ಇವತ್ತಿನಿಂದ ಧರ್ಮಸ್ಥಳ ಕೇಸ್​ನ ಅಸಲಿ ರಹಸ್ಯ ಹುಡುಕಾಟ.. SITಗೆ ಹೆಚ್ಚುವರಿಯಾಗಿ 20 ಅಧಿಕಾರಿಗಳ ನೇಮಕ

author-image
Ganesh
Updated On
ಇವತ್ತಿನಿಂದ ಧರ್ಮಸ್ಥಳ ಕೇಸ್​ನ ಅಸಲಿ ರಹಸ್ಯ ಹುಡುಕಾಟ.. SITಗೆ ಹೆಚ್ಚುವರಿಯಾಗಿ 20 ಅಧಿಕಾರಿಗಳ ನೇಮಕ
Advertisment
  • ಇವತ್ತಿನಿಂದ ಧರ್ಮಸ್ಥಳ ಕೇಸ್​ನ ತನಿಖೆ ಚುರುಕುಗೊಳ್ಳಲಿದೆ
  • ಧರ್ಮಸ್ಥಳಕ್ಕೆ IPS ಪ್ರಣವ್ ಮೊಹಾಂತಿ ನೇತೃತ್ವದ ತಂಡ ಭೇಟಿ
  • ನಾಲ್ವರ ತಂಡಕ್ಕೆ ಹೊಸ ಟೀಂ ನಿಯೋಜನೆ ಮಾಡಿದ ಡಿಜಿಪಿ ಸಲೀಂ

ಧರ್ಮಸ್ಥಳ ಪ್ರಕರಣ ಬಗ್ಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದು, ಇಂದಿನಿಂದ ತನಿಖಾ ತಂಡ ಅಖಾಡಕ್ಕೆ ಇಳಿಯಲಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ.

ಈ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿ ನೀಡಿದ ದೂರಿನ ತನಿಖೆ ನಡೆಸಲಿದೆ. ಮೊದಲಿಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಲಿರೋ ಎಸ್‌ಐಟಿ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ, ಧರ್ಮಸ್ಥಳ ಪೊಲೀಸ್ ಇನ್ಸ್‌ಪೆಕ್ಟರ್‌ ಜೊತೆ ಪ್ರಕರಣದ ಮಾಹಿತಿ ಪಡೆಯಲಿದ್ದಾರೆ. ಬಳಿಕ ಅಧಿಕೃತವಾಗಿ ಪ್ರಕರಣ ಎಸ್‌ಐಟಿಗೆ ಹಸ್ತಾಂತರವಾಗಲಿದೆ.

SIT ತಂಡಕ್ಕೆ 20 ಮಂದಿ ಅಧಿಕಾರಿ, ಸಿಬ್ಬಂದಿ ನಿಯೋಜನೆ

ಪ್ರಕರಣ ತನಿಖೆಯು ಎಸ್​ಐಟಿಗೆ ಸವಾಲಿಗೆ ಕೆಲಸವಾಗಲಿದೆ. ಹಲವು ಆಯಾಮಗಳನ್ನು ತನಿಖೆ ನಡೆಸಲಿದ್ದು, ಇದಕ್ಕಾಗಿ ಪ್ರಣವ್ ಮೊಹಾಂತಿ‌ ನೇತೃತ್ವದ ಎಸ್​​ಐಟಿ ತಂಡಕ್ಕೆ 20 ಮಂದಿ ಅಧಿಕಾರಿ, ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಕುಸುಮ್ ಬಿ ಯೋಜನೆಯಡಿ ನೀರಾವರಿ ಪಂಪ್ ಸೆಟ್.. ಕೇಂದ್ರ, ರಾಜ್ಯ ಸರ್ಕಾರ ಎಷ್ಟು ಸಬ್ಸಿಡಿ ನೀಡುತ್ತವೆ?

  • ನಾಲ್ವರ ತಂಡಕ್ಕೆ ಹೊಸ ಟೀಂ ನಿಯೋಜನೆ ಮಾಡಿದ ಡಿಜಿಪಿ ಸಲೀಂ
  • ಎಂ.ಎನ್.ಅನುಚೇತ್, ಸೌಮ್ಯಲತಾ, ಜಿತೇಂದ್ರ ಕುಮಾರ್, ಸೈಮನ್ ನೇಮಕ
  • ಹೆಚ್ಚುವರಿಯಾಗಿ 20 ಮಂದಿ ಅಧಿಕಾರಿ, ಸಿಬ್ಬಂದಿ ನಿಯೋಜನೆ
  • ಪ್ರಣವ್ ಮೊಹಾಂತಿ‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಕ್ಕೆ ನಿಯೋಜನೆ
  • ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದ ಪೊಲೀಸ್​ ಅಧಿಕಾರಿಗಳು
  • ಐವರು ಐಪಿಎಸ್​, ಇಬ್ಬರು ಡಿಎಸ್​ಪಿ, 6 ಜನ ಇನ್ಸ್​ಪೆಕ್ಟರ್​ಗಳು
  • 8 ಮಂದಿ ಸಬ್​​ಇನ್ಸ್​ಪೆಕ್ಟರ್​ ಸೇರಿ ಒಟ್ಟು 20 ಹೆಚ್ಚುವರಿಗೆ ಅಧಿಕಾರಿಗಳು

ಒಟ್ಟಾರೆ.. ಧರ್ಮಸ್ಥಳ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂದಿನಿಂದ ಎಸ್​ಐಟಿ ಫೀಲ್ಡ್​ಗೆ ಇಳಿಯಲಿದ್ದು, ಅನಾಮಿಕ ದೂರುದಾರನ ಪತ್ರದ ಆಧಾರದ ಮೇಲೆ ತನಿಖೆ ನಡೆಯಲಿದೆ.

ಇದನ್ನೂ ಓದಿ: ಇವತ್ತು ಕನ್ನಡಿಗನಿಗೆ ಕೊಕ್ ಪಕ್ಕಾ.. ಪ್ಲೇಯಿಂಗ್​-XI ಆಯ್ಕೆಯೇ ಬಹುದೊಡ್ಡ ತಲೆನೋವು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment