ಮೊಮ್ಮಗನಿಗೆ ವಿಶ್ ಮಾಡಿದ ರಜನಿಕಾಂತ್​.. ಡಿವೋರ್ಸ್​ ಪಡೆದರೂ ಮಗನಿಗಾಗಿ ಒಂದಾದ ಧನುಷ್​, ಐಶ್ವರ್ಯ!

author-image
Bheemappa
Updated On
ಮೊಮ್ಮಗನಿಗೆ ವಿಶ್ ಮಾಡಿದ ರಜನಿಕಾಂತ್​.. ಡಿವೋರ್ಸ್​ ಪಡೆದರೂ ಮಗನಿಗಾಗಿ ಒಂದಾದ ಧನುಷ್​, ಐಶ್ವರ್ಯ!
Advertisment
  • ತಂದೆ, ತಾಯಿ ಒಟ್ಟಿಗೆ ಬಂದಿದ್ದಕ್ಕೆ ಮಗ ತುಂಬಾ ಸಂತಸ
  • ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿದ ಐಶ್ವರ್ಯ, ಧನುಷ್
  • ಪ್ರೀತಿಯ ಮೊಮ್ಮಗನಿಗೆ ವಿಶ್ ಮಾಡಿದ ಸೂಪರ್ ಸ್ಟಾರ್​​

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೊಮ್ಮಗ ಹಾಗೂ ನಟ ಧನುಷ್ ಅವರ ಹಿರಿಯ ಮಗ ಯಾತ್ರಾ ಅವರು ಪದವಿ ಪೂರ್ಣಗೊಳಿಸಿದ್ದಾರೆ. ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮಗ ಯಾತ್ರಾನನ್ನು ತಾಯಿ ಐಶ್ವರ್ಯ ರಜನಿಕಾಂತ್ ಹಾಗೂ ಧನುಷ್ ಅವರು ತಬ್ಬಿಕೊಂಡು ಸಂತಸ ವ್ಯಕ್ತ ಪಡಿಸಿದ್ದಾರೆ.

ಕಾಲೇಜಿನ ಕಾರ್ಯಕ್ರಮದಲ್ಲಿ ಮೊಮ್ಮಗ ಪದವಿ ಪಡೆದು ಪೋಷಕರಾದ ಐಶ್ವರ್ಯ, ಧನುಷ್ ಅವರ ಜೊತೆ ಖುಷಿ ಪಡುತ್ತಿರುವ ಫೋಟೋವನ್ನು ರಜನಿಕಾಂತ್ ಅವರು ಹಂಚಿಕೊಂಡಿದ್ದಾರೆ. ಇದರ ಫೋಟೋವನ್ನು ರಜನಿಕಾಂತ್ ಅಲ್ಲದೇ ಧನುಷ್​ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಪ್ರೌಡ್​ ಪೇರೆಂಟ್ಸ್,​ ಯಾತ್ರಾ ಲವ್​ ಯು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Qualifier- 2ರಲ್ಲಿ ಯಾರಿಗೆ ಯಾರು ಚೆಕ್​ಮೇಟ್ ಕೊಡ್ತಾರೆ..? ಫೈನಲ್ ಟಿಕೆಟ್​ಗಾಗಿ ಬಿಗ್ ಫೈಟ್​

publive-image

ಯಾತ್ರಾ ಅವರು ಇತ್ತೀಚೆಗೆ ಪದವಿ ಪೂರ್ಣಗೊಳಿಸಿದ್ದರು. ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಧನುಷ್ ಹಾಗೂ ಧನುಷ್ ಅವರ ಮಾಜಿ ಪತ್ನಿ ಐಶ್ವರ್ಯ ರಜನಿಕಾಂತ್ ಇಬ್ಬರು ಒಟ್ಟಿಗೆ ಬಂದಿದ್ದರು. ತಂದೆ, ತಾಯಿ ಒಟ್ಟಿಗೆ ಬಂದ ಸಂತಸದಲ್ಲಿ ಯಾತ್ರಾ ಇಬ್ಬರನ್ನು ತಬ್ಬಿಕೊಂಡು ಆ ಕ್ಷಣವನ್ನು ಆನಂದಿಸಿದ್ದಾರೆ.

ನಟ ಧನುಷ್ ಹಾಗೂ ರಜನಿಕಾಂತ್ ಅವರ ಮಗಳು ಐಶ್ವರ್ಯ ಅವರು 2004ರಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಇವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ಆದರೆ ನಂತರದ ಸಂಸಾರದ ಸಾಗರದಲ್ಲಿ ತೊಡಕುಗಳು ಬಂದು 2022ರಲ್ಲಿ ಧನುಷ್ ಅವರು ಪತ್ನಿಯಿಂದ ದೂರವಾಗಿರುವುದರ ಬಗ್ಗೆ ಎಕ್ಸ್​ ಪೋಸ್ಟ್​ನಲ್ಲಿ ತಿಳಿಸಿದ್ದರು. 2024ರಲ್ಲಿ ಚೆನ್ನೈನ ಕುಟುಂಬ ಕಲ್ಯಾಣ ಕೋರ್ಟ್​​ನಿಂದ​ ಅಧಿಕೃತವಾಗಿ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು. ಆದರೂ ಮಕ್ಕಳ ಪ್ರತಿ ಬೆಳವಣಿಗೆಯಲ್ಲಿ ಧನುಷ್, ಐಶ್ವರ್ಯ ಒಟ್ಟಿಗೆ ಇದ್ದಾರೆ ಎನ್ನವುದು ಇದು ತೋರಿಸುತ್ತದೆ.


">May 31, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment