ಧರ್ಮಸ್ಥಳ ಕೇಸ್​ ತನಿಖೆ ಚುರುಕು; ರಹಸ್ಯ ಹೇಳ್ತೀನಿ ಎಂದಿದ್ದ ದೂರುದಾರನ ವಿಚಾರಣೆ ಹೇಗಿತ್ತು..?

author-image
Ganesh
Updated On
ಧರ್ಮಸ್ಥಳ ಕೇಸ್​ ತನಿಖೆ ಚುರುಕು; ರಹಸ್ಯ ಹೇಳ್ತೀನಿ ಎಂದಿದ್ದ ದೂರುದಾರನ ವಿಚಾರಣೆ ಹೇಗಿತ್ತು..?
Advertisment
  • ಎಸ್‌ಐಟಿ ವಿಚಾರಣೆಗೆ ದೂರುದಾರ ವ್ಯಕ್ತಿ ಹಾಜರು
  • ವಿಶೇಷ ತನಿಖಾ ತಂಡದಿಂದ 8 ಗಂಟೆಗಳ ಕಾಲ ವಿಚಾರಣೆ
  • 6 ಗಂಟೆಗಳ ವಿಚಾರಣೆ.. ದೂರುದಾರನಿಗೆ ಪ್ರಶ್ನೆಗಳ ಸುರಿಮಳೆ

ಧರ್ಮಸ್ಥಳ ಪ್ರಕರಣದ ರಸಹ್ಯ ಪತ್ತೆ ಹಚ್ಚಲು ಎಸ್​ಐಟಿ ತಂಡ ಫೀಲ್ಡ್​ಗೆ ಇಳಿದಿದೆ. ಅನಾಮಿಕ ವ್ಯಕ್ತಿ ಎಸ್​ಐಟಿ ಮುಂದೆ ಹಾಜರಾಗಿದ್ದು, ಸುದೀರ್ಘ ವಿಚಾರಣೆ ಎದುರಿಸಿದ್ದಾನೆ. 8 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದ ಮುಸುಕುಧಾರಿ ವ್ಯಕ್ತಿ, ಅಜ್ಞಾತ ಸ್ಥಳಕ್ಕೆ ಶಿಫ್ಟ್​ ಆಗಿದ್ದಾನೆ.

ಎಸ್‌ಐಟಿ ವಿಚಾರಣೆಗೆ ದೂರುದಾರ ವ್ಯಕ್ತಿ ಹಾಜರು!

SIT ವಿಚಾರಣೆಯ ಪ್ರಮುಖ ಹಂತ ಅಂದ್ರೆ, ಶ*ವ ಹೂತಿಟ್ಟಿರೋ ಬಗ್ಗೆ ದೂರು ಕೊಟ್ಟಿದ್ದ ಅನಾಮಿಕ ವ್ಯಕ್ತಿಯ ವಿಚಾರಣೆ ನಡೆದಿದೆ. ದೂರುದಾರನನ್ನ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರು SIT ಕಚೇರಿಗೆ ಕರೆಸಿ ವಿಚಾರಣೆ ನಡೆಸಿದೆ. ದೂರುದಾರ ವ್ಯಕ್ತಿ ಕೇರಳದಿಂದ ನಿನ್ನೆ ಬೆಳಗ್ಗೆ 10.55 ಕ್ಕೆ ವಕೀಲರ ಜೊತೆಗೆ IB ತಲುಪಿ 11 ಗಂಟೆಗೆ ವಿಚಾರಣೆಗೆ ಹಾಜರಾಗಿದ್ದ.

ದೂರುದಾರನ ಗುರುತು ಯಾರಿಗೂ ಸಿಗಬಾರದು ಅಂತ ಮುಖಕ್ಕೆ ಮುಸುಕು ಹಾಕಿ‌‌ ಕರೆದುಕೊಂಡು ಬರಲಾಗಿತ್ತು. SIT ಕಚೇರಿಯಲ್ಲಿ SIT ಅಧಿಕಾರಿಗಳಾದ ಜಿತೇಂದ್ರ ದಯಾಮ ಹಾಗೂ ಅನುಚೇತ್ ವಿರಾಮ ನೀಡದೇ ಸತತ ವಿಚಾರಣೆ ನಡೆಸಿದ್ರು. IB ಕಚೇರಿಗೆ ಊಟ ತರಿಸಿ ವಿಚಾರಣೆ ಮುಂದುವರಿಸಿದ್ರು. ಸತತ 6 ಗಂಟೆಗಳ ಹೆಚ್ಚು ಕಾಲ ವಿಚಾರಣೆ ಮುಂದುವರಿಸಿದ್ದು, ದೂರುದಾರನಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.. ವೈಯಕ್ತಿಕ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ವಿಡಿಯೋ ಮೂಲಕ ದಾಖಲಿಸಿದ್ದಾರೆ.

ಇದನ್ನೂ ಓದಿ: ಕೋಟಿ ಕೋಟಿ ಮೌಲ್ಯದ ಆಸ್ತಿ, 15 ಕಂಪನಿ, ಐಷಾರಾಮಿ ಜೀವನ ಎಲ್ಲ ಬಿಟ್ಟ.. ಶಿವಭಕ್ತನಾದ ಉದ್ಯಮಿ!

ದೂರುದಾರ ವ್ಯಕ್ತಿ ನೀಡಿದ ಉತ್ತರಕ್ಕೂ ಹಾಗೂ ಹಿಂದೆ ನೀಡಿದ ಉತ್ತರಕ್ಕೂ ತಾಳೆಯಾಗುತ್ತಾ ನೋಡಿದ್ದಾರೆ. ಹಿಂದೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಶ್ನೆಗಳನ್ನು ಕೇಳಿದ್ದಾರೆ. SIT ಅಧಿಕಾರಿಗಳ, ಪ್ರಶ್ನೆಗೆ ಯಾವುದೇ ಗೊಂದಲ ನೀಡದೇ ಉತ್ತರ ನೀಡಿದ್ದಾನೆ ಎಂದು ತಿಳಿದುಬಂದಿದೆ. ವಕೀಲರು ಯಾವುದೇ ಗೊಂದಲದ ಉತ್ತರ ನೀಡದಂತೆ ವ್ಯಕ್ತಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಧರ್ಮಸ್ಥಳ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದೆ. ಎಸ್‌ಐಟಿ ಎಂಟ್ರಿ ಕೊಟ್ಟು ಸಮಗ್ರ ಮಾಹಿತಿ ಕಲೆ ಹಾಕಿದೆ. ಮುಂದಿನ ತನಿಖೆಗಾಗಿ SIT ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿ ಕೂಡ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇದೆ.. ಇನ್ನೂ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದ ಮುಸುಕುಧಾರಿ ವ್ಯಕ್ತಿ, ಅಜ್ಞಾತ ಸ್ಥಳಕ್ಕೆ ಶಿಫ್ಟ್​ ಆಗಿದ್ದಾನೆ.

ಇದನ್ನೂ ಓದಿ: ಸೊಸೆ ವಿರುದ್ಧ ಅತ್ತೆಗೆ ವಿಷ ನೀಡಿ ಜೀವ ತೆಗೆದ ಆರೋಪ; ಭಾರೀ ಸಂಚಲನ ಸೃಷ್ಟಿಸಿದ ಪತಿ, ಪತ್ನಿ ಪ್ರತ್ಯಾರೋಪಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment