ಮಿಲಿಯನ್​ ಡಾಲರ್​ ಪ್ರಶ್ನೆಗೆ ಸಿಕ್ತು ಉತ್ತರ.. ಧೋನಿ IPL ಆಡೋ ಬಗ್ಗೆ ಹೀಗಂದ್ರಾ..

author-image
AS Harshith
Updated On
RCB ವಿರುದ್ಧ ಸೋತಾಗ ಕೋಪದಲ್ಲಿ TV ಒಡೆದು ಹಾಕಿದ ಧೋನಿ! ಅಚ್ಚರಿಯ ಘಟನೆ ಬಿಚ್ಚಿಟ್ಟ ಪತ್ರಕರ್ತ
Advertisment
  • ಮಿಸ್ಟರ್​ ಕೂಲ್​ ಧೋನಿ ಐಪಿಎಲ್​ ಆಡೋ ಬಗ್ಗೆ ಏನಂದ್ರು?
  • ಚೆನ್ನೈ ಸೂಪರ್​ ಕಿಂಗ್ಸ್​ಗೆ ಕೊನೆಗೂ ಕ್ಲಾರಿಟಿ ಕೊಟ್ಟ ಮಾಹಿ
  • ಮೌನ ಮುರಿದ ಮಾಹಿ IPL ಭವಿಷ್ಯದ ಬಗ್ಗೆ ಹೇಳಿದ್ದೇನು.?

ಇಂಡೋ-ಕಿವೀಸ್ ಟೆಸ್ಟ್​ ಸರಣಿ ಸೋಲಿನ ಬೇಸರದಲ್ಲಿದ್ದ ಫ್ಯಾನ್ಸ್​ ಪಾಲಿಗೆ ಇದೊಂದು ಗುಡ್​ನ್ಯೂಸ್​.! ಮಿಸ್ಟರ್​ ಕೂಲ್​ ಧೋನಿ ಐಪಿಎಲ್​ ಆಡ್ತಾರಾ.? ಇಲ್ವಾ.? ಅನ್ನೋ ಐಪಿಎಲ್​ ಲೋಕದ ಮಿಲಿಯನ್​ ಡಾಲರ್​ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸ್ವತಃ ಧೋನಿಯೇ ಐಪಿಎಲ್​ ಭವಿಷ್ಯದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಧೋನಿ ಹೇಳಿರೋದೇನು.? ಮಾಹಿ ಐಪಿಎಲ್​ ಆಡ್ತಾರಾ.? ಇಲ್ಲಿದೆ ನೋಡಿ ಡಿಟೇಲ್ಸ್​.!

ಇಂಡಿಯನ್​ ಪ್ರೀಮಿಯರ್​​ ಲೀಗ್​ ರಿಟೈನ್ಶನ್​​ ಅನೌನ್ಸ್​ಮೆಂಟ್​​ಗೆ ಜಸ್ಟ್​ ಮೂರೇ ಮೂರು ದಿನ ಮಾತ್ರ ಬಾಕಿಯುಳಿದಿದೆ. ಐಪಿಎಲ್​​ ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ರಿಟೈನ್ಶನ್​​ ಲೆಕ್ಕಾಚಾರ ಜೋರಾಗಿ ನಡೀತಿದೆ. ಮೆಗಾ ಆಕ್ಷನ್​​ಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳೋ ಆಟಗಾರರ ಫೈನಲ್​ ಲಿಸ್ಟ್​ನ​ ಕೆಲ ದಿನಗಳ ಹಿಂದೆಯೇ ಆಲ್​ಮೋಸ್ಟ್​ ರೆಡಿ ಮಾಡಿಕೊಂಡಿವೆ. ಆದ್ರೆ, ಈ ವಿಚಾರದಲ್ಲಿ ಸಿಎಸ್​ಕೆ ಫ್ರಾಂಚೈಸಿ ಗೊಂದಲಕ್ಕೆ ಸಿಲುಕಿತ್ತು. ಇದೀಗ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಗೆ ಕ್ಲಾರಿಟಿ ಸಿಕ್ಕಿದೆ.

publive-image

CSK ಫ್ರಾಂಚೈಸಿಗೆ ಸಿಗ್ತು ಕ್ಲಾರಿಟಿ.. ಫ್ಯಾನ್ಸ್​ಗೆ​ ಗುಡ್​ನ್ಯೂಸ್​.!

ಮುಂಬರೋ ಐಪಿಎಲ್​ನಲ್ಲಿ ಧೋನಿ ಆಡ್ತಾರಾ.? ಇಲ್ವಾ.? ಇದು ಮಿಲಿಯನ್​​ ಡಾಲರ್​ ಟೂರ್ನಿಯ ಬಿಲಿಯನ್​ ಡಾಲರ್​ ಪ್ರಶ್ನೆಯಾಗಿತ್ತು. ಉತ್ತರದ ಹುಡುಕಾಟ ಅಭಿಮಾನಿಗಳ ವಲಯದಲ್ಲಿ ಮಾತ್ರವಲ್ಲ. ಸ್ವತಃ ಸಿಎಸ್​ಕೆ ಫ್ರಾಂಚೈಸಿಯಲ್ಲೂ ನಡೆದಿತ್ತು. ಧೋನಿಯ ನಡೆ ಏನು ಎಂಬ ಕ್ಲಾರಿಟಿ ಸಿಗದೇ, ರಿಟೈನ್ಶನ್​ ಆಟಗಾರರ ಫೈನಲ್​ ಲಿಸ್ಟ್​ ರೆಡಿ ಮಾಡಲಾಗದೇ ಚೆನ್ನೈ ಸೂಪರ್​ ಕಿಂಗ್ಸ್​ ಇಕ್ಕಟ್ಟಿಗೆ ಸಿಲುಕಿತ್ತು. ಇದೀಗ ಇದ್ದೆಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ. ಫ್ಯಾನ್ಸ್​ಗೂ ಗುಡ್​ನ್ಯೂಸ್​ ಸಿಕ್ಕಿದೆ.

IPL​ ಆಡೋ ಸುಳಿವು ಕೊಟ್ಟ ಮಿಸ್ಟರ್​​ ಕೂಲ್​ ಮಾಹಿ.!

ಐಪಿಎಲ್​ ಆಡ್ತೀರಾ.? ಇಲ್ವಾ.? ಎಂಬ ಮಿಲಿಯನ್​ ಡಾಲರ್​ ಪ್ರಶ್ನೆಗೆ ಇದೀಗ ಸ್ವತಃ ಧೋನಿಯೇ ಉತ್ತರ ಕೊಟ್ಟಿದ್ದಾರೆ. ಇವೆಂಟ್​ವೊಂದಲ್ಲಿ ಮಾತನಾಡಿರೋ ಧೋನಿ, ಐಪಿಎಲ್​ ಆಡೋ ಹಿಂಟ್​ ಕೊಟ್ಟಿದ್ದಾರೆ. ಮಿಸ್ಟರ್​ ಕೂಲ್​ ಮಾಹಿ ಕೊಟ್ಟಿರುವ ಕೂಲ್​ ಆನ್ಸರ್​​ ಅಭಿಮಾನಿಗಳನ್ನ ಖುಷಿಯ ಕಡಲಲ್ಲಿ ತೇಲಿಸಿದೆ.

ಇದನ್ನೂ ಓದಿ: INDW vs NZW; ಮೈದಾನದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ರಾಧ.. ಕ್ರಿಕೆಟ್ ಲೋಕ ಫುಲ್ ಫಿದಾ!

publive-image
‘ನಾನು ಏನು ಮಾಡುತ್ತಿದ್ದಿನೋ ಅದ್ರಲ್ಲಿ ಖುಷಿಯಾಗಿದ್ದೀನಿ. ನನ್ನ ತಂಡ ಖುಷಿಯಾಗಿದೆ. ನಾನು ಉಳಿದಿರುವ ಕೆಲ ವರ್ಷಗಳ ಆಟವನ್ನ ಎಂಜಾಯ್​ ಮಾಡಲು ಬಯಸುತ್ತೇನೆ. ಎಷ್ಟು ವರ್ಷಗಳ ಕಾಲ ಸಾಧ್ಯವಾಗುತ್ತೋ ಅಷ್ಟು ಎಂಜಾಯ್​ ಮಾಡ್ತಿನಿ’ ಎ.ದು ಧೋನಿ ಹೇಳಿದ್ದಾರೆ.

IPLಗೆ ಧೋನಿ ರೆಡಿ.. ಫ್ರಾಂಚೈಸಿ ಫುಲ್​ ಖುಷ್​​.!

ಧೋನಿ ಉಳಿದ ಕೆಲ ವರ್ಷಗಳ ಆಟವನ್ನ ಎಂಜಾಯ್​ ಮಾಡಲು ರೆಡಿ ಎಂಬ ಮಾತು ಅಭಿಮಾನಿಗಳ ವಲಯದಲ್ಲಿ ಸಂಚಲನ ಮೂಡಿದೆ. ನೆಚ್ಚಿನ ತಲಾ ಆಟವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾತರಾಗಿದ್ದಾರೆ. ಚೆನ್ನೈ ಸೂಪರ್​​ ಕಿಂಗ್ಸ್​ ಸಂತೋಷಕ್ಕೂ ಪಾರವೇ ಇಲ್ಲ. ಇನ್ನೆರೆಡು ದಿನಗಳಲ್ಲಿ ಧೋನಿ ಜೊತೆ ಹೈವೋಲ್ಟೆಜ್​ ಮೀಟಿಂಗ್​ಗೆ ಸಜ್ಜಾಗಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಕೂಡ ಫುಲ್​ ಖುಷ್​​ ಆಗಿದೆ.

ನಮಗೆ ಮತ್ತೆ ಇನ್ನೇನು ಬೇಕು.?

‘ಇವೆಂಟ್​ವೊಂದರಲ್ಲಿ ಧೋನಿ ಮಾತನಾಡಿದ್ದನ್ನ ನಾನು ನೋಡಿದೆ. ಅವರೇ ಆಡಲು ರೆಡಿ ಅಂದಾಗ ನಮಗೆ ಮತ್ತೆ ಇನ್ನೇನು ಬೇಕು.? ಶೀಘ್ರದಲ್ಲೇ ಅವರ ಜೊತೆಗೆ ಸಭೆ ನಡೆಸಲಿದ್ದೇವೆ. ಬಳಿಕ ರಿಟೈನ್ಶನ್​ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ’

ಕಾಶಿ ವಿಶ್ವನಾಥನ್​, CSK CEO

publive-image

ಅನ್​​ಕ್ಯಾಪ್ಡ್​​ ಪ್ಲೇಯರ್​ ಆಗಿ ಧೋನಿ ರಿಟೈನ್​!

ಸದ್ಯ ಧೋನಿ ಐಪಿಎಲ್​ ಆಡೋಕೆ ರೆಡಿ ಎಂಬ ಹಿಂಟ್​ ನೀಡಿದ ಬೆನ್ನಲ್ಲೇ ಸಿಎಸ್​ಕೆ ಫ್ರಾಂಚೈಸಿಯ ರಿಟೈನ್ಶನ್​ ಲಿಸ್ಟ್​ ಕೂಡ ರೆಡಿಯಾಗಿದೆ. ರವೀಂದ್ರ ಜಡೇಜಾ, ಋತುರಾಜ್​ ಗಾಯಕ್ವಾಡ್​ ಟಾಪ್​ 2 ರಿಟೈನ್ಶನ್​ ಆಗಿದ್ರೆ, ಅನ್​ಕ್ಯಾಪ್ಡ್​ ಪ್ಲೇಯರ್​ ನಿಯಮದಡಿಯಲ್ಲಿ ಧೋನಿಯನ್ನ ರಿಟೈನ್​ ಮಾಡಿಕೊಳ್ಳಲು ಸಿಎಸ್​ಕೆ ಸಜ್ಜಾಗಿದೆ. ಈ ನಿಯಮದ ಪ್ರಕಾರ ಈ ಹಿಂದೆ 12 ಕೋಟಿ ಸಂಭಾವನೆ ಪಡೀತಾ ಇದ್ದ ಧೋನಿ, ಈ ಸೀಸನ್​ನಲ್ಲಿ ಕೇವಲ 4 ಕೋಟಿ ಹಣ ಪಡೆಯಲಿದ್ದಾರೆ.

ಇದನ್ನೂ ಓದಿ: Amaran; ಸೌತ್ ಬ್ಯೂಟಿ ಸಾಯಿ ಪಲ್ಲವಿ, ನಟ ಶಿವಕಾರ್ತಿಕೇಯ‌ನ್ ಇಂದು ಬೆಂಗಳೂರಿಗೆ ಭೇಟಿ

ಒಟ್ಟಿನಲ್ಲಿ, IPL ರಿಟೈನ್ಶನ್​ ವಿಚಾರದಲ್ಲಿ ಇಷ್ಟು ದಿನ ಮೌನಕ್ಕೆ ಶರಣಾಗಿದ್ದ ಧೋನಿ ಕೊನೆಗೂ ಮೌನ ಮುರಿದಿದ್ದಾರೆ. ಮಾಹಿ ಐಪಿಎಲ್​ ಆಡೋ ಹಿಂಟ್​ ಕೊಟ್ಟ ಬೆನ್ನಲ್ಲೇ ಚೆನ್ನೈ ಸೂಪರ್​ ಕಿಂಗ್ಸ್​​ ಫ್ರಾಂಚೈಸಿ ಕೂಡ ಫುಲ್​ ಖುಷ್​​ ಆಗಿ ರಿಟೈನ್ಶನ್​ಗೆ ಸಜ್ಜಾಗಿದೆ. ಫ್ಯಾನ್ಸ್​ ಅಂತೂ ತಲಾ ಧೋನಿಯನ್ನ ಮತ್ತೆ ಆನ್​ಫೀಲ್ಡ್​ನಲ್ಲಿ ಕಣ್ತುಂಬಿಕೊಳ್ಳಲು ಫುಲ್​ ಏಕ್ಸೈಟ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment