/newsfirstlive-kannada/media/post_attachments/wp-content/uploads/2025/07/DHARMASTHALA-CASE.jpg)
ದೂರು ಬಂದಿದೆ.. ಗಂಭೀರ ಆರೋಪ.. ಅಸಂಖ್ಯೆ ಸಾ*ವಿನ ಲೆಕ್ಕ ಹೇಳಿದ ಅನಾಮಿಕನ ಮಾತು ನಂಬಿದ ಸರ್ಕಾರ, ಎಸ್ಐಟಿ ರಚಿಸಿದೆ. ನಿನ್ನೆಯಿಂದ ತನಿಖೆ ಚುರುಕು ಪಡೆದಿದೆ. 15 * 8 ಅಡಿ ಜಾಗ ಅಗೆದ ಎಸ್ಐಟಿಗೆ ಯಾವುದೇ ಕುರುಹು ಸಿಕ್ಕಿಲ್ಲ.. ಇವತ್ತು ಮತ್ತೆ ಸಮಾಧಿ ರಹಸ್ಯ ಕೆದಕಲು ಮುಂದಾಗಲಿದೆ..
ಧರ್ಮಸ್ಥಳ ಪ್ರಕರಣದ ಸತ್ಯಾನ್ವೇಷಣೆಗೆ ಇಳಿದ ಸರ್ಕಾರ, SIT ರಚಿಸಿ ಸಮಾಧಿ ರಹಸ್ಯಕ್ಕೆ ಕೈಹಾಕಲಾಗಿದೆ. ಆ ದಟ್ಟ ಕಾನನದ ಮಧ್ಯೆ ಸತ್ಯ ಎದ್ದು ಬರುತ್ತಾ? ಅಥವಾ ಮಿಥ್ಯಗಳು ಸಮಾಧಿ ಆಗುತ್ತಾ ಅನ್ನೋದು ಕೆಲ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ನಾಳೆ ಮಹತ್ವದ ದಿನ.. ಕೋರ್ಟ್ ತೀರ್ಪಿನ ಮೇಲೆ ನಿಂತಿದೆ ರಾಜಕಾರಣಿ ಭವಿಷ್ಯ
‘ಬುರುಡೆ’ ರಹಸ್ಯ ಭೇದಿಸಲು ಗುದ್ದಲಿ ಪೂಜೆ!
ಧರ್ಮಸ್ಥಳ ತಲೆ ಬುರುಡೆ ಪ್ರಕರಣ ಸಂಚಲನ ಸೃಷ್ಟಿಸಿದ ಬಳಿಕ ತಲೆಗೊಂದು ಆಳು ಕಲ್ಲು ಎಸೆದವರೆ ಹೆಚ್ಚು. ಗೋರಿಯೊಳಗೆ ಘನಘೋರ ಸತ್ಯ ಅಡಗಿದೆ ಅಂತ ಹಬ್ಬಿದ ಸುದ್ದಿಗೆ ನಿನ್ನೆ ಗುದ್ದಲಿ ಪೂಜೆ ನೆರವೇರಿದೆ. ಮುಸುಕು ಹೊತ್ತ ಅಪರಿಚಿತ ಹಾಕಿದ ರೇಖೆಗಳನ್ನ ಅಗೆದರೂ ಮುಗಿದಿಲ್ಲ. 13 ಸ್ಥಳಗಳಲ್ಲಿ ಭೂಮಿ ಅಗೆದು ಅಗೆದು ಪರಿಶೀಲನೆ ನಡೆಸಲಾಗಿದೆ. ಮೊದಲು ಗುರುತಿಸಿದ್ದ ಸ್ಥಳದಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ. 10ಕ್ಕೂ ಹೆಚ್ಚು ಕಾರ್ಮಿಕರು ಕಷ್ಟಪಟ್ಟ ನಂತರ ಜೆಸಿಬಿಗಳು ಬಂದವು. ಉತ್ಖನನ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ ನಿಲ್ಲಿಸಲು ವಿಶ್ವದ ಯಾವ ನಾಯಕನೂ ಹೇಳಿಲ್ಲ.. ಕಾಂಗ್ರೆಸ್, ಟ್ರಂಪ್ಗೆ PM ಮೋದಿ ಡಿಚ್ಚಿ
ಬುರುಡೆ ರಹಸ್ಯ
- 15 ಅಡಿ ಅಗಲ, 8 ಅಡಿ ಆಳ ಅಗೆದ್ರೂ ಸಿಗದ ಬುರುಡೆ
- ಅನಾಮಧೇಯ ವ್ಯಕ್ತಿ ಗುರುತಿಸಿದ್ದ ಜಾಗಗಳಲ್ಲಿ ಹಿಟಾಚಿ
- ಪಾಯಿಂಟ್ ನಂಬರ್ ಒನ್ನಲ್ಲಿ ಕಾರ್ಯಾಚರಣೆ ಅಂತ್ಯ
- ಸ್ಥಳದಲ್ಲಿ 15 ಬೈ 8 ಅಡಿ ಅಗೆದ ಗ್ರಾ.ಪಂ 12 ಕಾರ್ಮಿಕರು
- ಇಂದು ಪಾಯಿಂಟ್ ನಂ-1 ಮತ್ತಷ್ಟು ಅಗೆಯುವ ಸಾಧ್ಯತೆ
- ಪಾಯಿಂಟ್ ನಂಬರ್-2 ಜಾಗ ಅಗೆಯುವ ಕಾರ್ಯಾಚಣೆ
- ಎಸ್ಐಟಿ ಅಧಿಕಾರಿಗಳ ನಿರ್ಧಾರದಂತೆ ಕಾರ್ಯಾಚರಣೆ
- 13 ಪಾಯಿಂಟ್ ಪೈಕಿ, ಒಂದು ಜಾಗ ಅಗೆದಿದ್ದು, 12 ಬಾಕಿ
SIT ಕಾರ್ಯಾಚರಣೆಗೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಮಂಗಳೂರು KMC ಆಸ್ಪತ್ರೆ ವೈದ್ಯರು ಕೂಡ ಹಾಜರಿದ್ದಾರೆ. ಇವತ್ತು ಸಮಾಧಿ ಸಿಗುತ್ತಾ ಇಲ್ವಾ ಅನ್ನೋದು ಗೊತ್ತಾಗಲಿದೆ.
ಇದನ್ನೂ ಓದಿ: ಪತ್ನಿ ವಿಜಯಲಕ್ಷ್ಮೀ ಜೊತೆ ದರ್ಶನ್ ದೇವರ ಮೊರೆ.. ಬೇಲ್ ಟೆನ್ಷನ್ ನಡುವೆ ದಚ್ಚು ಟೆಂಪಲ್ ರನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ