/newsfirstlive-kannada/media/post_attachments/wp-content/uploads/2025/03/Panchakshari_Hiremath_NEW.jpg)
ಧಾರವಾಡ: ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ (92) ಅವರು ಇಂದು ಬೆಳಗ್ಗೆ ಧಾರವಾಡದ ಜಯನಗರದಲ್ಲಿನ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ವಿದ್ಯಾವಾಚಸ್ಪತಿ ಬಿರುದಾಂಕಿತರಾದ ಡಾ. ಪಂಚಾಕ್ಷರಿ ಹಿರೇಮಠ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿ ಬಂಧು-ಬಳಗವನ್ನ ಅವರು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಾರ್ಚ್ 15 ಅಂದರೆ ಇಂದು ಸಂಜೆ 4 ಗಂಟೆಗೆ ಅವರ ಹುಟ್ಟೂರಾದ ಕೊಪ್ಪಳದ ಬಿಸರಳ್ಳಿ ಗ್ರಾಮದಲ್ಲಿ ನಡೆಯಲಿದೆ. ಕೊಪ್ಪಳದ ಬಿಸರಳ್ಳಿಯಲ್ಲಿ 1933ರ ಜನವರಿ 6 ರಂದು ಪಂಚಾಕ್ಷರಿ ಹಿರೇಮಠ ಅವರು ಜನಿಸಿದ್ದರು. ಇಂದು ಬೆಳಗ್ಗೆ 8:30 ರಿಂದ ಧಾರವಾಡದ ಜಯನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆವರೆಗೆ ಅಂತಿಮ ದರ್ಶನ ಇರುತ್ತದೆ. ಬಳಿಕ ಕೊಪ್ಪಳ ತಾಲೂಕಿನ ಸ್ವಗ್ರಾಮ ಬಿಸರಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಹಿರಿಯ ಸಾಹಿತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಹೋಳಿ ಆಡ್ತಿದ್ದ ಮಹಿಳೆಗೆ ಕಾರಿನಿಂದ ಗುದ್ದಿ, ಜೀವ ತೆಗೆದ.. ಪಶ್ಚಾತಾಪ ಇಲ್ಲದೆ ಓಂ ನಮಃ ಶಿವಾಯ ಎಂದ ಆರೋಪಿ
ವಿದ್ಯಾವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ಅವರು ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇವರು ಕವಿ, ಕಥೆಗಾರ, ಪ್ರಬಂಧಕ, ವಿಮರ್ಶಕ, ಅನುವಾದಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಇಲ್ಲಿವರೆಗೆ 19 ಕಾವ್ಯ, 11 ಕಥಾ ಸಂಕಲನ, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 8 ಕಾದಂಬರಿ, 13 ಪ್ರಬಂಧ, 7 ಚಿಂತನ ಸಾಹಿತ್ಯ ಕೃತಿ, 6 ಜೀವನ ಚರಿತ್ರೆ, 3 ಪತ್ರ ಸಾಹಿತ್ಯ ಕೃತಿ, 7 ಮಕ್ಕಳ ಸಾಹಿತ್ಯ ಕೃತಿ, 5 ಅನುವಾದಿತ ನಾಟಕ ಸೇರಿ ಸುಮಾರು 100ಕ್ಕೂ ಹೆಚ್ಚು ಕೃತಿಗಳ ರಚನೆ ಮಾಡಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ