ಹೊಸ ಹುಡುಗಿ ಜೊತೆ ಚಹಾಲ್.. ಮೌನ ಮುರಿದ ಮಾಜಿ ಪತ್ನಿ ಧನಶ್ರೀ ವರ್ಮಾ..!

author-image
Ganesh
Updated On
ಹೊಸ ಹುಡುಗಿ ಜೊತೆ ಚಹಾಲ್.. ಮೌನ ಮುರಿದ ಮಾಜಿ ಪತ್ನಿ ಧನಶ್ರೀ ವರ್ಮಾ..!
Advertisment
  • ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಫೈನಲ್ ಪಂದ್ಯ
  • ಭಾನುವಾರ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿ ಫೈನಲ್
  • ಈ ಪಂದ್ಯ ವೀಕ್ಷಣೆಗೆ ಹುಡುಗಿ ಜೊತೆ ಬಂದಿದ್ದ ಚಹಾಲ್

ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದ ವೇಳೆ ಕ್ರಿಕೆಟಿಗ ಯಜುವೇಂದ್ರ ಚಹಾಲ್,​ ಯುಟ್ಯೂಬರ್​​​​ ಆರ್​ಜೆ ಮಹಶ್ವಾ ಜೊತೆ ಕಾಣಿಸಿಕೊಂಡು ಸಖತ್​ ಸುದ್ದಿಯಾಗಿದ್ದರು. ಚಹಾಲ್​ ಮತ್ತೆ ಡೇಟಿಂಗ್​ ಮಾಡ್ತಿದ್ದಾರೆ ಎಂಬ ಪ್ರಶ್ನೆಗಳು ಎದ್ದಿದ್ದವು.

ಈ ಬೆನ್ನಲ್ಲೆ ಚಹಾಲ್​ ಮಾಜಿ ಪತ್ನಿ ಧನಶ್ರೀ ವರ್ಮಾ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಅಚ್ಚರಿಯ ಸಂದೇಶ ಹಂಚಿಕೊಂಡಿದ್ದಾರೆ. ಧನಶ್ರೀ ತಮ್ಮ ಇನ್ಸ್​​ಸ್ಟಾ ಸ್ಟೋರಿಯಲ್ಲಿ ಹೆಣ್ಣನ್ನು ದೂಷಿಸುವುದು ಯಾವಾಗಲೂ ಫ್ಯಾಷನ್​ ಆಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಧನಶ್ರೀ ವರ್ಮಾ ತಮ್ಮನ್ನು ಟೀಕಿಸುತ್ತಿದ್ದವರಿಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯ ಶ್ರೇಷ್ಠ ತಂಡ ಪ್ರಕಟ; KL ರಾಹುಲ್ ಸೇರಿ ಟೀಂ ಇಂಡಿಯಾದ 6 ಸ್ಟಾರ್​​ಗಳಿಗೆ ಸ್ಥಾನ

ಧನಶ್ರೀ ಮತ್ತು ಚಹಾಲ್ ಪ್ರೀತಿಸಿ ಡಿಸೆಂಬರ್ 22, 2022ರಲ್ಲಿ ಮದುವೆ ಆಗಿದ್ದರು. ಇಷ್ಟು ದಿನಗಳ ಕಾಲ ಅನೋನ್ಯವಾಗಿದ್ದ ಈ ಜೋಡಿ 2025 ಫೆಬ್ರವರಿಯಲ್ಲಿ ಅಧಿಕೃತವಾಗಿ ಡಿವೋರ್ಸ್​ ಪಡೆದುಕೊಂಡಿದ್ದಾರೆ. ಡಿವೋರ್ಸ್ ಬೆನ್ನಲ್ಲೇ ಧನಶ್ರೀ ವಿರುದ್ಧ ಚಹಾಲ್ ಅಭಿಮಾನಿಗಳು ಗುರುತರ ಆರೋಪಗಳನ್ನು ಮಾಡಿದ್ದರು. ಇದೀಗ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್​ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಚಹಾಲ್, ಹುಡುಗಿ ಒಬ್ಬರ ಜೊತೆ ಇರೋ ಫೋಟೋ ವೈರಲ್ ಆಗಿದೆ. ಬೆನ್ನಲ್ಲೇ ಧನಶ್ರೀ ಚಹಾಲ್ ಅಭಿಮಾನಿಗಳಿಗೆ ಟಾಂಗ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕೆಲಸ ಹುಡುಕುತ್ತಿರೋರಿಗೆ Apple ಸಂಸ್ಥೆಯಿಂದ ಭರ್ಜರಿ ಗುಡ್​​ನ್ಯೂಸ್​​; ಬರೋಬ್ಬರಿ 5 ಲಕ್ಷ ಉದ್ಯೋಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment