/newsfirstlive-kannada/media/post_attachments/wp-content/uploads/2024/11/JOBS_Library-1.jpg)
ಧಾರವಾಡ ಜಿಲ್ಲೆಯ 7 ತಾಲೂಕುಗಳಲ್ಲಿನ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವಂತ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳನ್ನ ನೇಮಕಾತಿ ಮಾಡಲಾಗುತ್ತಿದೆ. ಈ ಸಂಬಂಧ ಅರ್ಹ ಹಾಗೂ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಈಗಾಗಲೇ ಅರ್ಜಿಗಳನ್ನು ಹಾಕಲಾಗುತ್ತಿದ್ದು ಅಭ್ಯರ್ಥಿಗಳು ಅಪ್ಲೇ ಮಾಡಬಹುದು. ಇಲಾಖೆ ನೀಡಿರುವ ಅಧಿಕೃತ ಲಿಂಕ್ನಿಂದ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿಸೂಚನೆಯಂತೆ ಈ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಉಲ್ಲೇಖ (02)ದಲ್ಲಿ ನಿರ್ದೇಶಿಸಲಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳು ಇವೆ?
- ಧಾರವಾಡ ತಾಲೂಕು- 07
- ಹುಬ್ಬಳ್ಳಿ- 07
- ಕುಂದಗೋಳ- 06
- ನವಲಗುಂದ- 06
- ಕಲಘಟಗಿ- 02
- ಅಳ್ನಾವರ- 02
- ಅಣ್ಣಿಗೇರಿ- 02
- ಒಟ್ಟು- 32 ಹುದ್ದೆಗಳು
ಇದನ್ನೂ ಓದಿ: ನಗರದಲ್ಲಿ ಪೌರಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನ.. ಇವರು ಮಾತ್ರ ಅಪ್ಲೇ ಮಾಡಬೇಕು
ವಿದ್ಯಾರ್ಹತೆ
ಕೆಂಡ್ ಪಿಯುಸಿ ಮತ್ತು ಲೈಬ್ರರಿ ಸೈನ್ಸ್ ಸರ್ಟಿಫಿಕೆಟ್ ಕೋರ್ಸ್
3 ತಿಂಗಳ ಕನಿಷ್ಠ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿರಬೇಕು
ಇದನ್ನೂ ಓದಿ:ಟಿಪ್ಪು ಸುಲ್ತಾನ್ ಖಡ್ಗ ಕೋಟಿ ಕೋಟಿ ಬೆಲೆಗೆ ಹರಾಜು.. ಯುದ್ಧದ ಕತ್ತಿಗೆ ಎಷ್ಟು ವರ್ಷಗಳ ಇತಿಹಾಸ ಇದೆ?
ವಯೋಮಿತಿ ಸಡಿಲಿಕೆ
- ಸಾಮಾನ್ಯ ವರ್ಗ- 35 ವರ್ಷ
- 2ಎ, 2ಬಿ, 3ಎ, 3ಬಿ- 38 ವರ್ಷ
- ಎಸ್ಸಿ, ಎಸ್ಟಿ, ಪ್ರ-01- 40 ವರ್ಷ
ಅರ್ಜಿ ಸಲ್ಲಿಕೆ ಮಾಡುವವರು 18 ವರ್ಷಗಳನ್ನು ಪೂರೈಸಿರಬೇಕು
ವಿಶೇಷ ಸೂಚನೆ- ವಾಸಸ್ಥಳ ಪ್ರಮಾಣ ಪತ್ರ ಹೊಂದಿರಲೇಬೇಕು, ಸ್ಥಳೀಯರಿಗೆ ಆದ್ಯತೆ
ಅರ್ಜಿ ಶುಲ್ಕ
- ಸಾಮಾನ್ಯ ವರ್ಗ- 500 ರೂ.ಗಳು
- 2ಎ, 2ಬಿ, 3ಎ, 3ಬಿ- 300 ರೂ.ಗಳು
- ಎಸ್ಸಿ, ಎಸ್ಟಿ, ಪ್ರ-01- 200 ರೂ.ಗಳು
- ವಿಶೇಷ ಚೇತನರಿಗೆ- 100 ರೂ.ಗಳು
- ಶುಲ್ಕ ಪಾವತಿ ಮಾಡಿದ ಚಲನ್ ಅನ್ನು ಅಪ್ಲೋಡ್ ಮಾಡಬೇಕು
ಬ್ಯಾಂಕ್ ಅಕೌಂಟ್
ಖಾತೆದಾರರ ಹೆಸರು- ಸಿಎಒ ಸಿಎಡಿ
ಲೈಬ್ರರಿ ಚೆಸ್ ಅಕೌಂಟ್ ಜೆಡ್ಪಿ, ಧಾರವಾಡ
ಆಕ್ಸಿಸ್ ಬ್ಯಾಂಕ್,
ಶಾಖೆ- ಟೊಲ್ನಾಕಾ ಧಾರವಾಡ
ಖಾತೆ ನಂಬರ್- 924010012148268
ಐಎಫ್ಎಸ್ಸಿ- ಯುಟಿಐಬಿ0000603
ಮಾಸಿಕ ವೇತನ ಶ್ರೇಣಿ- 16,382 ರೂಪಾಯಿ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ- 04 ಡಿಸೆಂಬರ್ 2024
ಹೆಚ್ಚಿನ ಮಾಹಿತಿಗಾಗಿ ಲಿಂಕ್-
https://zpdharwad.karnataka.gov.in/uploads/media_to_upload1730722689.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ