/newsfirstlive-kannada/media/post_attachments/wp-content/uploads/2025/01/Danaraj.jpg)
ಈ ವಾರ ಬಿಗ್ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಬಂದು ಹೋಗ್ತಿದ್ದಾರೆ. ಅಂತೆಯೇ ಧನರಾಜ್ ಅವರ ದೊಡ್ಡ ಕುಟುಂಬ ಬಿಗ್ಬಾಸ್ ಮನೆಗೆ ಎಂಟ್ರಿಯಾಗಿದೆ.
ಕುಟುಂಬದ ಸದಸ್ಯರನ್ನು ನೋಡಿದ ಧನರಾಜ್ ಫುಲ್ ಖುಷ್ ಆಗಿದ್ದಾರೆ. ಅವರ ಪತ್ನಿ ಪ್ರಜ್ಞಾ ತಮ್ಮದೇ ಸ್ಟೈಲ್ನಲ್ಲಿ ಪತಿಯ ಕಾಲೆಳೆದು ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ.
ಇದನ್ನೂ ಓದಿ: BBK11: ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಪತಿ ಅಭಿಷೇಕ್.. ಗೌತಮಿಗೆ ಕೊಟ್ಟ ಸರ್ಪ್ರೈಸ್ ಗಿಫ್ಟ್ ಏನು?
ಅದಲ್ಲದೇ ಧನರಾಜ್ ಅವರ ಕೂಡು ಕುಟುಂಬ ಮನೆಗೆ ಎಂಟ್ರಿ ನೀಡಿದೆ. ಬಿಗ್ಬಾಸ್ ಮನೆಗೆ ಬಂದಿರುವ ಸದಸ್ಯರು ಹಲಿ ಕುಣಿತಕ್ಕೆ ಹೆಜ್ಜೆ ಹಾಕಿದೆ. ವಿಶೇಷವಾಗಿ ಧನರಾಜ್ ಅವರ ಮಗುವನ್ನು ಕೂಡ ಬಿಗ್ಬಾಸ್ ಮನೆಗೆ ಬಂದಿದೆ. ಇಂದು ರಾತ್ರಿ ಧನರಾಜ್ ದಂಪತಿಗೆ ಸಂಬಂಧಿಸಿದ ಎಪಿಸೋಡ್ ಪ್ರಸಾರ ಆಗಲಿದೆ. ಬಿಗ್ಬಾಸ್ ವೀಕ್ಷಕರು ಅದನ್ನು ಕಣ್ತುಂಬಿಕೊಳ್ಳಲು ಫುಲ್ ಎಕ್ಸೈಟ್ ಆಗಿದ್ದಾರೆ.
ಇದನ್ನೂ ಓದಿ:BBK11: ‘ಯಾರ ಬಾಲ ಹಿಡಿಯಲಿಕ್ಕೂ ಹೋಗ್ಬೇಡ’ ಉಗ್ರಂ ಮಂಜುಗೆ ತಂಗಿ ಕೊಟ್ಟ ಸಲಹೆಯೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ