/newsfirstlive-kannada/media/post_attachments/wp-content/uploads/2025/07/Dharmasthala2.jpg)
ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ಬೆನ್ನತ್ತಿರುವ SIT ಇವತ್ತು 2ನೇ ಪಾಯಿಂಟ್ನಲ್ಲಿ ಮಣ್ಣು ತೋಡಿದೆ. ಅಲ್ಲೂ ಏನೂ ಪತ್ತೆಯಾಗಿಲ್ಲ. ಮೊದಲೆರಡು ಕಡೆ ಏನೂ ಪತ್ತೆಯಾಗದ ಕಾರಣ ಈಗ ಮೂರನೇ ಪಾಯಿಂಟ್ ಬಳಿ ಮಣ್ಣು ಅಗೆಯಲು ಕಾರ್ಮಿಕರು ಮುಂದಾಗಿದ್ದಾರೆ.
ಇನ್ನು, ಅನಾಮಿಕ ಗುರುತಿಸಿದ ಪ್ರದೇಶಕ್ಕೆ ಪ್ರಣವ್ ಮೊಹಾಂತಿ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮತ್ತೊಂದು ಕಡೆ ತನಿಖೆಗೆ ಟ್ವಿಸ್ಟ್ ಸಿಕ್ಕಿದೆ. ಕೇಸ್ನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು ಹಾಕಿಕೊಂಡಿದೆ.
ಎರಡು ದಿನಗಳ ಕಾಲ ನಡೆದ SIT ವಿಚಾರಣೆ ವೇಳೆ ಅನಾಮಿಕ ದೂರುದಾರ ಹಲವರ ಹೆಸರನ್ನ ಉಲ್ಲೇಖಿಸಿದ್ದಾನೆ. ಅದ್ರಲ್ಲಿ ಮಂಗಳೂರಿನ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಹೆಸರನ್ನ ದೂರುದಾರ ಉಲ್ಲೇಖಿಸಿದ್ದಾನೆ. ಅದ್ರಂತೆ ಇದೀಗ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ