ಡಿವೋರ್ಸ್ ವದಂತಿಗೆ ಬಿಗ್ ಟ್ವಿಸ್ಟ್ ಕೊಟ್ಟ ಧನಶ್ರೀ ವರ್ಮಾ; ಚಹಾಲ್ ಜೊತೆಗಿನ ಕ್ಷಣಗಳು ರಿಸ್ಟೋರ್​..!

author-image
Ganesh
Updated On
ಡಿವೋರ್ಸ್​​ ಸುದ್ದಿ ಮಧ್ಯೆ ಚಹಾಲ್​​ ಭಾವುಕ ಪೋಸ್ಟ್​; ಸ್ಟಾರ್​ ಕ್ರಿಕೆಟರ್ ಇನ್​ಸ್ಟಾ ಸ್ಟೋರಿಯಲ್ಲೇನಿದೆ?
Advertisment
  • ಚಹಾಲ್ ಮತ್ತೊಬ್ಬ ಹುಡುಗಿ ಜೊತೆ ಡೇಟಿಂಗ್ ವದಂತಿ
  • ಬೆನ್ನಲ್ಲೇ ಚಹಾಲ್ ಜೊತೆಗಿನ ಫೋಟೋಗಳು ರಿಸ್ಟೋರ್
  • ಚಾಂಪಿಯನ್ಸ್​ ಟ್ರೋಫಿ ಫೈನಲ್​​ನಲ್ಲಿ ವೈರಲ್ ಆಗಿದ್ದ ಚಹಾಲ್

ಡಿವೋರ್ಸ್​ ವದಂತಿಗೆ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಕ್ರಿಕೆಟಿಗ ಯುಜುವೆಂದ್ರ ಚಹಾಲ್ ಜೊತೆಗಿರುವ ಫೋಟೋ, ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ರಿಸ್ಟೋರ್ ಮಾಡಿದ್ದಾರೆ. ಈ ಹಿಂದೆ ಚಹಾಲ್ ಜೊತೆಗಿನ ಎಲ್ಲಾ ಫೋಟೋಗಳನ್ನೂ ಧನಶ್ರೀ ರಿಮೂವ್ ಮಾಡಿದ್ದರು.

ಚಾಂಪಿಯನ್ಸ್​ ಟ್ರೋಫಿ ಫೈನಲ್​​ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗಿದ್ದವು. ಚಹಾಲ್ ಅವರು ಆರ್​​ಜೆ ಮಹ್ವಶ್ (RJ Mahvash) ಜೊತೆ ಈ ಪಂದ್ಯವನ್ನು ವೀಕ್ಷಣೆ ಮಾಡಿದ್ದರು. ಡಿವೋರ್ಸ್​ ವದಂತಿ ಹಿನ್ನೆಲೆಯಲ್ಲಿ ಚಹಾಲ್​, ಮತ್ತೊಬ್ಬ ಹುಡುಗಿ ಜೊತೆ ಪಂದ್ಯ ವೀಕ್ಷಣೆ ಮಾಡಿರೋ ದೃಶ್ಯ ವೈರಲ್ ಆಗಿತ್ತು. ಬೆನ್ನಲ್ಲೇ ಧನಶ್ರೀ ನಿಗೂಢ ಪೋಸ್ಟ್ ಮಾಡಿದ್ದರು. ಹೆಣ್ಣನ್ನು ದೂಷಿಸಿವುದು ಫ್ಯಾಷನ್ ಆಗಿಬಿಟ್ಟಿದೆ ಅಂತಾ ಇನ್​ಸ್ಟಾದಲ್ಲಿ ಬರೆದುಕೊಂಡಿದ್ದರು.

ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಎಲ್ಲಾ ಫೋಟೋ, ವಿಡಿಯೋಗಳನ್ನು ರಿಸ್ಟೋರ್ ಮಾಡಿದ್ದಾರೆ. ಫೋಟೋಸ್, ಔಟಿಂಗ್ ಹೋಗಿರೋ ದೃಶ್ಯ, ಬ್ರ್ಯಾಂಡ್ ಪ್ರಮೋಷನ್ ವಿಡಿಯೋ, ಫೋಟೋ, ವೆಡಿಂಗ್ ಹಾಗೂ ಚಹಾಲ್ ಜೊತೆಗಿನ ವಿಶೇಷ ಕ್ಷಣಗಳನ್ನು ಮತ್ತೆ ರಿಸ್ಟೋರ್ ಮಾಡಿದ್ದಾರೆ.

ಇದನ್ನೂ ಓದಿ:ಹೊಸ ಹುಡುಗಿ ಜೊತೆ ಚಹಾಲ್.. ಮೌನ ಮುರಿದ ಮಾಜಿ ಪತ್ನಿ ಧನಶ್ರೀ ವರ್ಮಾ..!

publive-image

ಚಹಾಲ್ ಮತ್ತು ಧನಶ್ರೀ 2020 ಡಿಸೆಂಬರ್​ನಲ್ಲಿ ಮದುವೆ ಆಗಿದ್ದಾರೆ. ಅಂದಿನಿಂದ ಚಹಾಲ್ ಮತ್ತು ಧನಶ್ರೀ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಇದ್ದರು. ಫನ್ ವಿಡಿಯೋ, ಡ್ಯಾನ್ಸ್​ಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಅಭಿಮಾನಿಗಳು ರಂಜಿಸುತ್ತ ಬರುತ್ತಿದ್ದರು. ಇತ್ತೀಚೆಗೆ ಇವರಿಬ್ಬರು ಡಿವೋರ್ಸ್ ಪಡೆದುಕೊಂಡಿದ್ದಾರೆ ಅಂತಾ ವದಂತಿ ಹಬ್ಬಿತ್ತು. ಡಿವೋರ್ಸ್​ ಬೆನ್ನಲ್ಲೇ ಚಹಾಲ್ ಪರಿಹಾರವಾಗಿ ಧನಶ್ರೀಗೆ 60 ಕೋಟಿ ಹಣ ನೀಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಷ್ಟು ದಿನ ಅಭಿಮಾನಿಗಳು ಚಹಾಲ್ ಮತ್ತು ಧನಶ್ರೀ ನಡುವೆ ಡಿವೋರ್ಸ್ ಆಗಿದೆ ಅಂದ್ಕೊಂಡಿದ್ದರು. ಇದೀಗ ಮತ್ತೆ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: BREAKING: ಮಾಸ್ಕೋ ಕಟ್ಟಡದ ಮೇಲೆ ಉಕ್ರೇನ್​ ಡ್ರೋನ್ ದಾಳಿ.. ಫಲಿಸದ ಶಾಂತಿ ಮಾತುಕತೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment