ಫಿಲಂ ಸ್ಟೈಲ್ ಅನಿಸಿದರೂ ಪದೇ ಪದೇ ಕಾಣಿಸುತ್ತಿದೆ ನಾಗ ಸರ್ಪ
ನಾಗರ ಪಂಚಮಿ ದಿನ ಹಾವನ್ನು ಹೊಡೆದಿದ್ದೇ ಇದಕ್ಕೆ ಕಾರಣನಾ?
ಬಾಲಕಿ ಜೊತೆ ನಿರಂತರವಾಗಿ ಮಾತನಾಡುತ್ತೆ ನಾಗರ ಹಾವು
ಇಲ್ಲೊಂದು ಊರು ಅಕ್ಷರಶಃ ಬೆಚ್ಚಿಬಿದ್ದಿದೆ. ಮಕ್ಕಳು ಮನೆ ಆಚೆ ಬರೋಕೂ ಹೆದರುತ್ತಿದ್ದಾರೆ. ರಾತ್ರೋರಾತ್ರಿ ಅಲ್ಲಿ ಮಂದಿರ ಸಿದ್ಧಗೊಂಡಿದೆ. ಹೆಣ್ಮಕ್ಳು ಆರತಿ ಹಿಡಿದು ಸಾಲುಗಟ್ಟಿ ಬರ್ತಿದ್ದಾರೆ. ಎಲ್ಲರಲ್ಲೂ ಭಯ ಭಕ್ತಿ ತುಂಬಿ ತುಳುಕುತ್ತಿದೆ. ಮಕ್ಕಳು ಚಿತ್ರವಿಚಿತ್ರ ಸಂಗತಿ ಹೇಳುತ್ತಿದ್ದಾರೆ. ಹಿರಿಯರು ಜ್ಯೋತಿಷಿಗಳ ಮಾತಿಗೆ ಜೋತು ಬೀಳ್ತಿದ್ದಾರೆ. ಇಂಥಾ ದಿಢೀರ್ ಚೇಂಜ್ಗೆ ಕಾರಣ ಸರ್ಪ. ಒಂದಲ್ಲ, ಎರಡು ಸರ್ಪ. ಹೌದು, ಜೋಡಿ ಸರ್ಪ ಸೃಷ್ಟಿಸಿದ್ದು ಕೋಲಾಹಲ. ಹೀಗೆ ಊರಿಗೆ ಊರೇ ನಡುಗಿದ್ದೇಕೆ?. ಕೇವಲ 48 ಗಂಟೆಗಳಲ್ಲಿ 2 ಸರ್ಪ ಆ ಊರನ್ನ ಬೆಚ್ಚಿಬೀಳಿಸಿದ್ದೇಗೆ ಗೊತ್ತಾ?. ಅಷ್ಟಕ್ಕೂ ಇದೇನಿದು ಹಾವಿನ ದ್ವೇಷ?.
8 ವರ್ಷದ ಪುಟ್ಟ ಕಂದಮ್ಮ ಭಯದಿಂದಲೇ ಎಲ್ಲವನ್ನು ಹೇಳಿದ್ದಾಳೆ. ಯಾಕಂದ್ರೆ, ಒಂದಿಡೀ ಊರನ್ನೇ ಬೆಚ್ಚಿಬೀಳಿಸಿದ ಘಟನೆಗೆ ಸಾಕ್ಷಿ ಆಗಿರುವುದು ಬಾಲಕಿ. ಅಷ್ಟಕ್ಕೂ ಈಕಗೆ ಹೇಳ್ತಿರೋದೇನು? ಊರಿನ ಹಿರಿಯರು ಅತ್ಯಂತ ಶ್ರದ್ಧೆಯಿಂದ ಈಕೆ ಮಾತುಗಳನ್ನು ಕೇಳ್ತಿರೋದೇಕೆ? ಅದ್ಯಾವ ಭಯ ಈ ಮಗು ಸೇರಿ ಈ ಊರಿನ ಸಮಸ್ತರನ್ನು ಕಾಡಿಸುತ್ತಿದೆ. ಪೀಡಿಸುತ್ತಿದೆ. ಕಂಗೆಡಿಸುತ್ತಿದೆ ಗೊತ್ತಾ? ಈ ಊರಿನ ಬೇಲಿ ಬೇಲಿಗಳಲ್ಲಿ ಅದೊಂದು ಸರ್ಪ ಕಾಣಿಸಿಕೊಂಡು ಬೆಚ್ಚಿಬೀಳಿಸುತ್ತಿದೆ. ಅಷ್ಟಕ್ಕೂ ಆ ಸರ್ಪ ಯಾವುದು ಅಂತೀರಾ?.
ಈ ಊರಿನ ಮಕ್ಕಳ ಕಣ್ಣಿಗೆ ಕಾಣಿಸಿಕೊಂಡು ಬೆಚ್ಚಿಬೀಳಿಸ್ತಿದೆ ಸರ್ಪ!
ಸರ್ಪ ಇದೀಗ ಒಂದಿಡೀ ಊರನ್ನು ಅಕ್ಷರಶಃ ನಡುಗುವಂತೆ ಮಾಡಿದೆ ನೋಡಿ, ಊರಿಗೆ ಊರೇ ಈ ಸರ್ಪಕ್ಕೆ ಹೆದರಿಕೊಂಡಿದೆ. ಅದರಲ್ಲೂ ಮಕ್ಕಳಂತೂ ಈ ಸರ್ಪದ ಕಾರಣಕ್ಕೆ ಮನೆಯಿಂದಾಚೆ ಬರೋದಕ್ಕೆ ಅಂಜುತ್ತಿದ್ದಾರೆ. ಬರೀ ಮಕ್ಕಳ ಕಣ್ಣಿಗೆ ಬೀಳುತ್ತಿರುವ ಈ ಸರ್ಪ ಅದೊಂದು ಸಂದೇಶವನ್ನೂ ನೀಡಿದೆ ಅಂತ ಕಂದಮ್ಮ ಭಯದಿಂದ ಹೇಳುತ್ತಿದೆ. ಹಾಗಾಗಿ ಅಜ್ಜಿ ಹೇಳಿದ ಧೈರ್ಯದ ಮಾತುಗಳಿಂದಾಗಿ ಮಗು ಏನಾಯ್ತು? ಹೇಗಾಯ್ತು? ಅನ್ನೋ ಪೂರ್ಣ ಮಾಹಿತಿಯನ್ನು ಊರಿನ ಜನಕ್ಕೆ ಹೇಳುತ್ತಿದ್ದಾಳೆ. ಅಷ್ಟಕ್ಕೂ ಈ ಹುಡುಗಿ ಹೆಸರು ಪೂಜಾ ಹನುಮಂತ್ ಜಾಧವ್.
ಇದನ್ನೂ ಓದಿ: ಕೊಂದು ಸುಟ್ರೂ ಸುಡದ ಸರ್ಪ.. ಗಂಡು ಹಾವು ಸಾಯಿಸಿದ್ದಕ್ಕೆ ಹೆಣ್ಣು ಹಾವಿನಿಂದ ಸೇಡು; ಏನಿದು ದೈವ ಪವಾಡ?
ಕಂಟಿನ್ಯೂ ಬಾಲಕಿ ಜೊತೆ ಆ ಹಾವು ಮಾತನಾಡುತ್ತದೆ. ಹಾವನ್ನು ಹೊಡೆದ ಮೇಲೆ ಹೆಚ್ಚಾಗಿ ಮಾತಾಡುತ್ತಿದೆ. ಈ ಮೊದಲು ಈ ರೀತಿ ಮಾಡುತ್ತಿರಲಿಲ್ಲ. ಕಣ್ಣಿಗೆ ಕಾಣುತ್ತಿತ್ತು. ಹಾಗೇ ಹೋಗುತ್ತಿತ್ತು. ಹಾವನ್ನ ಹೊಡೆದ ಮೇಲೆ ಇದು ಆಗಿರೋದು.
ಹನುಮಂತ ಜಾಧವ್, ಪೂಜಾ ತಂದೆ
ಪೂಜಾ ಜೊತೆ ಆ ನಾಗ ಸರ್ಪ ಮಾತಾಡಿತ್ತಾ? ಏನಿದು ಮಾತು?
ನಂಬೋಕೆ ಅಸಾಧ್ಯ ಅಂತ ನೀವು ಹೇಳಬಹುದು. ಆದರೇ, ಊರಿನ ಗ್ರಾಮಸ್ಥರು ನಂಬಿದ್ದಾರೆ. ಪೂಜಾ ಹನುಮಂತ್ ಜಾಧವ್ ಅನ್ನೋ ಇದೇ ಕಂದಮ್ಮ ಸರ್ಪದೊಂದಿಗೆ ಮಾತಾಡಿದ್ದಾಳಂತೆ. ಮಕ್ಕಳು ದೇವರ ಸಮಾನ ಅಂತಾರೆ. ಅಂಥಾ ಮಗುವೇ ದೇವರು ತನ್ನೊಂದಿಗೆ ಮಾತಾಡಿದೆ ಅಂತ ಹೇಳಿಕೊಳ್ಳುತ್ತಿದ್ದಾಳೆ. ಅಷ್ಟೇ ಅಲ್ಲ, ಬೆಚ್ಚಿಬೀಳಿಸೋ ಸಂಗತಿಯೊಂದಕ್ಕೆ ಸಾಕ್ಷಿಯಾಗಿದ್ದಾಳೆ. ಪಕ್ಕಾ ಸಿನಿಮಾ ಸ್ಟೈಲ್ನಲ್ಲಿ ಕಾಣಿಸೋ ಈ ಸುದ್ದಿ ಬಗ್ಗೆ ಯಾರಿಗಾದರೂ ಡೌಟ್ ಬರುತ್ತೆ. ಆದರೇ, ಒಂದೇ ಸರ್ಪ ಪದೇ ದೇ ಕಾಣಿಸಿಕೊಳ್ಳೋದೇಕೆ ಅನ್ನೋ ಅನುಮಾನ ಪೂಜಾ ಮಾತುಗಳ ಸತ್ಯಾಸತ್ಯತೆ ಬಗ್ಗೆ ಸಾಕ್ಷಿ ನುಡಿಯುತ್ತಿದೆ.
ನಾನು ಫಸ್ಟ್ ಬಂದಾಗ ನಾನು ನಾಗರಹಾವು, ನಾಗದೇವತೆ ಅಂತು. ಇನ್ನೊಮ್ಮೆ ಬಂದಾಗ ನಿಂಬೆಹಣ್ಣಿನ ಸರ ಹಾಗೂ ಮೆಣಸಿನ ಕಾಯಿ ಸರ ಬೇಕು ಎಂದು ಹೇಳಿತು. 3ನೇ ಬಾರಿ ಬಂದಾಗ ನನಗೆ ಗುಡಿ ಕಟ್ಟಿಸಬೇಕು. ಹಿಂಗ ಮಾಡಿದರೆ ಕೂಗುವುದು, ಕಿರುಚುವುದು, ಕಾಣುವುದು ಮಾಡಲ್ಲ ಅಂತು.
ಪೂಜಾ ಜಾಧವ್, ಹಾವು ಕಂಡ ಮಗು
ಈ ಮಗು ಹೇಳೋದೆಲ್ಲವನ್ನೂ ಊರಿನ ಜನ ಕೇಳಿದ್ದಾರೆ. ಅಷ್ಟಕ್ಕೂ ಹೀಗೆ ಪದೇ ಪದೇ ಊರಿನ ಮಕ್ಕಳನ್ನು ಹೆದರಿಸೋ ಸರ್ಪದ ಹಿನ್ನೆಲೆ ಏನು?. ಎಷ್ಟು ದಿನಗಳಿಂದ ಹೀಗೆ ಕಂದಮ್ಮನೊಂದಿಗೆ ಸರ್ಪ ಮಾತಾಡುತ್ತಿದೆ ಗೊತ್ತಾ?. ಅಚ್ಚರಿ ಅನಿಸಬಹುದು. ಯಾಕಂದ್ರೆ ಕೇವಲ 24 ಗಂಟೆಯೊಳಗೆ ಮೂರ್ನಾಲ್ಕು ಸಲ ಪೂಜಾಳೊಂದಿಗೆ ಸರ್ಪ ಮಾತಾಡಿದೆಯಂತೆ. ಹೀಗಂತ ಈ ಮಗುವೇ ಹೇಳಿಕೊಳ್ಳುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಪದೇ ಪದೇ ಆ ಸರ್ಪ ಈ ಮನೆಯ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಊರಿನ ಮಕ್ಕಳನ್ನು ಬೆಚ್ಚಿಬೀಳಿಸುತ್ತಿದೆ. ಹೀಗೆ ಹಾವೊಂದು ಸೇಡಿನಿಂದ ಇಲ್ಲಿಗೆ ಬರುತ್ತಿದೆಯೇ? ಇಂಥದ್ದೊಂದು ಅನುಮಾನ ನಮ್ಮ ವರದಿಗಾರ ವಿನೋದ್ರನ್ನೂ ಕಾಡಿತ್ತು. ನ್ಯೂಸ್ಫಸ್ಟ್ ಕ್ಯಾಮೆರಾಗೂ ಕಂಡಿದೆ.
ಕ್ಯಾಮರಾ ಕಂಡ ಕೂಡಲೇ ಆ ವ್ಯಕ್ತಿ ವಿಲಕ್ಷಣವಾಗಿ ಉರುಳಾಡಿದ್ರು!
ನ್ಯೂಸ್ ಫಸ್ಟ್ ಕ್ಯಾಮೆರಾದಲ್ಲಿ ಹಾವು ಸೆರೆಯಾಗಿದೆ. ಅಲ್ಲಿ ಏನೂ ಮಾತಾಡೋಕೆ ಆಗಿಲ್ಲ. ಗಂಟಲು ಕಟ್ಟಿದೆಯೇ? ಹೀಗಂತ ಅಲ್ಲೊಬ್ಬ ಅಜ್ಜಿ ಕೇಳುತ್ತಲೇ ಇದ್ದಳು. ಅದಕ್ಕೆ ಆ ವ್ಯಕ್ತಿ ಹೌದು ಅಂತ ತಲೆದೂಗುತ್ತಿದ್ದರು. ಅಷ್ಟಕ್ಕೂ ಅದ್ಯಾವ ಊರು ಹೀಗೆ ಸರ್ಪವೊಂದಕ್ಕೆ ಬೆಚ್ಚಿಬಿದ್ದಿದೆ? ಅದ್ಯಾವ ಸೇಡಿನ ಕಾರಣಕ್ಕೆ ಇಲ್ಲಿ ಪದೇ ಪದೇ ಸರ್ಪ ಕಾಣಿಸಿಕೊಳ್ಳುತ್ತಿದೆ? ಈ ವ್ಯಕ್ತಿ ವಿಲಕ್ಷಣವಾಗಿ ಉರುಳಾಡುತ್ತಾ ಕೊಟ್ಟ ಸಂದೇಶ ಏನು? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೇವಲ ಒಂದು ದಿನದ ಹಿಂದೆ ಇದೇ ಊರಿನ ಜನರೆದುರು ಕೊಂದು ಹಾಕಿರೋ ಸರ್ಪ.
ಗಂಡನನ್ನು ಕೊಂದ ಕೋಪಕ್ಕೆ ಕಾಣಿಸಿಕೊಳ್ತಿದ್ದಾಳಾ ನಾಗದೇವತೆ?
ಒಂದೇ ಒಂದು ದಿನದ ಹಿಂದೆ ಇಲ್ಲಿ ಮತ್ತೊಂದು ಸರ್ಪ ಕಾಣಿಸಿಕೊಂಡಿತ್ತು. ಇದೇ ಪೂಜಾಳ ಚಿಕ್ಕಪ್ಪ ಆ ಸರ್ಪವನ್ನು ಕೊಂದು ಹಾಕಿದ್ದ. ಆ ಕ್ಷಣದಿಂದಲೇ ಇಂಥ ಸರ್ಪ ಸಮಸ್ಯೆ ಎದುರಾಗ್ತಿದೆ ಅಂತ ಊರಿನ ಜನ ಮಾತಾಡಿಕೊಳ್ಳುತ್ತಿದ್ದಾರೆ. ಹೀಗೆ ಒಂದಿಡೀ ಊರು ಬೆಚ್ಚಿ ಬೀಳ್ತಿರೋದು ಎಲ್ಲಿ ಗೊತ್ತಾ? ಇದು ಧಾರವಾಡ ಜಿಲ್ಲೆಯ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಕಂಡು ಬಂದ ದೃಶ್ಯ. ಇದಕ್ಕಿಂತಲೂ ಅಚ್ಚರಿಯ ಸಂಗತಿ ಏನು ಗೊತ್ತಾ? ಕೊಂದು ಹಾಕಿದ್ದ ಸರ್ಪವನ್ನು ಸುಡೋದಕ್ಕೆ ನೋಡಿದ್ರೂ ಅದು ಬೆಂಕಿಯಲ್ಲಿ ಬೇಯಲೇ ಇಲ್ಲ. ಹಾಗಾಗಿಯೇ ಇದು ಮಾಮೂಲಿ ಸರ್ಪವಲ್ಲ ಅನ್ನೋ ನಿರ್ಧಾರಕ್ಕೆ ಊರಿನ ಜನ ಬಂದಿದ್ದರು.
ಪದೇ ಪದೇ ತಮ್ಮ ಮಕ್ಕಳ ಕಣ್ಣಿಗೆ ಸರ್ಪ ಕಾಣುತ್ತಿದೆ. ಒಂದೇ ಒಂದು ದಿನದ ಹಿಂದೆ ಹೊಡೆದ ಹಾಕಿದ್ಮೇಲೆಯೇ ಇಂಥಾ ಸಮಸ್ಯೆ ಎದುರಾಗ್ತಿದೆ. ಹಾಗಾಗಿಯೇ ಈ ಊರಿನ ಜನ ಜ್ಯೋತಿಷಿಗಳನ್ನೂ ಪರಿಹಾರ ಕೇಳಿದ್ರು. ಆದಕ್ಕೆ ಜ್ಯೋತಿಷಿಗಳು ಹೇಳಿದ್ದು ನೂರಾರು ಪರಿಹಾರಗಳು.
ಇದನ್ನೂ ಓದಿ: ಷಡ್ಯಂತ್ರ ಮಾಡಿದವರ ಹೆಸರು ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೀನಿ.. ಬಿ ನಾಗೇಂದ್ರ ಕಣ್ಣೀರು
ಖುದ್ದು ನಾಗದೇವತೆಯೇ ನನಗೊಂದು ಗುಡಿಬೇಕು ಅಂತ ಕೇಳಿದಳು. ಹಾಗಾಗಿಯೇ ಗಳಗಿ ಹುಲಕೊಪ್ಪ ಗ್ರಾಮದ ಜನ ರಾತ್ರೋರಾತ್ರಿ ನಾಗ ಜೋಡಿಯನ್ನು ಒಂದು ನಾಗರ ಕಲ್ಲಿನಲ್ಲಿ ಪ್ರತಿಷ್ಠಾಪಿಸಿ ಮಂದಿರ ನಿರ್ಮಿಸಿದ್ದಾರೆ. ಇದೇ ಮಂದಿರದ ಮುಂದೆ ಇದೀಗ ಊರಿನ ಹೆಣ್ಣು ಮಕ್ಕಳು ಆರತಿ ಹಿಡಿದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಗಳಗಿ ಹುಲಕೊಪ್ಪ ಗ್ರಾಮ ಅಕ್ಷರಶಃ ಪೂಜಾ ಜಾಧವ್ ಅನ್ನೋ ಕಂದಮ್ಮನೊಂದಿಗೆ ಆ ದೇವಿಯೇ ಮಾತಾಡಿದ್ದಾಳೆ ಅಂತ ನಂಬುತ್ತಿದೆ.
ನಾಗರ ಪಂಚಮಿಯ ಮುನ್ನಾ ದಿನವೇ ಆ ಹಾವನ್ನು ಕೊಂದಿದ್ದರು!
ಗಳಗಿ ಹುಲಿಕೊಪ್ಪ ಗ್ರಾಮದಲ್ಲಿ ನಾಗರ ಪಂಚಮಿಯ ಮುನ್ನಾ ದಿನ ಸರ್ಪವನ್ನು ಕೊಂದಿದ್ದಾರೆ. ಆ ದಿನವೂ ಊರಿನ ಜನಕ್ಕೆ ಸಾಕಷ್ಟು ಭಯವೂ ಆಗಿತ್ತು. ನಾಗಪಂಚಮಿ ದಿನ ಕೊಂದ ಸರ್ಪ ಬೆಂಕಿಯಲ್ಲೂ ಸುಡದೇ ಇದ್ದಿದ್ದು ಮತ್ತಷ್ಟು ಭಯಭೀತಗೊಳಿಸಿತ್ತು. ಇದು ಸಾಲದು ಅಂತ ಊರಿನ ಹಿರಿಯೊಬ್ಬರ ಮೈಮೇಲೆ ಸಾಕ್ಷಾತ್ ನಾಗಪ್ಪ ಮೈದಳೆದು ಹಲವು ಸುಳಿವು ನೀಡುತ್ತಿದ್ದ. ಹಾಗಾಗಿ ನ್ಯೂಸ್ ಫಸ್ಟ್ ಕ್ಯಾಮೆರಾ ಎದುರೂ ಸಹ ಆ ನಾಗಪ್ಪ ಕಾಣಿಸಿಕೊಂಡಿದ್ದ. ಅಷ್ಟೇ ಅಲ್ಲ, ಯಾವೆಲ್ಲಾ ಭಾಗಕ್ಕೆ ಹೊಡೆದು ತನ್ನನ್ನು ಕೊಂದಿದ್ದಾರೆ ಅನ್ನೋದನ್ನ ಹೇಳುತ್ತಿದ್ದ. ಈ ಬಗ್ಗೆ ಊರಿನ ಗ್ರಾಮಸ್ಥರೇ ವಿವರಣೆಯನ್ನೂ ನೀಡಿದರು.
ರಾತ್ರೋರಾತ್ರಿ ಗಳಗಿ ಹುಲಕೊಪ್ಪದಲ್ಲಿ ಮಂದಿರವನ್ನೇ ನಿರ್ಮಿಸಿದ್ದಾರೆ. ಆರೇಳು ಗಂಟೆಗಳಲ್ಲೇ ಪುಟ್ಟದೊಂದು ಮಂದಿರವನ್ನು ನಿರ್ಮಿಸಿ ನಾಗದೇವತೆಯನ್ನ ಪ್ರತಿಷ್ಠಾಪಿಸಿದ್ದಾರೆ. ಅಷ್ಟೇ ಅಲ್ಲ, ಇಂಥದ್ದೊಂದು ಮಂದಿರವನ್ನು ನಿರ್ಮಿಸಿದ ಮೇಲೆ ಊರಿನ ಮಕ್ಕಳ ಕಣ್ಣಿಗೆ ಸರ್ಪ ಕಾಣುತ್ತಿಲ್ಲ ಬದಲಾಗಿ ಪೂಜಾ ಜಾಧವ್ ಅನ್ನೋ ಈ ಕಂದಮ್ಮನಿಗೆ ಈ ಕ್ಷಣವೂ ಕಾಣಿಸಿಕೊಳ್ಳುತ್ತಿದೆ ಸರ್ಪ. ಅದೂ ಸಹ ಒಮ್ಮೆ ಮನುಷ್ಯ ರೂಪದಲ್ಲಿ, ಒಮ್ಮೆ ಸರ್ಪ ರೂಪದಲ್ಲಿ ಕಾಣಿಸಿಕೊಂಡು ಮಾತಾಡುತ್ತಿದೆ ಅಂತ ಊರಿನ ಜನ ನಂಬುತ್ತಿದ್ದಾರೆ. ಅಷ್ಟಕ್ಕೂ ಹೀಗೆ ಒಂದಿಡೀ ಊರನ್ನು ಸರ್ಪವೊಂದು ಕಂಗೆಡಿಸೋಕೆ ಬೇರೆ ಕಾರಣವಿದ್ಯಾ?. ಈ ಬಗ್ಗೆ ನಾಗದೇವತೆ ಆರಾಧಿಸೋ ಮಂದಿ ಬೆಚ್ಚಿಬೀಳಿಸೋ ಧರ್ಮಸೂಕ್ಷ್ಮಗಳನ್ನು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ