Advertisment

ರಸ್ತೆ ಡಿವೈಡರ್ ಮೇಲೇರಿ ಪಲ್ಟಿ ಹೊಡೆದ ಐಷಾರಾಮಿ ಕಾರು.. ಅಪಘಾತ ತೀವ್ರತೆಗೆ ಕಾರು ಚಾಲಕ ಸಾವು

author-image
AS Harshith
Updated On
ರಸ್ತೆ ಡಿವೈಡರ್ ಮೇಲೇರಿ ಪಲ್ಟಿ ಹೊಡೆದ ಐಷಾರಾಮಿ ಕಾರು.. ಅಪಘಾತ ತೀವ್ರತೆಗೆ ಕಾರು ಚಾಲಕ ಸಾವು
Advertisment
  • ಅಪಘಾತದಲ್ಲಿ ನಜ್ಜುಗುಜ್ಜಾದ ಐಷಾರಾಮಿ ಕಾರು
  • ಡಿವೈಡರ್ ಮೇಲೇರಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ
  • ನಸುಕಿನ ಜಾವದಲ್ಲಿ ನಡೆದ ಅಪಘಾತ, ಚಾಲಕ ಚಿಕಿತ್ಸೆ ಫಲಿಸದೆ ಸಾವು

ಮಂಗಳೂರು: ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಡಿವೈಡರ್ ಮೇಲೇರಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅಪಘಾತದಲ್ಲಿ ಕಾರು ಚಾಲಕ ಸಾವನ್ನಪ್ಪಿದ್ದಾರೆ.

Advertisment

publive-image

ಇದನ್ನೂ ಓದಿ: ನನ್ನ ಮದುವೆಯಾಗು..! ಗಂಡ ಮತ್ತು 3 ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ ಮಹಿಳೆ!

ಉಜಿರೆ ನಿವಾಸಿ ಪ್ರಜ್ವಲ್ ನಾಯಕ್​ ಮೃತ ದುರ್ದೈವಿ. ಅಪಘಾತದ ತೀವ್ರತೆಗೆ ಐಷಾರಾಮಿ ಬೆಂಜ್ ಕಾರು ನಜ್ಜುಗುಜ್ಜಾಗಿದೆ. ಡಿವೈಡರ್ ಮೇಲೇರಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಕ್ಕದ ರಸ್ತೆಗೆ ಉರುಳಿ ಬಿದ್ದಿದೆ.

publive-image

ಇದನ್ನೂ ಓದಿ: ರೈತರಿಗೆ ಖುಷಿ ಸುದ್ದಿ! ಒಂದೇ ದಿನಕ್ಕೆ 5 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಳ! ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ?

Advertisment

ಇಂದು ನಸುಕಿನ ಜಾವದಲ್ಲಿ ಅಪಘಾತ ನಡೆದಿದೆ. ಅಪಘಾತದಲ್ಲಿ ಪ್ರಜ್ವಲ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಕಾರಿಯಾಗದೆ ಪ್ರಜ್ವಲ್ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment