇ ಗಾಸಿಪ್ ಹಬ್ಬಿತ್ತು. ಇದೀಗ ಆ ಗಾಸಿಪ್ ನಿಜವಾಗಿದೆ. ಯುಜುವೇಂದ್ರ ಚಹಾಲ್ ಕುಟುಂಬದ ಆಪ್ತ ವಲಯವೇ ದಂಪತಿಗಳು ದೂರಾಗಿದ್ದು, ಡಿವೊರ್ಸ್ ಮೋರೆ ಹೋಗಿದ್ದಾರೆ ಅನ್ನೋ ಸುದ್ದಿಯನ್ನ ಕನ್ಫರ್ಮ್ ಮಾಡಿದೆ.
ಧನಶ್ರೀ ಜೊತೆಗಿದ್ದ ಫೋಟೋಸ್ ಡಿಲೀಟ್ ಮಾಡಿದ ಚಹಾಲ್
ಚಹಾಲ್-ಧನಶ್ರೀ ದೂರಾಗ್ತಿರೋದಕ್ಕೆ ಕಾರಣ ಏನು ಅನ್ನೋದಕ್ಕೆ ಸ್ಪಷ್ಟ ಉತ್ತರ ಹೊರಬಿದ್ದಿಲ್ಲ. ಜೀವನ ಹಲವು ವಿಚಾರಗಳಲ್ಲಿದ್ದ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಮೊರೆ ಹೋಗಿದ್ದಾರೆ ಎನ್ನಾಲಾಗಿದೆ. ಕಳೆದ ಕೆಲ ತಿಂಗಳಿಂದಲೇ ಇಬ್ಬರೂ ದೂರಾಗಿ ಪ್ರತ್ಯೇಕವಾಗಿ ವಾಸ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿರೋ ಚಹಾಲ್ ಇನ್ಸ್ಸ್ಟಾದಲ್ಲಿ, ಧನಶ್ರೀ ಜೊತೆಗಿದ್ದ ಎಲ್ಲಾ ಫೋಟೋ-ವಿಡಿಯೋಸ್ನ ಡಿಲೀಟ್ ಮಾಡಿದ್ದಾರೆ.
ಇಬ್ಬರ ಡಿವೋರ್ಸ್ಗೆ ಕಾರಣವೇನು?
ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಈ ಸ್ಟಾರ್ ಸದ್ಯದಲ್ಲೇ ವಿಚ್ಛೇದನ ಪಡೆಯಲಿದೆಯಂತೆ. ಆದರೆ, ಈ ಬಗ್ಗೆ ಚಹಾಲ್ ಆಗಲಿ ಅಥವಾ ಧನಶ್ರೀ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಈ ಸ್ಟಾರ್ ಜೋಡಿ ದೂರವಾಗುತ್ತಿರುವುದು ಯಾವ ಕಾರಣಕ್ಕೆ ಎಂಬ ಗೊಂದಲದಲ್ಲಿದ್ದಾರೆ. ವರದಿಗಳ ಪ್ರಕಾರ ಟೀಮ್ ಇಂಡಿಯಾದ ಇನ್ನೊಬ್ಬ ಆಟಗಾರನ ಜೊತೆ ಧನಶ್ರೀ ವರ್ಮಾ ಡೇಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ