/newsfirstlive-kannada/media/post_attachments/wp-content/uploads/2025/07/dharmasthala-case13.jpg)
ಮಂಗಳೂರು: ಧರ್ಮಸ್ಥಳದಲ್ಲಿ ಬರುಡೆಗಳ ರಹಸ್ಯ ತನಿಖೆ ಚುರುಕುಗೊಂಡಿದೆ. ಅನಾಮಿಕನ ವಿಚಾರಣೆ ಬಳಿಕ ಆತ ಹೇಳಿದ ಸ್ಥಳಗಳಲ್ಲಿ ಹಿಟಾಚಿ ಹಾಗೂ ಕಾರ್ಮಿಕರು ಮಣ್ಣು ಅಗೆದು ಅ*ಸ್ಥಿಪಂಜರಕ್ಕಾಗಿ ತಲಾಶ್ ಮಾಡ್ತಿದ್ದಾರೆ. ಮೊನ್ನೆ ಒಂದು ಹಾಗೂ ಇಂದು 4 ಕಡೆ ಅಗೆದ್ರೂ ಯಾವುದೇ ಕಳೇಬರ ಸಿಗದಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:ಎರಡನೇ ಪಾಯಿಂಟ್ನಲ್ಲೂ ಸಿಕ್ಕಿಲ್ಲ ಯಾವುದೇ ಕುರುಹು.. SIT ಮುಂದಿನ ಪ್ಲಾನ್ ಏನು?
ಧರ್ಮಸ್ಥಳ ಬುರುಡೆ ರಹಸ್ಯ ಭೇದಿಸುವ ಕಾರ್ಯಾಚರಣೆ ದಿನೇ ದಿನೇ ಭಾರೀ ಕುತೂಹಲ ಕೆರಳಿಸುತ್ತಿದೆ. ಧರ್ಮಸ್ಥಳದ ನೇತ್ರಾವತಿ ನದಿಯ ಸ್ನಾನಘಟ್ಟ ಪಕ್ಕದ ಕಾನನದಲ್ಲಿ ಎಸ್ಐಟಿ ಅಧಿಕಾರಿಗಳು ಕಾರ್ಮಿಕರ ಸಹಾಯದಿಂದ ಭೂಮಿ ಅಗೆಯುತ್ತಿದ್ದಾರೆ. ಮೊನ್ನೆ ಒಂದೇ ಸ್ಥಳ ಅಗೆದಿದ್ದವರು ಇಂದು ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ತನಿಖೆ ಮತ್ತಷ್ಟು ವೇಗ ಪಡೆದಿದೆ. ಮೊನ್ನೆ ಸೋಮವಾರ ಮೊದಲ ದಿನ ಅನಾಮಿಕ ಗುರುತಿಸಿದ 13 ಸ್ಥಳಗಳನ್ನು ಎಸ್ಐಟಿ ಅಧಿಕಾರಿಗಳು ಮಾರ್ಕಿಂಗ್ ಮಾಡಿದ್ರು.
ಮೊದಲ ಪಾಯಿಂಟ್ ಅಗೆಯುವ ಅರಣ್ಯ ಶಿಕಾರಿ ಕಾರ್ಯದಲ್ಲಿ ಯಾವುದೇ ಅಸ್ಥಿಪಂಜರವಾಗಲಿ, ಮೂಳೆಯಾಗಲಿ ಸಿಕ್ಕಿರಲಿಲ್ಲ. ನಿನ್ನೆ ಕೂಡ ಅನಾಮಿಕನ ಸಮೇತ ಎಸ್ಐಟಿ ಅಧಿಕಾರಿಗಳು ನೇತ್ರಾವತಿ ನದಿ ಸ್ನಾನಘಟ್ಟ ಪಕ್ಕದ ಕಾಡಿನಲ್ಲಿ ಮಾರ್ಕ್ ಮಾಡಿದ ಇನ್ನೀತರ ಸ್ಥಳಗಳಿಗೆ ಲಗ್ಗೆ ಇಟ್ಟಿದ್ರು. ಮಳೆಯ ನಡುವೆಯೂ 20 ಕಾರ್ಮಿಕರ ಸಹಾಯದಿಂದ ಹಲವು ಕಡೆ ಮಣ್ಣು ಅಗೆದಿದ್ದಾರೆ. ಎಸ್ಐಟಿ ಜೊತೆ ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ ನೆಲ ಅಗೆದಿದ್ದಾರೆ.
ಧರ್ಮಸ್ಥಳದ ಬಂಗ್ಲಗುಡ್ಡದ ಒಂದು ಸ್ಥಳ ಹಾಗೂ ಇಂದು ಒಂದಾದ ಮೇಲೊಂದು ಸ್ಥಳಗಳಲ್ಲಿ ಭೂಮಿ ಅಗೆದಿದ್ದಾರೆ. ಮೊದಲ ಪಾಯಿಂಟ್ನಲ್ಲಿ ಮಣ್ಣು ಅಗೆಯುವಾಗ ಒಂದು ಲಕ್ಷ್ಮೀ ಎಂಬ ಮಹಿಳೆಯ ಪ್ಯಾನ್ ಕಾರ್ಡ್, 1 ಡೆಬಿಟ್ ಕಾರ್ಡ್, ಕೆಂಪು ರವಿಕೆ ಪತ್ತೆಯಾಗಿದೆ. ಈ ID ಕಾರ್ಡ್ಗಳ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ದೂರುದಾರ ತೋರಿಸಿದ ಕೆಲ ಸ್ಥಳದಲ್ಲಿ JCB ಬಳಕೆ ಕಷ್ಟವಾಗಿರುವುದರಿಂದ ಕಾರ್ಮಿಕರಿಂದಲೇ ಮಣ್ಣು ಅಗೆದಿದ್ದಾರೆ.
ಬುರುಡೆ ರಹಸ್ಯದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಥಳಕು ಹಾಕಿಕೊಂಡಿದೆ. ಅನಾಮಿಕ ದೂರುದಾರ ವಿಚಾರಣೆಯಲ್ಲಿ ಅಧಿಕಾರಿಯ ಹೆಸರು ಉಲ್ಲೇಖಿಸಿದ್ದಾನೆ. ಪೊಲೀಸ್ ಔಟ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಅಧಿಕಾರಿ ಮಾತ್ರವಲ್ಲದೇ SIT ವಿಚಾರಣೆ ವೇಳೆ ಅನಾಮಿಕ ಹಲವರ ಹೆಸರು ಉಲ್ಲೇಖಿಸಿದ್ದಾನೆ. ಇವರಿಗೂ ನೋಟಿಸ್ ನೀಡಿ ವಿಚಾರಣೆ ಮಾಡುವ ಸಾಧ್ಯತೆ ಇದೆ.
ಒಟ್ಟಾರೆ ಮೊನ್ನೆ ಒಂದು ಕಡೆ ಇವತ್ತು 3 ಕಡೆ ಎಸ್ಐಟಿ ಪೊಲೀಸರು ಕಾರ್ಮಿಕರ ಸಹಾಯದಿಂದ ಅಗೆದಿದ್ದಾರೆ. ಸದ್ಯ ಧರ್ಮಸ್ಥಳದ ಮೇಲೆಯೇ ಎಲ್ಲರ ಚಿತ್ತ ನೆಟ್ಟಿದ್ದು ಮುಂದೇನಾಗುತ್ತೆ ಅನ್ನೋ ಕುತೂಹಲ ಮನೆಮಾಡಿದೆ. ಧರ್ಮಸ್ಥಳ ಬುರುಡೆ ಕೇಸ್ಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಕಚೇರಿ ಸ್ಥಾಪಿಸಲಾಗಿದೆ. ಈ ಬಗ್ಗೆ SIT ಮಾಹಿತಿ ನೀಡಿದೆ.
ಕದ್ರಿ ಮಲ್ಲಿಕಟ್ಟೆಯ ನಿರೀಕ್ಷಣಾ ಮಂದಿರದಲ್ಲಿ SIT ಕಚೇರಿ ನಿರ್ಮಾಣ ಮಾಡಲಾಗಿದೆ. ಪ್ರಕರಣದ ತನಿಖೆಗಾಗಿ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. ವಿಶೇಷ ತನಿಖಾ ತಂಡವು (SIT) ಮಂಗಳೂರು ನಗರದಲ್ಲಿ ಕಚೇರಿಯನ್ನು ಸ್ಥಾಪಿಸಿರುತ್ತದೆ. ಈ ಪ್ರಕರಣದ ಬಗ್ಗೆ SITಯನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು SIT ತಂಡವನ್ನು ಈ ಕೆಳಕಂಡಂತೆ ಸಂಪರ್ಕಿಸಬಹುದಾಗಿದೆ ಎಂದಿದೆ. ಇದರ ಜೊತೆಗೆ ಎಸ್ಐಟಿ ಸಂಪರ್ಕ ಮಾಡಲು 0824-2005301 ಫೋನ್ ನಂಬರ್ ಕೊಡಲಾಗಿದೆ. ಅಲ್ಲದೇ SIT ತಂಡ ವಾಟ್ಸಾಪ್ ನಂಬರ್ 8277986369 ಬಿಡುಗಡೆ ಮಾಡಿದೆ. ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯೊಳಗೆ ಸಂಪರ್ಕಕ್ಕಿಸಲು SIT ಮನವಿ ಮಾಡಿಕೊಂಡಿದೆ. ಹೆಚ್ಚಿನ ಸಂಪರ್ಕಕ್ಕಾಗಿ ಇ-ಮೇಲ್ ಐಡಿ [email protected] ಕೂಡ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ