newsfirstkannada.com

‘ಸಲಾರ್’ ಏರಿಯಾದಂತೆ ಬದಲಾಯ್ತು ವಾಣಿಜ್ಯ ನಗರಿ: ಐದು ದಿನ.. 5 ಭೀಕರ ಕೊಲೆ.. ಬೆಚ್ಚಿಬಿದ್ದ ಧಾರವಾಡ ಮಂದಿ

Share :

Published February 9, 2024 at 8:55am

    ಅನೈತಿಕ ಸಂಬಂಧಕ್ಕೆ ಅಂಗವಿಕಲ ಮಗಳು ಅಡ್ಡಿ ಎಂದು ಕೊಲೆ

    ಶಾಂತಿಗೆ ಹೆಸರುವಾಸಿಯಾಗಿದ್ದ ಧಾರವಾಡದಲ್ಲಿ ರಕ್ತ ಚೆಲ್ಲಿದೆ

    ಪೊಲೀಸರ ನಿದ್ದೆ ಗೆಡಿಸಿರುವ 5 ದಿನಗಳಲ್ಲಿ 5 ಭೀಕರ ಕೊಲೆಗಳು

ಶೈಕ್ಷಣಿಕ ಜಿಲ್ಲೆ, ಸಂಸ್ಕೃತಿ ಬೀಡು ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಪೇಡಾನಗರಿ ಧಾರವಾಡದಲ್ಲಿ ರಕ್ತದೋಕುಳಿ ನಿಲ್ಲೋ ಹಾಗೇ ಕಾಣುತ್ತಿಲ್ಲ. ಧಾರವಾಡದಲ್ಲಿ ಎಲ್ಲೇ ನಿಂತು ಒಂದು ಕಲ್ಲು ಎಸೆದರೂ, ಅದು ಬಿಳೋದು ಸಾಹಿತಿಗಳ ಮನೆಯ ಮೇಲೆ ಎಂಬ ಹೆಗ್ಗಳಿಗೆ ಪಾತ್ರವಾದದ್ದು, ಇಂತಹ ನಗರದಲ್ಲಿ ದಿನಕೊಂದು ಕೊಲೆ ಪ್ರಕರಣ ಬೆಳಕಿಗೆ ಬರುತ್ತಲೇ ಇವೆ. ಅನೈತಿಕ ಸಂಬಂಧ, ಆಸ್ತಿ ವಿಚಾರ, ಕ್ಷುಲ್ಲಕ ಕಾರಣಕ್ಕೆ ನಡೆದ ಕೊಲೆಗಳು ಈಗ ಧಾರಾನಗರಿ ಜನತೆಯನ್ನು ಬೆಚ್ಚಿ ಬೀಳಿಸುತ್ತಿವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯಾ ಅನ್ನೋ ಪ್ರಶ್ನೆ ನಾಗರಿಕರಲ್ಲಿ ಹುಟ್ಟು ಹಾಕುತ್ತಿದೆ. ಹಾಗಾದ್ರೆ ಧಾರವಾಡದಲ್ಲಿ ಒಂದೇ ವಾರಕ್ಕೆ 5 ಕೊಲೆಗಳು ನಡೆದಿವೆ.

ಶಾಂತಿ ಪ್ರಿಯರೇ ವಾಸಿಸುವ ಸಾಹಿತ್ಯಗಳಿಂದ ಕೂಡಿದ ಧಾರವಾಡದಲ್ಲಿ ರಕ್ತ ಚೆಲ್ಲಾಡ್ತಿದೆ. ದಿನದಿಂದ ದಿನಕ್ಕೆ ಕೊಲೆ ಪ್ರಕರಣಗಳು ಹೆಚ್ತಿವೆ. ಎಲ್ಲಾ ಕೊಲೆ ಪ್ರಕರಣಗಳು ಸಹ ಅವಳಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಗಿರುವುದು ಪೋಲೀಸರ ನಿದ್ದೆ ಗೆಡಿಸಿದೆ. ಕಳೆದ 5 ದಿನಗಳಲ್ಲಿ ಐದು ಕೊಲೆಗಳು ನಡೆದಿದ್ದು, ಜನರನ್ನ ಬೆಚ್ಚಿ ಬೀಳಿಸಿದೆ.

ಪ್ರಕರಣ 01- ಫೆಬ್ರವರಿ 4ರಂದು ಹುಡುಗಿಗಾಗಿ ಹತ್ಯೆ​

ಫೆಬ್ರವರಿ 4 ರಂದು ಧಾರವಾಡದ ಶೆಟ್ಟರ್ ಕಾಲೋನಿಯಲ್ಲಿ ಸುನೀಲ್ ಎಂಬ ಯುವಕನನ್ನು ಹುಡುಗಿಯ ವಿಚಾರಕ್ಕೆ ಕೊಲೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಪ್ರಕರಣ 02- ಫೆಬ್ರವರಿ 5ರಂದು ಆಸ್ತಿ ವಿಚಾರಕ್ಕೆ ಮರ್ಡರ್​

ಫೆಬ್ರವರಿ 5 ರಂದು ಧಾರವಾಡದ ಟೈವಾಕ್ ಕ್ವಾಟ್ರಸ್​ನಲ್ಲಿ ಆಸ್ತಿ ವಿಚಾರದ ಕಾಗದ ಪತ್ರದ ಸಲುವಾಗಿ ಕಲ್ಲನಗೌಡ ಪಾಟೀಲ್ ಎಂಬಾತನನ್ನ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಐವರನ್ನ ಬಂದಿಸಿದ್ದಾರೆ.

ಪ್ರಕರಣ 03- ಫೆಬ್ರವರಿ 6ರಂದು ಸಹೋದರನಿಂದ ವೃದ್ಧೆ ಕೊಲೆ​

ಫೆಬ್ರವರಿ 6 ರಂದು ನವಲೂರಿನ ಕರೆವ್ವ ಈರಬಗೇರಿ ಎಂಬ ವೃದ್ಧೆಯನ್ನ 40 ಕೋಟಿಯ ಆಸ್ತಿ ವಿಚಾರಕ್ಕೆ ಸಹೋದರನೇ ವಿಠ್ಠಲ ದೇವರ ದೇವಸ್ಥಾನಕ್ಕೆ ಹೋಗಿ ಮರಳಿ ಬರುವಾಗ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದು, ಸದ್ಯ ಧಾರವಾಡದ ವಿದ್ಯಾಗಿರಿ ಪೊಲೀಸರ ಅಥಿತಿಯಾಗಿದ್ದಾನೆ.

ಪ್ರಕರಣ 04- ಫೆ. 7ರಂದು ಎಗ್​ರೈಸ್​ ಆಂಗಡಿಯಲ್ಲಿ ಹರಿಯಿತು ರಕ್ತ

ಫೆಬ್ರವರಿ 7 ರಂದು ಧಾರವಾಡದ ಪ್ರತಿಷ್ಠಿತ ವಿಮಲ್‌ ಎಗ್ ರೈಸ್​ ಆಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪಕ್ಕಿರೇಶ ಪ್ಯಾಟಿ ಎಂಬಾತನನ್ನ ಅಲ್ಲೆ‌ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಕನ್ನಯ್ಯಪ್ಪ ಎಂಬ ಇನ್ನೋರ್ವ ಯುವಕ ನಡು ರಾತ್ರಿ ಬರ್ಬರವಾಗಿ ಕೊಂದಿದ್ದ. ಆರೋಪಿಯನ್ನು ಶಹರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣ 05- ಫೆ.8 ರಂದು ಅಂಗವಿಕಲ ಮಗಳನ್ನು ಕೊಲೆಗೈದ ಪೋಷಕರು

ಫೆಬ್ರವರಿ 8 ಧಾರವಾಡದ ಕಮಲಾಪೂರ ಹೂಗಾರ ಓಣಿಯಲ್ಲಿ ಅನೈತಿಕ ಸಂಬಂಧಕ್ಕೆ ಮಗಳು ಅಡ್ಡಿಯಾಗಿದ್ದಕ್ಕೆ ಹೆತ್ತ ತಾಯಿ ಹಾಗೂ ಪ್ರಿಯಕರ ರಾಹುಲ್ ಸೇರಿ ಅಂಗವಿಕಲ ಮಗಳನ್ನು ಕೊಲೆ ಮಾಡಿದ್ದಾರೆ. ಧಾರವಾಡ ಉಪನಗರ ಠಾಣೆಯ ಪೊಲೀಸರು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಎಲ್ಲವು ವೈಯಕ್ತಿಕ ಹಿತಾಶಕ್ತಿಗೆ, ಕ್ಷುಲ್ಲಕ ಕಾರಣಕ್ಕೆ ಆಗಿವೆ. ಎಲ್ಲದರಲ್ಲೂ ದಸ್ತಗಿರಿಯಾಗಿದೆ. ಇದರಲ್ಲಿ ಅವರ ವೈಯಕ್ತಿಕ ವಿಚಾರಕ್ಕೆ ಆಗಿದೆ ಹೊರತು ಬೇರೆ ಏನು ಕಾಣುತ್ತಿಲ್ಲ.

ರವೀಶ್, ಕ್ರೈಂ ವಿಭಾಗದ ಡಿಸಿಪಿ

ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಮೂರು‌ ದಿನದಲ್ಲಿ ಮೂರು ಕೊಲೆಗಳು ನಡೆದರೆ. ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಒಂದು ಹಾಗೂ ಉಪ ನಗರ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆಯಾಗಿದೆ.

ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಸೈಂಟಿಫಿಕ್ ಆಗಿ ಪಕ್ಕಾ ಇನ್ವೆಸ್ಟಿಗೇಷನ್ ಆಗುತ್ತಿದೆ. ಸೂಕ್ತ ಸಾಕ್ಷಿಗಳು ಸಿಕ್ಕಾಗ ಮುಂದಿನದ ಬಗ್ಗೆ ಹೇಳುವುದಕ್ಕೆ ಆಗುತ್ತದೆ. ಯಾಱರು ಅಸಾಲ್ಟ್ ಮಾಡಿದ್ದಾರೆ ಅವರನ್ನು ರೌಂಡ್ ಅಪ್ ಮಾಡಿ ಸೆಕ್ಯುರ್ ಮಾಡಿದ್ದೇವೆ.

ರೇಣುಕಾ ಸುಕುಮಾರ್, ಹು-ಧಾ ಫೊಲಿಸ್ ಆಯುಕ್ತರು

ವಿದ್ಯಾಕಾಶಿಯಲ್ಲಿ ದಿನಕ್ಕೊಂದು ನಡೀತಿರೋ ಕೊಲೆಗಳಿಂದ ಜನರು ಭಯದಲ್ಲೆ ಜೀವನ ನಡೆಸುವಂತಾಗಿದೆ. ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆ ಬಗ್ಗೆಯೂ ಪ್ರಶ್ನೆ ಎದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸಲಾರ್’ ಏರಿಯಾದಂತೆ ಬದಲಾಯ್ತು ವಾಣಿಜ್ಯ ನಗರಿ: ಐದು ದಿನ.. 5 ಭೀಕರ ಕೊಲೆ.. ಬೆಚ್ಚಿಬಿದ್ದ ಧಾರವಾಡ ಮಂದಿ

https://newsfirstlive.com/wp-content/uploads/2024/02/DVG_5_MURDER.jpg

Load More