/newsfirstlive-kannada/media/post_attachments/wp-content/uploads/2025/07/DR_G_PARAMESHWARA_NEW.jpg)
ಬೆಂಗಳೂರು: ಧರ್ಮಸ್ಥಳದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್ಐಟಿ (Special Investigation Team) ಗೆ ವಹಿಸಿದೆ. ಸದ್ಯ ಈ ಸಂಬಂಧ ನ್ಯಾಯಯುತವಾಗಿ ತನಿಖೆ ನಡೆಸುವಂತೆ ಸೂಚನೆ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಈಗ ಒಬ್ಬ ವ್ಯಕ್ತಿ ದೂರು ಕೊಟ್ಟಿದ್ದಾರೆ. ನ್ಯಾಯಾಧೀಶರ ಮುಂದೆ 164 ಅಡಿ ಹೇಳಿಕೆಗಳು ದಾಖಲು ಆಗಿವೆ. ಸ್ಥಳೀಯವಾಗಿ ತನಿಖೆ ಮಾಡಿ ವಿವರವಾದ ವರದಿ ಕೊಡಿ ಎಂದು ಆದೇಶಿಸಿದ್ದೇವೆ. ಈ ಮಧ್ಯಯೇ ವೈಯುಕ್ತಿಕವಾಗಿ ಬೇರೆ ಬೇರೆ ರೀತಿಯಲ್ಲಿ ಸಿಎಂ, ಗೃಹ ಸಚಿವರ ಬಗ್ಗೆ ಏನೇನೊ ಮಾತಾಡಿದ್ದಾರೆ. ಆದರೂ ಟೀಕೆಗಳನ್ನು ಸಹಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ನ್ಯಾಯಯುತವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಹೆಚ್ಚಿನ ಮಟ್ಟದಲ್ಲಿ ತನಿಖೆ ಆಗಬೇಕು ಅಂತ ಹೇಳಿ ಬಹಳಷ್ಟು ಜನ ವ್ಯಾಖ್ಯಾನ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಸರ್ಕಾರ ಮುಚ್ಚಿಟ್ಟುಕೊಳ್ಳಂತಹದ್ದು ಏನೂ ಇಲ್ಲ. ಸರ್ಕಾರ ಯಾರನ್ನೂ ರಕ್ಷಿಸಬೇಕು ಎನ್ನುವುದು ಏನಿಲ್ಲ. ನ್ಯಾಯ ಸಿಗಬೇಕು ಅಷ್ಟೇ. ಅದಕ್ಕೆ ಉನ್ನತ ಮಟ್ಟದ ತನಿಖೆಗೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಧಾರ್ ಕಾರ್ಡ್ನಲ್ಲಿ ಎಷ್ಟು ವರ್ಷಗಳ ನಂತರ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಬೇಕು?
ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಜಿಪಿ ಹಾಗೂ ನಾವೆಲ್ಲಾ ಚರ್ಚೆ ಮಾಡಿ ಎಸ್ಐಟಿ ರಚನೆ ಮಾಡಿದ್ದೇವೆ. ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದ್ದೇವೆ. ಎಸ್ಐಟಿಯವರಿಗೆ ದೂರು ಏನು ಬಂದಿದೆ ಅದರ ಬಗ್ಗೆ ತನಿಖೆ ಮಾಡುವಂತೆ ಸೂಚಿಸಿದ್ದೇವೆ. ತನಿಖೆಗೆ ಕಾಲಾವಧಿಯ ಮಿತಿ ನಿಗದಿ ಮಾಡಿಲ್ಲ. ಆದಷ್ಟು ಬೇಗ ಸರ್ಕಾರಕ್ಕೆ ವರದಿ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆಯನ್ನ ಡಿಜಿಪಿಗೆ ತಿಳಿಸಬೇಕು. ಅಲ್ಲಿ ಸಿಕ್ಕಿರುವ ತಲೆಬುರುಡೆಯೋ, ಕಾಲೋ, ಕೈಯೋ ಅದರ ಬಗ್ಗೆ ಎಸ್ಐಡಿ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಅಲ್ಲಿ ಏನು ದೂರು ಬಂದಿದೆ ಅದರ ಮೇಲೆ ತನಿಖೆ ಆಗುತ್ತದೆ. ಈ ಪ್ರಕರಣದಲ್ಲಿ ಯಾರ ಒತ್ತಡಕ್ಕೂ ಮಣಿಯಲ್ಲ. ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ ತನಿಖೆಗೆ ಆದೇಶಿಸಿದ್ದೇವೆ. ಧರ್ಮರಾಜಕಾರಣ ಬೆರೆಸಲಾಗ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಮಾತನಾಡಿ, ಮೊದಲು ತನಿಖೆಯ ವರದಿ ಹೊರ ಬರಲಿ ಆ ಮೇಲೆ ಮಾತನಾಡೋಣ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ