/newsfirstlive-kannada/media/post_attachments/wp-content/uploads/2025/07/dharmasthala-case.jpg)
ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ಬೆನ್ನತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ಮಣ್ಣು ಅಗೆಯುವಾಗ ಕೆಂಪು ರವಿಕೆ, ಒಂದು ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಪತ್ತೆಯಾಗಿದೆ.
ಇದನ್ನೂ ಓದಿ:ಎರಡನೇ ಪಾಯಿಂಟ್ನಲ್ಲೂ ಸಿಕ್ಕಿಲ್ಲ ಯಾವುದೇ ಕುರುಹು.. SIT ಮುಂದಿನ ಪ್ಲಾನ್ ಏನು?
ಇಂದು ಧರ್ಮಸ್ಥಳದ ನೇತ್ರಾವತಿ ತಟದಲ್ಲಿ 1, 2,3 ನೇ ಪಾಯಿಂಟ್‌ನಲ್ಲಿ ಮಣ್ಣು ಅಗೆಯಲಾಗಿತ್ತು. 1, 2,3ನೇ ಪಾಯಿಂಟ್‌ನಲ್ಲಿ ಏನೂ ಸಿಕ್ಕಿರಲಿಲ್ಲ. ಆದ್ರೆ, ಇದೀಗ ಮಣ್ಣು ಅಗೆಯುವಾಗ ಪಾಯಿಂಟ್-1ರಲ್ಲಿ ಒಂದು ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಪತ್ತೆಯಾಗಿದ್ದು, ಈ ಬಗ್ಗೆ ಎಸ್ಐಟಿ ಟೀಂ ತನಿಖೆ ಮಾಡುತ್ತಿದೆ.
ಅಲ್ಲದೇ ಪಾಯಿಂಟ್-1ರಲ್ಲಿ ಪ್ಯಾನ್,ಡೆಬಿಟ್ ಕಾರ್ಡ್ ಜೊತೆಗೆ ಕೆಂಪು ರವಿಕೆ ಪತ್ತೆಯಾಗಿದೆ. ಲಕ್ಷ್ಮೀ ಎನ್ನುವ ಮಹಿಳೆಯ ಪ್ಯಾನ್ ಕಾರ್ಡ್ ಎಂದು ಅನನ್ಯ ತಾಯಿ ಸುಜಾತ ಭಟ್ ವಕೀಲರಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತನಿಖಾ ಹಂತದಲ್ಲಿರುವಾಗಲೇ ವಕೀಲ ಮಂಜುನಾಥ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿನ್ನೆ ಪಾಯಿಂಟ್1ರ ಸ್ಥಳದಲ್ಲಿ ಲಕ್ಷ್ಮೀ ಎಂಬ ಮಹಿಳೆಯ ಪ್ಯಾನ್ ಕಾರ್ಡ್ ಪತ್ತೆಯಾಗಿದೆ. ಅಲ್ಲದೇ ಪುರುಷನ ಡೆಬಿಟ್ ಕಾರ್ಡ್ಗಳು ಪತ್ತೆಯಾಗಿವೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ 20 ಕಾರ್ಮಿಕರಿಂದ ದೂರುದಾರನ ನಿರ್ದೇಶನದಂತೆ ಅಗೆಯೋ ಕಾರ್ಯಾಚರಣೆ ಮುಂದುವರಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ