/newsfirstlive-kannada/media/post_attachments/wp-content/uploads/2025/02/CHAHAL-AND-DHANASHRRE-10.jpg)
ವರ್ಷಗಳ ದಾಂಪತ್ಯ ಅಂತ್ಯವಾಗಿದೆ. ಈ ಸ್ಟಾರ್ ಜೋಡಿಯನ್ನ ನೋಡಿದವ್ರು ಆಹಾ ಅದೆಂಥಾ ಕ್ಯೂಟ್ ಕಪಲ್ ಅಂತಾ ದೃಷ್ಟಿ ತೆಗೀತಿದ್ರು. ನೂರಾರು ಕಾಲ ಬಾಳಿ ಸುಖವಾಗಿರಿ ಅಂತಾನೂ ಆಶೀರ್ವಾದ ಮಾಡ್ತಿದ್ರು. ಅಷ್ಟು ಚೆಂದವಾಗಿ ಇಬ್ಬರೂ ರೀಲ್ಸ್ಗಳಲ್ಲಿ ನಟಿಸಿ ನಲೀತಿದ್ರು. ಬಟ್, ಈಗ ಇವರಿಬ್ಬರ ಜೀವನದಲ್ಲಿ ಬೀಸಿರೋ ಬಿರುಗಾಳಿಯನ್ನ ನೋಡ್ತಿದ್ರೆ, ಅದೇನಾಯ್ತು ಅನ್ನೋ ಪ್ರಶ್ನೆಗಳು ಹಲವರಿಗೆ ಕಾಡೋದಕ್ಕೆ ಶುರುವಾಗಿದೆ. ಕಾರಣಗಳು ಏನೇ ಇರಬಹುದು..ಆದ್ರೆ, ಅದಕ್ಕೆಲ್ಲಾ ಡಿವೋರ್ಸ್ ಭೂತವೊಂದೇ ಪರಿಹಾರ ಅಲ್ಲ ಅಂತಾ ಹಲವರು ಬರೆದುಕೊಳ್ತಿದ್ದಾರೆ. ಹಲವು ದಿನಗಳಿಂದ ಓಡಾಡ್ತಿದ್ದಾ ಗಾಳಿಸುದ್ದಿಗೆ ನ್ಯಾಯಾಲಯದಿಂದಲೇ ಅಧಿಕೃತ ಮುದ್ರೆ ಬಿದ್ದಿದೆ. ಈ ಮಧ್ಯೆ ಕೇಳಿಬರ್ತಿರೋ ಮತ್ತೊಂದು ಸುದ್ದಿ ಚಹಲ್ ಅಭಿಮಾನಿಗಳು ಮತ್ತಷ್ಟ ಕೆರಳಿಬಿಡುತ್ತಾರೆ.
ಧನಶ್ರೀಗೆ ₹60 ಕೋಟಿ ರೂಪಾಯಿ ಜೀವನಾಂಶ ಕೊಡ್ತಾರಾ?
ಈ ವಿಚಾರವನ್ನ ಕೇಳಿ ಹಲವರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಧನಶ್ರೀ ವರ್ಮಾ ವಿರುದ್ಧ ಅಕ್ಷರಶಃ ನಿಗಿಕೆಂಡ ಕಾರುತ್ತಿದ್ದಾರೆ. ತನ್ನ ಮಾಜಿ ಪತ್ನಿ ಧನಶ್ರೀ ವರ್ಮಾ ಹಾಗೂ ಆಕೆಯ ಕುಟುಂಬ ಚಹಲ್ ಬಳಿ ಬರೋಬ್ಬರಿ 60 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದಾರೆ ಅಂತಾ ಹೇಳಲಾಗ್ತಿದೆ.
ಚಹಲ್ ಪ್ರತಿಭಾನ್ವಿತ ಕ್ರಿಕೆಟರ್, ಹೇಳಿ ಕೇಳಿ ಅತ್ಯುತ್ತಮ ಸ್ಪಿನ್ನರ್. ಈ ಬಾರಿಯ ಐಪಿಎಲ್ನಲ್ಲಿ ಚಹಲ್ನ ಬರೋಬ್ಬರಿ 18 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡ ಖರೀದಿ ಮಾಡಿದೆ. ಸದ್ಯ, ಚಾಹಲ್ ಟೀಮ್ ಇಂಡಿಯಾದಲ್ಲಿ ಆಡ್ತಿಲ್ಲ. ತಂಡದಿಂದ ಹೊರಗಿದ್ರೂ ಈತ ಬೇರೆ ಬೇರೆ ತಂಡಗಳಲ್ಲಿ ಆಡುವ ಸರಣಿಗಳು ಹಾಗೂ ಜಾಹೀರಾತುಗಳು ಎಲ್ಲವನ್ನೂ ಸೇರಿಸಿದ್ರೆ ವರ್ಷಕ್ಕೆ ಬರೋಬ್ಬರಿ 45 ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡ್ತಾರಂತೆ. ಇನ್ನು, ಚಹಲ್ಗೆ ಒಳ್ಳೆ ಬ್ಯುಸಿನೆಸ್ ಮೈಂಡ್ ಇದ್ದು, ಕೋಟಿ ಕೋಟಿ ಹಣವನ್ನ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದಾರಂತೆ. ಲಕ್ಸುರಿ ಕಾರ್ಗಳ ಒಡೆಯನೂ ಆಗಿದ್ದಾರೆ. ಹೀಗಾಗಿ, ಚಹಲ್ನ ಆರ್ಥಿಕ ಸಾಮಾರ್ಥ್ಯದ ಬಗ್ಗೆ ಗೊತ್ತಿದ್ದೇ ಧನಶ್ರೀ ಬೇಕಂತಲೇ ಚಹಲ್ ಬಳಿ 60 ಕೋಟಿ ರೂಪಾಯಿ ಹಣ ಕೀಳುವ ಪ್ಲಾನ್ ಮಾಡಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜನರು ಕಾಲೆಳಿತ್ತಿದ್ದಾರೆ..ಆದ್ರೆ, ಧನಶ್ರೀ ಪೋಷಕರು ಹೇಳ್ತಿರೋದೇ ಬೇರೆ.
ಜೀವನಾಂಶದ ಅಮೌಂಟ್ ಬಗ್ಗೆ ಹಬ್ಬಿರುವ ಸುದ್ದಿ ನಿಜಕ್ಕೂ ನಿರಾಧಾರ. ಇಂತಹ ಸುದ್ದಿಯಿಂದ ನಮಗೆ ತುಂಬಾನೇ ನೋವಾಗಿದೆ. ನಾವೊಂದು ವಿಚಾರವನ್ನ ಕ್ಲಿಯರ್ ಆಗಿ ಹೇಳ್ಬೇಕು. ನಾವು ಅವರಿಂದ ₹60 ಕೋಟಿ ಕೇಳಿಲ್ಲ. ಅವರೂ ಕೂಡ ನಮಗೆ ಅಷ್ಟು ಕೊಡ್ತೀವಿ ಅಂತಲೂ ಹೇಳಿಲ್ಲ. ಈ ರೀತಿಯ ಊಹಾಪೋಹದಲ್ಲಿ ಸತ್ಯವಿಲ್ಲ. ಅಧಿಕೃತವಲ್ಲದ ಈ ರೀತಿಯ ಸುದ್ದಿಯನ್ನು ಹಬ್ಬಿಸುವುದು ನಿಜಕ್ಕೂ ಬೇಜವಾಬ್ದಾರಿಯುತ ಎಂದು ಧನಶ್ರೀ ಆಕ್ರೊಶ ವ್ಯಕ್ತಪಡಿಸಿದ್ದಾರೆ. ನಾವು ಚಹಲ್ ಬಳಿ 60 ಕೋಟಿ ರೂಪಾಯಿಯ ಜೀವನಾಂಶ ಕೇಳಿಲ್ಲ. ಅವರು ಅಷ್ಟು ಕೊಡ್ತೀವಿ ಅಂತಾ ಹೇಳಿಲ್ಲ ಅಂತಾರೆ ಧನಶ್ರೀ ಪೋಷಕರು. ಆದ್ರೆ, ಜೀವನಾಂಶದ ಮೊತ್ತದಲ್ಲಿ ತಪ್ಪಿದೆ ಅಂತಾ ಹೇಳ್ತಿರೋ ಅವ್ರು ಜೀವನಾಂಶವನ್ನೇ ಕೇಳಿಲ್ಲ ಅಂತಾ ಏನೂ ಹೇಳ್ತಿಲ್ಲ.
ಹಾಗೆ ನೋಡಿದ್ರೆ ಧನಶ್ರೀ ಕೂಡ ಚಹಲ್ಗಿಂತ ಕಡಿಮೆ ಏನಿಲ್ಲ. ಡೆಂಟಿಸ್ಟ್, ಕೊರಿಯೋಗ್ರಾಫರ್ ಹಾಗೂ ನಟಿಯೂ ಆಗಿರೋ ಈಕೆಯೂ 25 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದಾಳೆ ಅನ್ನೋ ಮಾಹಿತಿ ಇದೆ. ಆದ್ರೆ, ಹಾಲು-ಜೇನಿನಂತೆ ಚೆನ್ನಾಗಿದ್ದ ಜೋಡಿಯ ಬಾಳಲ್ಲಿ ಬಿರುಗಾಳಿ ಮೂಡೋದಕ್ಕೆ ನಿಜವಾದ ಕಾರಣ ಏನಿರಬಹುದು ಅನ್ನೋ ಪ್ರಶ್ನೆಗಳು ಚರ್ಚೆಯಾಗ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ಧನಶ್ರಿಯೇ ಸರಿಯಿಲ್ಲ, ಆಕೆ ಬದುಕ್ತಿದ್ದ ರೀತಿ ಸರಿಯಿಲ್ಲ ಅಂತಾ ಆಕೆಯ ವಿರುದ್ಧ ಅಭಿಯಾನದ ಬೆಂಕಿಯನ್ನೇ ಹಚ್ಚಲಾಗಿದೆ. ಸದ್ಯ ಚಹಲ್ ಅವರ ಬಳಿ ಇರುವ ಒಟ್ಟು ಆಸ್ತಿ ಮೌಲ್ಯವೇ 45 ಕೋಟಿ. ಹೀಗಿರುವಾಗ 60 ಕೋಟಿ ಜೀವನಾಂಶ ನೀಡಲು ಸಾಧ್ಯವೇ ಎಂಬ ಚರ್ಚೆಗಳು ಶುರುವಾಗಿವೆ.
ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಸ್ ಹಾಕ್ತಿದ್ದ ಧನಶ್ರೀ!
ನೀವು ಕಳೆದ ಎರಡ್ಮೂರು ವರ್ಷಗಳಿಂದ ಧನಶ್ರೀಯವರನ್ನ ಅಬ್ಸರ್ವ್ ಮಾಡಿದ್ರೆ ಗೊತ್ತಾಗುತ್ತೆ. ಸಖತ್ ಡ್ಯಾಷಿಂಗ್ ಡ್ಯಾನ್ಸರ್ ಎನಿಸಿಕೊಂಡಿದ್ದ ಧನಶ್ರೀ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಬೋಲ್ಡ್ ಫೋಟೋಸ್ ಹಾಕ್ತಿದ್ರು. ಅಷ್ಟೇ ಅಲ್ಲ, ಬೇರೆ ಬೇರೆ ಕ್ರಿಕೆಟರ್ಸ್ ಹಾಗೂ ಸ್ಟಾರ್ಗಳ ಜೊತೆಗೆ ಮೈಚಳಿ ಬಿಟ್ಟು ಪೋಸ್ ಕೊಡ್ತಿದ್ದದ್ದು. ಡ್ಯಾನ್ಸ್ ಮಾಡ್ತಿದ್ದದ್ದೂ ಎಲ್ಲವೂ ಚಹಲ್ ಅಭಿಮಾನಿಗಳನ್ನ ಕೆರಳುವಂತೆ ಮಾಡ್ತಿತ್ತು. ಟೀಮ್ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗನ ಜೊತೆಗೇ ಧನಶ್ರೀ ಕ್ಲೋಸ್ ಆಗಿ ಮೂವ್ ಮಾಡಿದ್ದನ್ನ ಕಂಡವರು ಚಹಲ್ ಬದುಕಲ್ಲಿ ಬಿರುಗಾಲೀ ಗ್ಯಾರಂಟಿ ಅನ್ನೋ ಅಂದಾಜನ್ನ ತುಂಬಾ ಹಿಂದೇನೇ ಮಾಡಿದ್ದರು. ಆದ್ರೆ, ಚಹಲ್ ಫ್ಯಾನ್ಸ್ನ ಆ ಅಂದಾಜು ಈಗ ನಿಜವಾಗಿದೆ.. ಧನಶ್ರೀ ಚಹಲ್ ಹಾಗೂ ಜನರ ಎದುರಿಗೇ ನಡೆದುಕೊಳ್ತಿದ್ದ ರೀತಿಯೇ ಮೊದಲಿಗೆ ವಿಚ್ಛೇದನದ ಕಿಡಿ ಹೊತ್ತಿಸಿದೆ ಅಂತಾನೇ ಹೇಳಲಾಗ್ತಿದೆ. ಹಾಗೆ ನೋಡಿದ್ರೆ, ಇವರಿಬ್ಬರೂ ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದುಕೊಳ್ಳದೇ ಏನೂ ಮದುವೆ ಆಗಿರಲಿಲ್ಲ. ಮದುವೆಗೂ ಮುಂಚೆ ಇಬ್ಬರೂ ಪರಸ್ಪರ ಪ್ರೀತಿಸಿದ್ದ ಕಥೆ ನಿಜಕ್ಕೂ ಇಂಟರೆಸ್ಟಿಂಗ್.
2019ರಲ್ಲಿ ಕೊರೊನಾ ಮಹಾಮಾರಿ ಇಡೀ ದೇಶವನ್ನೇ ಕಾಡಿದ್ದ ಸಮಯ. ಆ ಟೈಮಲ್ಲಿ ಯಾರಿಗೂ ಕೆಲಸ ಇರಲಿಲ್ಲ. ಕೆಲಸ ಇದ್ರೂ ಇನ್ಕಮ್ ಇರಲಿಲ್ಲ. ಆ ಟೈಮಲ್ಲಿ ಟೀಮ್ ಇಂಡಿಯಾದ ಕ್ರಿಕೆಟರ್ಗಳಿಗೂ ಯಾವುದೇ ಮ್ಯಾಚ್ಗಳಿರಲಿಲ್ಲ. ಎಲ್ಲಾ ಕ್ರಿಕೆಟರ್ಸ್ ರೀತಿನೇ ಚಹಲ್ ಕೂಡ ಮನೆಯಲ್ಲಿ ಟೈಮ್ಪಾಸ್ ಮಾಡ್ತಾ ಇರ್ತಾರೆ. ಹೀಗೆ ಟೈಮ್ ಪಾಸ್ ಮಾಡ್ತಿದ್ದ ಚಹಲ್ಗೆ ಒಂದೇ ಕಡೆ ಇದ್ದು ಇದ್ದು ಬೋರ್ ಆಗಿ, ಒಂದಿನ ಡ್ಯಾನ್ಸ್ ಕಲೀಬೇಕು ಅನ್ನೋ ಆಸೆ ಹುಟ್ಟುತ್ತೆ. ಆಗ ಮೊಬೈಲ್ನಲ್ಲಿ ಕಣ್ಣಿಗೆ ಬಿದ್ದವಳೇ, ಇದೇ ಧನಶ್ರೀ ವರ್ಮಾ
ಸೋಷಿಯಲ್ ಮೀಡಿಯಾದಲ್ಲಿ ಆ ಟೈಮಿಗಷ್ಟೇ ತನ್ನ ಜ್ವಾಲಾಮುಖಿಯಂತಹ ಡ್ಯಾನ್ಸ್ ಮೂವ್ಸ್ ಮೂಲ ಕಿಚ್ಚು ಹೊತ್ತಿಸಿದ್ದ ಬೆಡಗಿ ಧನಶ್ರೀ ವರ್ಮಾ. ಪ್ರಖ್ಯಾತ ಕೊರಿಯೋಗ್ರಾಫರ್. ಸೆಲ್ಫೆಮೇಡ್ ಸೆಲೆಬ್ರಿಟಿ ಅಂತಾನೂ ಹೇಳಬಹುದು. ಧನಶ್ರೀಯ ಯ್ಯೂಟ್ಯೂಬ್ ಚಾನಲ್ಗೆ ಹೋಗಿ ಚೂರು ಕಣ್ಣಾಡಿಸಿದ್ರೆ ಸಾಕು, ಈಕೆ ಎಂಥಾ ಬೆಂಕಿಯುಂಡೆ ಅನ್ನೋದು ಗೊತ್ತಾಗಿಬಿಡುತ್ತೆ. ಡ್ಯಾನ್ಸ್ ಟೀಚರ್ ಕೂಡ ಆಗಿದ್ದ ಧನಶ್ರೀ ಡ್ಯಾನ್ಸಿಂಗ್ ಸ್ಟೈಲ್ಗೆ ಮಾರುಹೋದ ಚಹಲ್, ತನಗೆ ಡ್ಯಾನ್ಸ್ ಕ್ಲಾಸ್ ತೆಗೆದುಕೊಳ್ಳುವಂತೆ ಆಕೆಗೆ ಲಾಕ್ಡೌನ್ ಟೈಮಲ್ಲಿ ಮೆಸೇಜ್ ಮಾಡಿದ್ರಂತೆ.. ಅದೂ ಕೂಡ ಆನ್ಲೈನ್ ಕ್ಲಾಸ್.. ಹೇಗೂ ಸ್ಟಾರ್ ಕ್ರಿಕೆಟರ್. ಡೆಡಿಕೇಷನ್ ಲೆವೆಲ್ ಜಾಸ್ತಿನೇ ಇರುತ್ತೆ ಅಂತಾ ಅಂದುಕೊಳ್ಳೋ ಧನಶ್ರೀ ಚಹಲ್ ಕೋರಿಕೆಯನ್ನ ಒಪ್ಪಿಕೊಳ್ತಾರೆ. ಧನಶ್ರೀ ಡ್ಯಾನ್ಸ್ ಸ್ಕೂಲ್ಗೆ ಚಹಲ್ ಸ್ಟೂಡೆಂಟ್ ಆದ್ರೆ, ಆಕೆ ಟೀಚರ್ ಆಗಿರ್ತಾಳೆ. ಧನಶ್ರೀ ಕೂಡ ಚಹಲ್ಗೆ ಡ್ಯಾನ್ಸ್ ಹೇಳಿಕೊಡ್ತಾ ಕೊಡ್ತಾನೇ ಇಬ್ಬರಿಗೂ ಒಂದೊಳ್ಳೆ ಗೆಳೆತನ ಬೆಳೆಯುತ್ತೆ. ಆ ಗೆಳೆತನ ಮಾತುಕತೆಗೆ ತಿರುಗುತ್ತೆ..ಧನಶ್ರೀಯ ಡೆಡಿಕೇಷನ್, ಌಂಬಿಷನ್ ಎಲ್ಲವನ್ನ ನೋಡಿ ಫಿದಾ ಆದ ಚಹಲ್ ಒಂದು ರಾತ್ರಿ ಆಕೆಗೆ ಮೆಸೇಜ್ ಮಾಡಿದ್ರಂತೆ.
ಒಂದು ದಿನ ರಾತ್ರಿ ಕೂತಿದ್ದಾಗ ನಾನು ನಿಂಗೇನೋ ಕೇಳ್ಬೇಕು ಅಂತಾ ಆಕೆಗೆ ಮೆಸೇಜ್ ಮಾಡಿದೆ. ಲಾಕ್ ಡೌನ್ ನಡೀತಿದೆ.. ನೀನು ಇಷ್ಟು ಖುಷಿಯಾಗಿ ಹೇಗಿದ್ದೀಯಾ ಅಂತ ಕೇಳ್ದೆ. ಎರಡ್ ತಿಂಗ್ಳಿಂದ ಮಾತಾಡ್ತಿದ್ವಲ್ಲಾ. ಹಂಗಾಗಿ ಕೇಳ್ದೆ. ಅಲ್ಲಿಂದ ಮಾತು ಶುರುವಾಯ್ತು. ನಂಗೆ ಆಕೆಯ ವೈಬ್ಸ್ ಇಷ್ಟ ಆಯ್ತು. ಆಕೆ ಸೆಲ್ಫ್ ಮೇಡ್ ವುಮನ್. ನನ್ನ ರೀತಿನೇ. 5-6 ಗಂಟೆ ಡ್ಯಾನ್ಸ್ ಮಾಡಿಲ್ಲ, 2 ಗಂಟೆ ಜಿಮ್ ಮಾಡಿಲ್ಲ, ಕಿಕ್ ಬಾಕ್ಸಿಂಗ್ ಮಾಡಿಲ್ಲ ಅಂದ್ರೆ ಆಕೆಯ ದಿನವೇ ಮುಗಿಯಲ್ಲ. ಆ ರೀತಿ ಅವಳು. ಇಡೀ ದಿನದಲ್ಲಿ ಇದೆಲ್ಲಾ ಆಗಿಲ್ಲ ಅಂದ್ರೆ ಕಿರಿಕಿರಿ ಮಾಡ್ತಿರತ್ತಾಳೆ ಅಂತ ನಂಗೆ ಗೊತ್ತಿತ್ತು. ಅಲ್ಲಿಂದ ನಂಗೆ ತುಂಬಾನೇ ಇಷ್ಟ ಆಯ್ತು. ನನ್ನ ಹೆತ್ತವರಿಗೂ ಧನಶ್ರೀ ಬಗ್ಗೆ ಹೇಳ್ದೆ. ಅವರಿಗೂ ಖುಷಿ ಆಯ್ತು. ನಾನು ಅವಳಿಗೆ ನೇರವಾಗಿ ಹೇಳಿದ್ದೆ. ನಂಗೆ ನಿನ್ನ ಡೇಟ್ ಮಾಡೋಕೆ ಇಷ್ಟ ಇಲ್ಲ. ನಿನ್ನ ಮದ್ವೆಯಾಗೋಕೆ ಇಷ್ಟ ಅಂತ ಎಂದು ಯಜುವೇಂದ್ರ ಚಹಲ್ ಹೇಳಿಕೊಂಡಿದ್ದಾರೆ.
ತನ್ನ ಸ್ಟೂಡೆಂಟ್ ಆಗಿದ್ದ ಚಹಲ್ ಈ ರೀತಿ ದಿಢೀರ್ ಅಂತಾ ಮದುವೆಗೆ ಪ್ರಪೋಸ್ ಮಾಡಿದ್ದು ಧನಶ್ರೀಗೂ ಕೂಡ ಶಾಕಿಂಗ್ ಆಗಿತ್ತಂತೆ..
ಒಬ್ಬ ಸ್ಟೂಡೆಂಟ್ ಆಗಿ, ಒಬ್ಬ ಫ್ರೆಂಡ್ ಆಗಿ ಅವ್ರಿದ್ದ ರೀತಿ, ನೇರವಾಗಿ ನನ್ನನ್ನ ಮದುವೆಗೆ ಅಪ್ರೋಚ್ ಮಾಡಿದ್ದು. ಯಾರು ಮಾಡ್ತಾರೆ ಹಾಗೆ? ಹಾಗೇ, ಯಾರೂ ಮಾಡಲ್ಲ. ಬೇರೆ ಬೇರೆ ಆಯ್ಕೆಗಳನ್ನ ಹುಡುಕೋದು ಎಲ್ಲರಿಗೂ ತುಂಬಾ ಈಸಿಯಾಗ್ಬಿಟ್ಟಿದೆ. ಬೇರೆ ಬೇರೆ ಜನರನ್ನ ಭೇಟಿಯಾಗೋದು, ಲಿಮಿಟ್ಟೇ ಇಲ್ಲ, ಹೊಸ ಹೊಸಬರನ್ನ ಭೇಟೆಯಾಗೋದು. ಅವರಲ್ಲ. ಇವರು.. ಇವ್ರಲ್ಲ ಅವರು.. ಆದ್ರೆ ಇವರು ನೇರವಾಗಿ ನಂಗೆ ಮದುವೆಯಾಗಬೇಕು ಅಂದ್ರು ಅಂತ ಧನಶ್ರೀ ಕೂಡ ಹೇಳಿಕೊಂಡಿದ್ದಾರೆ. ಆದ್ರೆ ಕೊನೆಗೆ ಅದು ಡಿವೋರ್ಸ್ ಆಗಿ ನಾನೊಂದು ತೀರ ನೀನೊಂದು ತೀರ ಎನ್ನುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ