ತ್ರಿವಿಕ್ರಮ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಒಂದೇ ಫ್ರೇಮ್​ನಲ್ಲಿ ಬಿಗ್​ಬಾಸ್​ ದೋಸ್ತರು; ವಿಶೇಷ ಏನು?

author-image
Veena Gangani
Updated On
ತ್ರಿವಿಕ್ರಮ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಒಂದೇ ಫ್ರೇಮ್​ನಲ್ಲಿ ಬಿಗ್​ಬಾಸ್​ ದೋಸ್ತರು; ವಿಶೇಷ ಏನು?
Advertisment
  • ಬಿಗ್​ಬಾಸ್​ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದ ಈ ಮೂವರು
  • ತ್ರಿವಿಕ್ರಮ್​ ಜತೆ ಕಾಣಿಸಿಕೊಂಡ ಬಿಗ್​ಬಾಸ್​ ದೋಸ್ತರು
  • ನಟ ತ್ರಿವಿಕ್ರಮ್​ ಫ್ಯಾನ್ಸ್​ಗೆ ಸಿಕ್ತು ನೋಡಿ ಭರ್ಜರಿ ನ್ಯೂಸ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಕೆಲವು ಸ್ಪರ್ಧಿಗಳು, ಸಿನಿಮಾ, ಸೀರಿಯಲ್​, ವೆಬ್​ ಸೀರೀಸ್​, ಫೋಟೋಗ್ರಫಿ ಅಂತ ಬ್ಯುಸಿಯಾದ್ರೆ, ಇನ್ನೂ ಕೆಲವರು ತಮ್ಮ ಕುಟುಂಬದ ಜೊತೆಗೆ ಅದ್ಭುತವಾದ ಸಮಯವನ್ನು ಕಳೆಯುತ್ತಿದ್ದಾರೆ.

ಇದನ್ನೂ ಓದಿ: ಯಶ್ ದಯಾಳ್ ವಿರುದ್ಧ ಮತ್ತೊಬ್ಬ ಹುಡುಗಿಯಿಂದ ಕೇಸ್; ಈಗ ಪೋಕ್ಸೋ ಕೇಸ್​ ದಾಖಲು

publive-image

ಆಗಾಗ ಎಷ್ಟೇ ಬ್ಯುಸಿ ಇದ್ದರು ಸೀಸನ್ 11ರ ಸ್ಪರ್ಧಿಗಳು ಭೇಟಿಯಾಗುತ್ತಲೇ ಇರುತ್ತಾರೆ. ಐಶ್ವರ್ಯಾ ಸಿಂಧೋಗಿ, ಶಿಶಿರ್​ ಹಾಗೂ ಮೋಕ್ಷಿತಾ ಪೈ ಈ ಮೂವರು ಯಾವಾಗಲೂ ಭೇಟಿಯಾಗುತ್ತಲೇ ಇರುತ್ತಾರೆ. ಇವರ ಜೊತೆಗೆ ಭವ್ಯಾ ಗೌಡ ಹಾಗೂ ಅನುಷಾ ರೈ ಕೂಡ ದೇವಸ್ಥಾನ ಅಂತ ಸುತ್ತುತ್ತಲೇ ಇರುತ್ತಾರೆ. ಇದೀಗ ಒಂದೇ ಫ್ರೇಮ್​ನಲ್ಲಿ ತ್ರಿವಿಕ್ರಮ್​, ಹನುಮಂತ ಲಮಾಣಿ ಹಾಗೂ ಧನರಾಜ್​ ಆಚಾರ್​ ರೀ ಯೂನಿಯನ್ ಆಗಿದ್ದಾರೆ.

publive-image

ಹೌದು, ಮುದ್ದು ಸೊಸೆ ಸೀರಿಯಲ್​ನಲ್ಲಿ ಭದ್ರ ಪಾತ್ರದಲ್ಲಿ ನಟ ತ್ರಿವಿಕ್ರಮ್​ ನಟಿಸುತ್ತಿದ್ದಾರೆ. ಇದೇ ಸೀರಿಯಲ್​ನಲ್ಲಿ ಅತಿಥಿಯಾಗಿ ದೋಸ್ತಾ ಜೋಡಿ ಮೋಡಿ ಮಾಡೋದಕ್ಕೆ ಸಜ್ಜಾಗಿದೆ. ಮುದ್ದು ಸೊಸೆ ಧಾರಾವಾಹಿಯಲ್ಲಿ ಈ ಮೂವರು ಮುಂದಿನ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕಲರ್ಸ್​ ಕನ್ನಡ ಪ್ರೋಮೋವನ್ನು ರಿಲೀಸ್​ ಮಾಡಿದೆ.

ಇನ್ನೂ, ಮುದ್ದು ಸೊಸೆ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಧನರಾಜ್​ ಆಚಾರ್​, ಹನುಮಂತ ಹಾಗೂ ತ್ರಿವಿಕ್ರಮ್​ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ಫೋಟೋವನ್ನು ಧನರಾಜ್​ ಆಚಾರ್​ ಇನ್​ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ವಿಕ್ರಮ್ ಅವರ ಜೊತೆ ದೋಸ್ತಾ ಜೋಡಿ. ಮುದ್ದು ಸೊಸೆ ಧಾರಾವಾಹಿಯಲ್ಲಿ ಮೂವರು ಜೊತೆಗೆ ಅಭಿನಯ ಮಾಡುವ ಅವಕಾಶ ಸಿಕ್ಕ ಕ್ಷಣ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment