ಮನೆಯವರಿಗೆ ಮದುವೆ ಗೌಜಿ, ಕಳ್ಳರಿಗೆ ಚಿನ್ನದ ಮೇಲಿತ್ತು ಕಣ್ಣು.. 61 ಲಕ್ಷ ಮೌಲ್ಯದ ಆಭರಣ ಕದ್ದವರು ಕೊನೆಗೂ ಅರೆಸ್ಟ್​

author-image
AS Harshith
Updated On
ಮನೆಯವರಿಗೆ ಮದುವೆ ಗೌಜಿ, ಕಳ್ಳರಿಗೆ ಚಿನ್ನದ ಮೇಲಿತ್ತು ಕಣ್ಣು.. 61 ಲಕ್ಷ ಮೌಲ್ಯದ ಆಭರಣ ಕದ್ದವರು ಕೊನೆಗೂ ಅರೆಸ್ಟ್​
Advertisment
  • ಮಗಳ ಮದುವೆ ಸಂಭ್ರಮದಲ್ಲಿ ತೇಲಾಡುತ್ತಿದ್ದ ಅಧ್ಯಾಪಕರ ಮನೆಯವರು
  • ಮನೆಯವರ ಚಿನ್ನದ ಮೇಲಿತ್ತು ಬ್ಯಾಂಡ್ ಬಾಜಾ ಬಾರಾತ್ ಗ್ಯಾಂಗ್ ಕಳ್ಳರ ಕಣ್ಣು
  • 964 ಗ್ರಾಂ ತೂಕದ ವಜ್ರ ಮಿಶ್ರಿತ ಚಿನ್ನದ ಆಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದರು

ಮದುವೆ ಮನೆ ಅಂದ ಮೇಲೆ ಸಾಕಷ್ಟು ಜನ ಬಂದೇ ಬರ್ತಾರೆ. ಇಂತ ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡಿ, ಬೀಗರಂತೆ ಮದುವೆಗೆ ಬಂದು ಮದುವೆ ಮನೆಯಲ್ಲಿರುವ ಚಿನ್ನಾಭರಣಗಳನ್ನು ಗೊತ್ತಾಗದಂತೆ ದೋಚುತ್ತಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್‌ ಕೈಗೆ ಪೊಲೀಸರು ಕೋಳ ತೋಡಿಸಿದ್ದಾರೆ.

ಹೆಡೆಮುರಿ ಕಟ್ಟಿದ ಪೊಲೀಸರು

ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ ಪೊಲೀಸ್ರು ರಂಗೋಲಿ ಕೆಳಗೆ ನುಗ್ಗುತ್ತಾರೆ. ಒಂದೇ ಒಂದು ವಿಡಿಯೋ ಆಧರಿಸಿ ಮದುವೆ ಮನೆಗೆ ಕನ್ನ ಹಾಕಿದ್ದ ಖದೀಮರನ್ನ ಧಾರವಾಡ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

publive-image

61 ಲಕ್ಷದ ವಜ್ರ ಮಿಶ್ರಿತ ಚಿನ್ನದ ಆಭರಣ

ಇತ್ತೀಚೆಗೆ ಧಾರವಾಡದ ದಿ ಓಶಿಯನ್ ಪರ್ಲ್ ರೆಸಾರ್ಟ್‌ನ ಪೆಶಿಫಿಕ್ ಕನ್ವೆಂಷನ್ ಹಾಲ್‌ನಲ್ಲಿ, ಹುಬ್ಬಳ್ಳಿ ಅಧ್ಯಾಪಕ ನಗರದ ನಿವಾಸಿ ಅರುಣಕುಮಾರ್​ ಗಿರಿಯಾಪುರ ಅವರ ಮಗಳ ಮದುವೆ ಆರತಕ್ಷತೆ ನಡೆದಿತ್ತು. ಆಡಂಬರದ ಅದ್ಧೂರಿ ಆರತಕ್ಷತೆಯಲ್ಲಿ ಕಳ್ಳರು ಕೈಚಳಕ ತೋರಿದ್ದು ಭಾರೀ ಸುದ್ದಿಯಾಗಿತ್ತು. ಅವತ್ತು ಸಂಬಂಧಿಕರ ವೇಷದಲ್ಲಿ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದ ಖದೀಮರು ಬರೋಬ್ಬರಿ 61 ಲಕ್ಷದ 14 ಸಾವಿರ ಮೌಲ್ಯದ 964 ಗ್ರಾಂ ತೂಕದ ವಜ್ರ ಮಿಶ್ರಿತ ಚಿನ್ನದ ಆಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ರು.

ಇದನ್ನೂ ಓದಿ: 44 ವರ್ಷಗಳ ಹಿಂದಿನ ಕೊಲೆ ಪ್ರಕರಣ.. ಆರೋಪಿಯ ಸುಳಿವು ನೀಡಿತು ಒಂದು ಚೂಯಿಂಗ್ ಗಮ್‌

publive-image

ಬ್ಯಾಂಡ್ ಬಾಜಾ ಬಾರಾತ್ ಗ್ಯಾಂಗ್

ಈ ಬಗ್ಗೆ ದೂರು ದಾಖಲಾಗ್ತಿದ್ದಂತೆ ಫೀಲ್ಡ್​ಗೆ ಇಳಿದು ಧಾರವಾಡ ಪೊಲೀಸರು ಹತ್ತೇ ದಿನದಲ್ಲಿ ಆರೋಪಿಗಳ ಹೆಡೆಮುರಿಕೊಟ್ಟಿದ್ದಾರೆ. ಒಂದೇ ಒಂದು ಸಿಸಿಟಿವಿ ದೃಶ್ಯಾವಳಿ ಇಟ್ಟುಕೊಂಡು, ಹೊರ ರಾಜ್ಯಗಳಿಗೂ ತೆರಳಿ ಪ್ರಕರಣ ಭೇದಿಸಿದ್ದಾರೆ. ಇಂದೋರ್‌ನ ಓರ್ವ ಬಾಲಾಪರಾಧಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದ್ರ ಜೊತೆಗೆ ಕೃತ್ಯಕ್ಕೆ ಬಳಸಿ ಒಂದು ಕಾರು ಹಾಕು 3 ಜನ ಆರೋಪಿಗಳನ್ನ ಕೂಡ ಬಂಧಿಸಲಾಗಿದೆ. ಇವರ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಷ್ಯಗಳು ಹೊರಬಂದಿವೆ. ಇವರು ತಮ್ಮ ತಂಡಕ್ಕೆ ಬ್ಯಾಂಡ್ ಬಾಜಾ ಬಾರಾತ್ ಗ್ಯಾಂಗ್ ಎಂದು ಹೆಸರಿಟ್ಟುಕೊಂಡು ಕಳ್ಳತನ ಮಾಡ್ಕೊಂಡು ಬರ್ತಿದ್ದರಂತೆ.

ಒಟ್ಟಾರೆ. ಪೊಲೀಸರಿಗೆ ಚಾಲೆಂಜ್​ ಆಗಿದ್ದ ಪ್ರಕರಣವನ್ನು ಬೇಧಿಸಿದ ತಂಡಕ್ಕೆ ಪೊಲೀಸ್ ಆಯುಕ್ತರು ನಗದು ಬಹುಮಾನ ಸಹ ಘೋಷಿಸಿದ್ದಾರೆ. ಅದೇನೇ ಇರ್ಲಿ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮ ಇದ್ರೂ ಕೂಡ ಇಂತಹ ಜನರ ಬಗ್ಗೆ ಎಚ್ಚರದಿಂದ ಇರೋದು ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment