ಹೆಂಡತಿ ಸ್ಟೆಪ್ಸ್​​ಗೆ ಫುಲ್ ಡೋಸ್​ ಕೊಟ್ಟ ಸ್ಟಾರ್ ಕ್ರಿಕೆಟರ್​.. ಧನಶ್ರೀ ಡ್ಯಾನ್ಸ್​ಗೆ ಎನರ್ಜಿ ತುಂಬಿದ ಸ್ಪಿನ್ನರ್ ಚಹಾಲ್​

author-image
Bheemappa
Updated On
ಹೆಂಡತಿ ಸ್ಟೆಪ್ಸ್​​ಗೆ ಫುಲ್ ಡೋಸ್​ ಕೊಟ್ಟ ಸ್ಟಾರ್ ಕ್ರಿಕೆಟರ್​.. ಧನಶ್ರೀ ಡ್ಯಾನ್ಸ್​ಗೆ ಎನರ್ಜಿ ತುಂಬಿದ ಸ್ಪಿನ್ನರ್ ಚಹಾಲ್​
Advertisment
  • ಶೋಗೆ ಗ್ರ್ಯಾಂಡ್​​ ಎಂಟ್ರಿ, ಇಡೀ ಸ್ಟೇಜ್​​ಗೆ ಕಿಚ್ಚು ಹಚ್ಚಿದ ಧನಶ್ರೀ
  • ಧನಶ್ರೀ ಚಹಾಲ್ ಬೇಸಿಕಲಿ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ರಾ? ​
  • ಧನಶ್ರೀ ಡ್ಯಾನ್ಸ್ ನೋಡಿ ಸ್ಟೇಜ್​ ಮೇಲೇನೆ ಮುತ್ತಿಕ್ಕಿದ ಚಹಾಲ್

ಯುಜವೇಂದ್ರ ಚಹಾಲ್​ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ. ಆದರೂ ರಿಸ್ಟ್ ಸ್ಪಿನ್ನರ್​​ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಮುದ್ದಿನ ಪತ್ನಿ ಧನಶ್ರೀ ವರ್ಮಾ. ಚಹಾಲ್​​, ಪತ್ನಿಯ ಡ್ಯಾನ್ಸ್ ಶೋ ಕಾರ್ಯಕ್ರಮಕ್ಕೆ ಗ್ರ್ಯಾಂಡ್​​ ಎಂಟ್ರಿಕೊಟ್ಟು ಇಡೀ ಸ್ಟೇಜ್​​ಗೆ ಕಿಚ್ಚು ಹಚ್ಚಿದ್ದಾರೆ. ಧನಶ್ರೀ ವರ್ಮಾಳ ಜಬರ್ದಸ್ತ್​ ಡ್ಯಾನ್ಸ್​ ಹೇಗಿತ್ತು, ಚಹಾಲ್ ಹೇಗೆ ಎನರ್ಜಿ ತುಂಬಿದ್ರು?.

publive-image

ಯುಜವೇಂದ್ರ ಚಹಾಲ್ ಟೀಮ್ ಇಂಡಿಯಾದ ಈ ಸ್ಟಾರ್ ಸ್ಪಿನ್ನರ್​ ಮೋಡಿಗೆ ಧನಶ್ರೀ ವರ್ಮಾ ಕ್ಲೀನ್ ಬೋಲ್ಡ್ ಆಗಿದ್ದಳು. ಪ್ರಣಯ ಪಕ್ಷಿಗಳು 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಚಹಾಲ್​ ಪತ್ನಿ ಬೇಸಿಕಲಿ ಡ್ಯಾನ್ಸ್ ಕೋರಿಯೋಗ್ರಾಫರ್. JHALAK DIKHLA JAA ಎಂಬ ಡ್ಯಾನ್ಸ್​ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪತ್ನಿಗೆ ಬೆಂಬಲ ನೀಡಲು ಚಹಾಲ್​​​​​​​​ ಡ್ಯಾನ್​ ಸೆಟ್ಸ್​​ಗೆ​​​ ತೆರಳಿದ್ರು. ಪತ್ನಿಯ ಡ್ಯಾನ್ಸ್​​ಅನ್ನ ಮೊದಲ ಬಾರಿ ಲೈವ್ ಆಗಿ​ ನೋಡಿ ಸಖತ್ ಖುಷಿ ಪಟ್ಟಿದ್ದಾರೆ.

ಡ್ಯಾನ್ಸ್ ಶೋ ಸೆಟ್​ಗೆ ಚಹಾಲ್​​​ ಗ್ರ್ಯಾಂಡ್​​ ಎಂಟ್ರಿ..!

ಜನಪ್ರಿಯ JHALAK DIKHLA JAA ಡ್ಯಾನ್ಸ್​​​​ ಶೋ ಚಹಾಲ್​​ಗೆ ಎಂಟ್ರಿಕೊಟ್ಟಿದ್ದು ಸಖಜ್ ಮಜವಾಗಿತ್ತು. ಬಾಲ್​ ಹಿಡಿದು ವಿಕೆಟ್​​ ಉರುಳಿಸಿಯೋ ಅವರ ಎಂಟ್ರಿ ಮಾತ್ರ ನಿಜಕ್ಕೂ ನೆಕ್ಸ್ಟ್​ ಲೆವೆಲ್​​​

ಚಹಾಲ್​ ಎಂಟ್ರಿನೇ ಈಗಿರ್ಬೇಕಾದ್ರೆ ಇನ್ನೂ ಪತ್ನಿಯ ಡ್ಯಾನ್ಸ್​​ ಹೇಗಿರ್ಬೇಡ ನೀವೆ ಹೇಳಿ?. ಅದು ನಿಜಕ್ಕೂ ಚಿಂದಿ ಬಿಡಿ. 'ತುಮ್​​​​ ಸೆ ತುಜ್​​​​ ದೇಕ್​​​' ಹಾಡಿಗೆ ಪಡ್ಡೆ ಹುಡುಗರು ಕಳೆದು ಹೋಗುವ ರೀತಿಯಲ್ಲಿ ಸೊಂಟ ಬಳಕಿಸಿದ್ರು. ಅದೇನ್​ ಸ್ಟೆಪ್​​​, ಅದೇನ್ ಎನರ್ಜಿ ಅಂತೀರಾ ರಿಯಲಿ ಸೂಪರ್ಬ್​ ಬಿಡಿ. ಧನಶ್ರೀ ಡ್ಯಾನ್ಸ್ ನೋಡ್ತಿದ್ರೆ ನೋಡುಗರ ಎದ್ದು ಹೋಗಿ ಸ್ಟೆಪ್ಸ್ ಹಾಕ್ಬೇಕು. ಅಂತಹ ಜಬರ್ದಸ್ತ್​ ಡ್ಯಾನ್ಸ್ ಮೋಡಿ ಮಾಡಿದ್ರು. ಧನಶ್ರೀ ವರ್ಮಾಳ ಪವರ್​​ಫುಲ್​ ಡ್ಯಾನ್ಸ್​​ಗೆ ಕ್ಲೀನ್​ಬೋಲ್ಡ್ ಆದ ತೀರ್ಪುಗಾರರು ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ರು. ಚಹಾಲ್ ಅಂತೂ ಧನಶ್ರೀ ಡ್ಯಾನ್ಸ್ ನೋಡಿ ಸ್ಟೇಜ್​ ಮೇಲೇನೆ ಪತ್ನಿಗೆ ಮುತ್ತನ್ನ ನೀಡಿದ್ರು.

publive-image

ಫೇಮಸ್ ಸೆಲಬ್ರೇಶನ್​​ ಸ್ಟೈಲ್​ನಲ್ಲಿ ಪತ್ನಿಗೆ ವಿಶ್​​​​..!

ಪತ್ನಿ ಈ ಮಟ್ಟಿಗೆ ಜಬರ್ದಸ್ತ್​ ಡ್ಯಾನ್ಸ್ ಮಾಡಿದ್ರೆ ಯಾವ ಗಂಡನಿಗೆ ಖುಷಿ ಆಗಲ್ಲ ಹೇಳಿ?. ಧನಶ್ರೀ ಡ್ಯಾನ್ಸ್​ಗೆ ಫಿದಾ ಆದ ಚಹಾಲ್ ತಮ್ಮ ಫೇಮಸ್​ ಸಿಗ್ನೇಚರ್​​ ಸೆಲಬ್ರೇಶನ್ ಸ್ಟೈಲ್​​ನಲ್ಲಿ ಪತ್ನಿಗೆ ಶುಭಕೋರಿದ್ರು. ಬರೀ ಧನಶ್ರೀ ವರ್ಮಾ ಅಷ್ಟೇ ಅಲ್ಲ. ಯುಜವೇಂದ್ರ ಚಹಾಲ್ ಕೂಡ ವೆಲ್ ಡ್ಯಾನ್ಸರ್​​​​.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment