5 ಸ್ಥಳಗಳಲ್ಲೂ ಸಿಗಲಿಲ್ಲ ಕಳೇಬರ.. SIT ಹೆಲ್ಪ್​ಲೈನ್​​ ರಿಲೀಸ್, ಮುಂದಿನ ತನಿಖೆ ತೀವ್ರ ಕುತೂಹಲ..!

author-image
Ganesh
Updated On
5 ಸ್ಥಳಗಳಲ್ಲೂ ಸಿಗಲಿಲ್ಲ ಕಳೇಬರ.. SIT ಹೆಲ್ಪ್​ಲೈನ್​​ ರಿಲೀಸ್, ಮುಂದಿನ ತನಿಖೆ ತೀವ್ರ ಕುತೂಹಲ..!
Advertisment
  • ದೂರುದಾರ ತೋರಿಸಿದ 5 ಸ್ಥಳಗಳಲ್ಲೂ ಸಿಗಲಿಲ್ಲ ಅಸ್ಥಿ*ಪಂಜರ
  • ಉಳಿದ 8 ಕಡೆ 2 ದಿನಗಳ ಕಾಲ ನಡೆಯಲಿದೆ ಕಾರ್ಯಾಚರಣೆ!
  • ಸ್ಥಳ ಮಹಜರು ಪ್ರಕ್ರಿಯೆ ನಡೆಸದಿರಲು ಎಸ್​​ಐಟಿ ತೀರ್ಮಾನ

ಧರ್ಮಸ್ಥಳ ಪ್ರಕರಣದ ಬಗ್ಗೆ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ಎಸ್ಐಟಿ ಕಳೆದ ಒಂದು ವಾರದಿಂದ ನಿರಂತರ ಕಾರ್ಯಚರಣೆ ನಡೆಸುತ್ತಿದೆ. ಭೂಮಿ ಅಗೆದು ಕಳೇಬರ ಹುಡುಕುವ ಕಾರ್ಯ 2 ದಿನ ಪೂರ್ಣಗೊಂಡಿದೆ.. 13ರ ಪೈಕಿ ಐದು ಕಡೆ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಇವತ್ತು ಕಾರ್ಯಾಚರಣೆ ನಡೆಯಲಿದ್ದು, ಮುಂದೇನು ಅನ್ನೋ ಕುತೂಹಲ ಕಾಡ್ತಿದೆ..

ಬಂಗ್ಲೆ ಗುಡ್ಡ.. ಇಲ್ಲಿ ಅಗೆಯುವ ಕಾರ್ಯಾಚರಣೆಯತ್ತ ಇಡೀ ರಾಜ್ಯವೇ ಕಣ್ಬಿಡದೇ ನೋಡ್ತಿದೆ.. ಮುಖಕ್ಕೆ ಮಾಸ್ಕ್​​ ಹೊತ್ತ ಅನಾಮಿಕನ ಕಂಪ್ಲೇಂಟ್​​​ ರಾಜ್ಯದಲ್ಲಿ ಸಂಚಲನ ಎಬ್ಬಿಸಿದೆ. ಮೊದಲ ದಿನ ಒಂದು, 2ನೇಯ ದಿನ ನಾಲ್ಕು.. ಒಟ್ಟು ಐದು ಕಡೆ ಗುಂಡಿ ತೋಡಿ ಹುಡುಕಾಟ ನಡೆಸಿದ್ರೂ ಯಾವ ಕುರುಹು ಸಿಕ್ಕಿಲ್ಲ.

ಇದನ್ನೂ ಓದಿ: Baba Vanga: ಮತ್ತೆ ನಿಜವಾಯ್ತು ಬಾಬಾ ವಾಂಗಾ ನುಡಿದ ಭವಿಷ್ಯ.. ಎಲ್ಲರಿಗೂ ಅಚ್ಚರಿ.. ಏನದು?

publive-image

ದೂರುದಾರ ತೋರಿಸಿದ 5 ಸ್ಥಳಗಳಲ್ಲೂ ಸಿಗಲಿಲ್ಲ ಅಸ್ಥಿಪಂಜರ

ಧಾರಾಕಾರ ಮಳೆ ನಡುವೆ ಕಾರ್ಯಾಚರಣೆ ನಡೆದಿದೆ.. ಆದ್ರೆ, 2ನೇ ದಿನ ಮಾರ್ಕಿಂಗ್​ ಸ್ಥಳಗಳಲ್ಲಿ ಸಿಕ್ಕಿದ್ದು ಶೂನ್ಯ.. ಐದು ಸ್ಥಳಗಳಲ್ಲಿ ಯಾವುದೇ ಎಲುಬಿನ ಹಂದರ ಕಾಣಿಸಿಲ್ಲ.. ಕುರುಹು ಸಿಗದಿದ್ರೆ ಬೇರೆ ಸ್ಥಳ ಗುರುತು ಮಾಡದಿರಲು ಎಸ್‌ಐಟಿ ನಿರ್ಧಾರ ಮಾಡಿದೆ.

ಎಲ್ಲಿಗೆ ಬಂತು ‘ಬುರುಡೆ’ ಪುರಾಣ?

  • ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೋಹಂತಿ, ಡಿಐಜಿ ಅನುಚೇತ್
  • ಎಸ್​​ಪಿ ಜಿತೇಂದ್ರ, 20 ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ
  • ಬೆಳಗ್ಗೆ 11 ರಿಂದ ಸಂಜೆ 5:30.. ಕೇವಲ ಅರ್ಧ ಗಂಟೆ ಮಾತ್ರ ಬ್ರೇಕ್
  • ಆದ್ರೆ ಅಗೆದು ತೆಗೆದ ಜಾಗದಲ್ಲಿ ಪೂರಕವಾದ ದಾಖಲೆಗಳು ಸಿಕ್ಕಿಲ್ಲ
  • ಗುರುತಿಸಿದ 13 ಜಾಗದಲ್ಲಿ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ
  • ಹೀಗಾಗಿ ಮಹಜರು ಪ್ರಕ್ರಿಯೆ ನಡೆಸದಿರಲು ಎಸ್​​ಐಟಿ ತೀರ್ಮಾನ

ಧರ್ಮಸ್ಥಳ ಪ್ರಕರಣ​​​.. ಎಸ್​ಐಟಿ ಹೆಲ್ಪ್​ಲೈನ್​​ ರಿಲೀಸ್​​!

ಇದೇ ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಎಸ್​​ಐಟಿ ಕಚೇರಿ ಸ್ಥಾಪಿಸಿದೆ.. ಅಲ್ಲದೆ, ಹೆಲ್ಪ್​ಲೈನ್​​ ರಿಲೀಸ್​​ ಮಾಡಿದೆ..

ಹೆಲ್ಪ್​ಲೈನ್​​ ರಿಲೀಸ್​​

  • ಎಸ್​ಐಟಿ ಸಂಪರ್ಕಕ್ಕೆ ಫೋನ್ ನಂಬರ್ 0824-2005301
  • ವಾಟ್ಸಾಪ್ ನಂಬರ್ 8277986369 ಬಿಡುಗಡೆ ಮಾಡಿದ SIT
  • ಬೆ.10ರಿಂದ ಸಂ. 5ಗಂಟೆಯೊಳಗೆ ಸಂಪರ್ಕಕ್ಕೆ SIT ಮನವಿ
  • ಹೆಚ್ಚಿನ ಸಂಪರ್ಕಕ್ಕಾಗಿ ಇಮೇಲ್ ಐಡಿ [email protected]
  • ಕಚೇರಿ ಸ್ಥಾಪನೆ ಬಗ್ಗೆ SIT ಅಧಿಕಾರಿಗಳಿಂದ ಅಧಿಕೃತ ಮಾಹಿತಿ

ಬೆಳವಣಿಗೆ ಬಗ್ಗೆ ಮಾತ್ನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡುರಾವ್, ತನಿಖೆಯಿಂದ ನಿಜಾಂಶ ಗೊತ್ತಾಗಲಿದೆ.. ಇದಕ್ಕೆ ಎಸ್ಐಟಿಯೂ ಬೇಕಾಗಿರಲಿಲ್ಲ ಎಂದಿದ್ದಾರೆ. ಇಂದು ನಡೆಯುವ ಕಾರ್ಯಾಚರಣೆಯಲ್ಲಿ ಮತ್ತಷ್ಟು ಮಾನವ ಶ್ರಮವನ್ನು ಬಳಸಿ ಸಮಾಧಿ ಇದೆ ಎನ್ನಲಾದ ಜಾಗ ಅಗೆಯುವ ಸಾಧ್ಯತೆ ಇದೆ. 13 ಸ್ಥಳಗಳು ಮುಂದಿನ ಎರಡು ದಿನಗಳ ಒಳಗೆ ಕಂಪ್ಲೀಟ್ ಆಗಲಿದ್ದು, ಮುಂದಿನ ತನಿಖೆ ಹೇಗಿರಲಿದೆ ಅನ್ನೋದು ಕುತೂಹಲ.

​​ಇದನ್ನೂ ಓದಿ: ಇಂಗ್ಲೆಂಡ್​ಗೆ ಮಾಸ್ಟರ್​ ಸ್ಟ್ರೋಕ್ ನೀಡಲು ಸನ್ನದ್ಧ.. ಭಾರತ ತಂಡದಲ್ಲಿ ಯಾರು ಆಡ್ತಾರೆ, ಯಾರು ಆಡಲ್ಲ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment