UPSC ಫಲಿತಾಂಶ ಪ್ರಕಟ: ಕೋಚಿಂಗ್​ ಸೆಂಟರ್​ಗೆ ಹೋಗದೇ ಪಾಸ್​ ಆದ ಕನ್ನಡತಿ ಸೌಭಾಗ್ಯ ಬೀಳಗಿಮಠ

author-image
Veena Gangani
Updated On
UPSC ಫಲಿತಾಂಶ ಪ್ರಕಟ: ಕೋಚಿಂಗ್​ ಸೆಂಟರ್​ಗೆ ಹೋಗದೇ ಪಾಸ್​ ಆದ ಕನ್ನಡತಿ ಸೌಭಾಗ್ಯ ಬೀಳಗಿಮಠ
Advertisment
  • UPSCಯಲ್ಲಿ ಪಾಸ್​ ಆಗಿರೋ ಅಭ್ಯರ್ಥಿ ಸೌಭಾಗ್ಯ ಹೇಳಿದ್ದೇನು?
  • ಆ ಮೇಡಂ ಅವರು ತರಬೇತಿ ನೀಡಿದ್ದರಿಂದ ನಾನು ಪಾಸ್​ ಆಗಿಬಿಟ್ಟೆ!
  • ಮನೆಯಲ್ಲೇ ಇದ್ದುಕೊಂಡು ನಾನು UPSC ಪಾಸ್ ಮಾಡಿಕೊಂಡಿದ್ದೇನೆ

ಧಾರವಾಡ: ಇಂದು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ (UPSC Results 2023) ಪ್ರಕಟವಾಗಿದೆ. ದಾವಣಗೆರೆ ನಿವಾಸಿಯಾಗಿರುವ ಸೌಭಾಗ್ಯ ಬೀಳಗಿಮಠ ಅವರು ತಮ್ಮ ಎರಡನೇ ಪ್ರಯತ್ನದಲ್ಲೇ 101 ಱಕಿಂಗ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: UPSC ಪರೀಕ್ಷೆ ಫಲಿತಾಂಶ ಪ್ರಕಟ: ಫಸ್ಟ್‌ RANK ಬಂದ ಆದಿತ್ಯ ಶ್ರೀವಾಸ್ತವ್‌ ಯಾರು? ಹಿನ್ನೆಲೆ ಏನು?

ದಾವಣಗೆರೆ ಮೂಲದ ಸೌಭಾಗ್ಯ ಬೀಳಗಿಮಠ ಅವರು ಬಿಎಸ್ಸಿ ಅಗ್ರಿಕಲ್ಚರ್ ಎರಡನೇ ವರ್ಷದಲ್ಲಿದ್ದಾಗಲೇ ಕೋಚಿಂಗ್ ಆರಂಭಿಸಿದ್ದರಂತೆ. ಕೃಷಿ ವಿವಿಯ ಡಾ.ಅಶ್ವಿನಿ ಸಹಾಯಕ ಪ್ರಾಧ್ಯಾಪಕಿಯವರ ಜೊತೆ ಕೋಚಿಂಗ್ ಆರಂಭಿಸಿದ್ದರು. ಯುಪಿಎಸ್‌ಸಿ ಕುರಿತು ಡಾ.ಅಶ್ವಿನಿ ಅವರು ಸೌಭಾಗ್ಯಗೆ ತರಬೇತಿ ನೀಡುತ್ತಿದ್ದರಂತೆ. 2015 ರಲ್ಲಿ ಡಾ.ಅಶ್ವಿನಿ ಅವರದ್ದು ಯುಪಿಎಸ್‌ಸಿ ಪಾಸ್ ಮಾಡಿಕೊಂಡಿದ್ದರು. ಡಾ.ಅಶ್ವಿನಿ ಎಂ. ಧಾರವಾಡದ ನಾರಾಯಣಪುರದ ನಿವಾಸಿ. 3 ವರ್ಷದಿಂದ ಸೌಭಾಗ್ಯ ಡಾ.ಅಶ್ವಿನಿ ಅವರ ಮನೆಯಲ್ಲೇ ಉಳಿದುಕೊಂಡು ತರಬೇತಿ ಪಡೆದುಕೊಳ್ಳುತ್ತಿದ್ದರಂತೆ. ಸೌಭಾಗ್ಯ ಅವರು ಯುಪಿಎಸ್‌ಸಿ ಪರೀಕ್ಷೆಗಾಗಿ ಬೇರೆ ಎಲ್ಲೂ ಎಲ್ಲೂ ತರಬೇತಿ ಪಡೆಯದೇ ಕೇವಲ ಉಪನ್ಯಾಸಕಿ ನೀಡಿದ ಕೋಚಿಂಗ್ ಮೇಲೆಯೇ ಱಕಿಂಗ್​ ಪಡೆದುಕೊಂಡಿದ್ದಾರೆ.

publive-image

ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಸೌಭಾಗ್ಯ ಬೀಳಗಿಮಠ, ಈ ಬಾರಿಯ UPSC ಪರೀಕ್ಷೆಯಲ್ಲಿ 101 ಱಕಿಂಗ್​ ಪಡೆದುಕೊಂಡಿದ್ದೇನೆ. ನನ್ನ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಫುಲ್​ ಖುಷ್​ ಆಗಿದ್ದಾರೆ. ನಾನು ಯಾವುದೇ ಕೋಚಿಂಗ್​ಗೆ ಹೋಗಿಲ್ಲ. ನಮ್ಮ ಮೇಡಂ ಮನೆಯಲ್ಲೇ ಇದ್ದುಕೊಂಡು ನಾನು UPSC ಪಾಸ್ ಮಾಡಿಕೊಂಡಿದ್ದೇನೆ. ನಾನು ಪಾಸ್​ ಆದ ವಿಚಾರ ಕೇಳಿ ನಮ್ಮ ಮೇಡಂ ಖುಷಿಯಾಗಿದ್ದಾರೆ. ಡಾ.ಅಶ್ವಿನಿ ಅವರು ನನಗೆ ತರಬೇತಿ ನೀಡಿದ್ದರಿಂದ ಎರಡನೇ ಪ್ರಯತ್ನದಲ್ಲೇ ಱಂಕ್​ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment