/newsfirstlive-kannada/media/post_attachments/wp-content/uploads/2024/10/BIGG-BOSS17.jpg)
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಆಗಿ ಓಪನಿಂಗ್ ಪಡೆದುಕೊಂಡು 5ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/10/bbk-117.jpg)
ಬಿಗ್​ಬಾಸ್​ ಮನೆಗೆ ಬಂದ ಮೊದಲ ದಿನವೇ ಜಗಳ ಮಾಡಿಕೊಂಡಿದ್ದಾರೆ. ಕಳೆದ ಸೀಸನ್​ನಲ್ಲಿ ನಡೆದ ಗಲಾಟೆ ರೀತಿಯಲ್ಲೇ ಬಿಗ್​ಬಾಸ್​ ಸ್ಪರ್ಧಿಗಳು ಆಡುತ್ತಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೆ ಜಗಳ ವಾದ ವಿವಾದ ಮಾಡಿಕೊಳ್ಳುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/10/bbk-118.jpg)
ಆದರೆ ಇದರ ಮಧ್ಯೆ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್​ ಆಚಾರ್ಯ ಗೋಲ್ಡನ್ ಸ್ಟಾರ್ ಗಣೇಶ್ ಅವರ ಡೈಲಾಂಗ್​ ಅನ್ನು ಹೇಳಿ ಎಲ್ಲಾ ಸ್ಪರ್ಧಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಹೌದು, ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬಳಿಕ ಧನರಾಜ್​ ಆಚಾರ್ಯ ಕೊಂಚ ಡಲ್​ ಆಗಿದ್ದರು. ಬಳಿಕ ಬಿಗ್​ಬಾಸ್​ ಧೈರ್ಯ ತುಂಬಿದ ಬಳಿಕ ಧನರಾಜ್​ ಅವರು ಮತ್ತೆ ಟ್ರಾಕ್​​ಗೆ ಬಂದಿದ್ದಾರೆ.
View this post on Instagram
ಈ ಬಾರಿಯ ಬಿಗ್​ಬಾಸ್​ ಮನೆಯಲ್ಲಿ ನಗುವೆ ಇಲ್ಲದಂತೆ ಆಗಿಬಿಟ್ಟಿದೆ. ಏಕೆಂದರೆ ಒಂದೇ ವಾರಕ್ಕೆ ಬಿಗ್​ಬಾಸ್​ ಮನೆಯಲ್ಲಿ ಗಲಾಟೆ, ಮನಸ್ಥಾಪ ಹೀಗೆ ಸಾಕಷ್ಟು ವಿಚಾರಗಳಿಂದ ಸ್ಪರ್ಧಿಗಳು ಬೇಸರ ಆಗಿದ್ದರು. ಇದೀಗ ಧನರಾಜ್​ ಅವರ ಕಾಮಿಡಿಗೆ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಮುಂಗಾರು ಮಳೆ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫೇಮಸ್​ ಡೈಲಾಗ್​ ಅನ್ನು ಬಿಗ್​ಬಾಸ್​ ಮನೆಯಲ್ಲಿ ರೀಕ್ರಿಯೇಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us