newsfirstkannada.com

ಮಹಾಶಿವರಾತ್ರಿ ದಿನವೇ ಧರ್ಮಸ್ಥಳದ ಆನೆ ಲತಾ ವಿಧಿವಶ; 50 ವರ್ಷದ ಒಡನಾಟಕ್ಕೆ ಭಕ್ತರು ಭಾವುಕ

Share :

Published March 8, 2024 at 5:32pm

Update March 8, 2024 at 5:34pm

  50 ವರ್ಷಗಳಿಂದ ಧರ್ಮಸ್ಥಳದಲ್ಲಿ ಸೇವೆ ಸಲ್ಲಿಸಿತ್ತು ಮೃತ ಆನೆ

  ಇಂದು ಮಧ್ಯಾಹ್ನ ಅನಾರೋಗ್ಯದಿಂದ ಮೃತಪಟ್ಟ ಆನೆ ಲತಾ

  ಆನೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಭಕ್ತರು ದೌಡು

ಶಿವರಾತ್ರಿ ದಿನದಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಹೆಸರಿನ ಆನೆ ಮೃತಪಟ್ಟಿದೆ. ಆನೆ ಲತಾಗೆ 60 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನದ ವೇಳೆ ಅನಾರೋಗ್ಯದಿಂದ ಲತಾ ಮೃತಪಟ್ಟಿದೆ. ಕಳೆದ 50 ವರ್ಷಗಳಿಂದ ಆನೆ ಲತಾ ಶ್ರೀಕ್ಷೇತ್ರ ಧರ್ಮಸ್ಥಳದ ಸೇವೆಯಲ್ಲಿ ನಿರತವಾಗಿತ್ತು.

ಇದನ್ನು ಓದಿ: ಮಹಿಳಾ ದಿನಾಚರಣೆಯಂದೇ ದೊಡ್ಡ ಗಿಫ್ಟ್‌.. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಹೇಳಿದ್ದೇನು?

ಲತಾ ಸುಮಾರು 50 ವರ್ಷಗಳಿಂದ ಧರ್ಮಸ್ಥಳ ಜಾತ್ರಾಮಹೋತ್ಸವದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ ಭಕ್ತರ ಗಮನವನ್ನು ತನ್ನತ್ತ ಸೆಳೆಯುತ್ತಿತ್ತು. ಧರ್ಮಸ್ಥಳದಲ್ಲಿ ಪ್ರಸ್ತುತ ಲತಾ, ಲಕ್ಷ್ಮೀ ಹಾಗೂ ಶಿವಾನಿ ಎಂಬ ಹೆಸರಿನ ಆನೆಗಳಿದ್ದು, ಲತಾ ಸಾವಿನಿಂದ ಲಕ್ಷ್ಮೀ ಹಾಗೂ ಶಿವಾನಿ ಆನೆಗಳು ಮಂಕಾಗಿವೆ. ಸದ್ಯ ಲತಾ ಆನೆಯ ಅಂತ್ಯಸಂಸ್ಕಾರ ಶುಕ್ರವಾರ ಸಂಜೆ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ ಬಳಿ ಆಗಮಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾಶಿವರಾತ್ರಿ ದಿನವೇ ಧರ್ಮಸ್ಥಳದ ಆನೆ ಲತಾ ವಿಧಿವಶ; 50 ವರ್ಷದ ಒಡನಾಟಕ್ಕೆ ಭಕ್ತರು ಭಾವುಕ

https://newsfirstlive.com/wp-content/uploads/2024/03/latha.jpg

Load More