newsfirstkannada.com

ಸೋಲಿನ ಹೊಣೆ ಹೊರಲು ಸಿದ್ಧರಿಲ್ಲ ರೋಹಿತ್​, ದ್ರಾವಿಡ್​; ಆದ್ರೆ ಅಂದು ಧೋನಿ ಏನು ಮಾಡಿದ್ರು ಗೊತ್ತಾ?

Share :

13-06-2023

    ಸೋಲಿಗೆ ರೋಹಿತ್​ ಕೊಟ್ಟ ಕಾರಣವೇನು?

    ಸೋಲಿನ ಹೊಣೆಯಿಂದ ಜಾರಿದ್ರಾ ದ್ರಾವಿಡ್​?

    ಮಾಹಿ ಮಾತ್ರ ಹಿಂಗಿರಲಿಲ್ಲ! ಯಾಕೆ ಗೊತ್ತಾ?

ಕುಣಿಯೋಕೆ ಬರದವರು ನೆಲ ಡೊಂಕು ಅಂದರಂತೆ. ಸದ್ಯ ಹಂಗಾಗಿದೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ-ಹೆಡ್​​ ಕೋಚ್ ರಾಹುಲ್​ ದ್ರಾವಿಡ್ ಕಥೆ. ಸೋಲಿನ ಹೊಣೆ ಹೊರಲು ಇಬ್ಬರು ಜಾರಿಕೊಂಡಿದ್ದು, ಇಲ್ಲ ಸಲ್ಲದ ಸಬೂಬು ನೀಡ್ತಿದ್ದಾರೆ. ಇವರ ಎಸ್ಕೇಪಿಂಗ್ ನೋಡ್ತಿದ್ರೆ ಗ್ರೇಟೆಸ್ಟ್​ ಕ್ಯಾಪ್ಟನ್ ಧೋನಿ ನೆನಪಾಗ್ತಾರೆ. ಯಾಕೆ ಅಂತೀರಾ ?. ಈ ಸ್ಟೋರಿ ಓದಿ.

ಸೋಲಿಗೆ ನಾನಾ ಕಾರಣಗಳನ್ನ ಕೊಡಬಹುದು. ವಿಶ್ವಟೆಸ್ಟ್ ಚಾಂಪಿಯನ್​ಶಿಪ್​​ ಸೋಲಿನ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್​ ಮತ್ತು ಹೆಡ್​ಕೋಚ್​ ರಾಹುಲ್​ ದ್ರಾವಿಡ್​​​​ ಮಾಡಿದ್ದು ಅದನ್ನೇ. ಟೆಸ್ಟ್​ ವಿಶ್ವಕಪ್ ಸೋಲಿಗೆ ನಮ್ಮ ಬ್ಯಾಟಿಂಗ್ ವೈಫಲ್ಯ ಕಾರಣ. WTC ಬೆಸ್ಟ್​​ ಆಫ್​​ ತ್ರಿ ಸಿರೀಸ್​​ ಆಡಿಸಿದ್ರೆ ಉತ್ತಮ ಅಂತಹ ರೋಹಿತ್​ ಹೇಳಿದ್ರೆ, ಅತ್ತ ಕೋಚ್​ ದ್ರಾವಿಡ್ ಹೇಳೋದೆ ಬೇರೆ. ಐಪಿಎಲ್​ ಬಳಿಕ ಸಿದ್ಧತೆಗೆ ಸಾಕಷ್ಟು ಸಮಯ ಸಿಗ್ಲಿಲ್ಲ ಅಂತ ಕಾರಣ ನೀಡ್ತಾರೆ. ಆದರೆ ಯಾರೊಬ್ಬರು ಸೋಲಿನ ಹೊಣೆ ಹೊತ್ತುಕೊಳ್ಳಲು ಸಿದ್ಧರಿಲ್ಲ.

ಸೋಲಿನ ಹೊಣೆ ಹೊತ್ತುಕೊಳ್ಳಲು ಮಾಹಿ ಸದಾ ಮುಂದು..!

WTC ಸೋಲಿಗೆ ಭಿನ್ನ-ವಿಭಿನ್ನ ಕಾರಣಗಳನ್ನ ಕೊಡ್ತಿರೋ ರೋಹಿತ್​ ಶರ್ಮಾ ಹಾಗೂ ರಾಹುಲ್​​ ದ್ರಾವಿಡ್​​ ಲೆಜೆಂಡ್ ಧೋನಿಯನ್ನೇ ನೋಡಿ ಕಲಿಯಬೇಕಿದೆ. ಯಾಕಂದ್ರೆ ಮಾಹಿ ತನ್ನ ನಾಯಕತ್ವದಲ್ಲಿ ಯಾರನ್ನೂ ಬ್ಲೇಮ್​ ಮಾಡ್ತಿರ್ಲಿಲ್ಲ. ಎಕ್ಸ್​​​ಕ್ಯೂಸ್​ ಕೂಡ ತೆಗೆದುಕೊಳ್ಳುತ್ತಿರಲಿಲ್ಲ. ಬದಲಿಗೆ ತಾನೇ ತಂಡದ ಸೋಲಿನ ಹೊಣೆ ಹೊತ್ತು, ನೋವಿನಲ್ಲೂ ಆಟಗಾರರನ್ನ ಹುರಿದುಂಬಿಸುವ ಕೆಲಸ ಮಾಡ್ತಿದ್ರು. ಅದಕ್ಕೆ ಈ ಮಾತುಗಳೇ ಉತ್ತಮ ಉದಾಹರಣೆ.

ಪತ್ರಕರ್ತ: ಎಂಎಸ್​​, ಯುವರಾಜ್ ಸಿಂಗ್​​ ಮಿಡಲ್ ಬಾಲ್​​​ಗಳನ್ನ ಆಡಲು ಸ್ಟ್ರಗಲ್ ಮಾಡುತ್ತಿದ್ದಾರೆ. ನೀವು ಏನಾದ್ರು ಸಲಹೆ ನೀಡಿದ್ರಾ ?
ಧೋನಿ: ಇಲ್ಲ, ಅವರು ಪ್ರಯತ್ನಿಸುತ್ತಿದ್ದಾರೆ. ನೀವು ಅದನ್ನೇ ಮಾಡಿರುತ್ತೀರಿ ಅಲ್ವೆ ?
ಧೋನಿ,ಟೀಮ್ ಇಂಡಿಯಾ ಮಾಜಿ ನಾಯಕ.

ಪತ್ರಕರ್ತರೊಬ್ಬರು ಯುವರಾಜ್ ಸಿಂಗ್ ಬ್ಯಾಟಿಂಗ್​ನಲ್ಲಿ ಸ್ಟ್ರಗಕ್ ಮಾಡ್ತಿದ್ದಾರೆ ಪ್ರಶ್ನೆ ಮಾಡಿದ್ರೆ ಅವರನ್ನ ಬ್ಲೇಮ್ ಮಾಡುವ ಬದಲು ಯುವಿ ಬೆಂಬಲಕ್ಕೆ ನಿಲ್ತಾರೆ. ನಿಜವಾದ ಕ್ಯಾಪ್ಟನ್​​​​, ನಿಜವಾದ ಲೀಡರ್ ಅಂದರೆ ಇವರು ಕಣ್ರಿ. ಯಾವ ಸೋಲಿಗೂ ಕುಗ್ಗು ಮಾತೇ ಇರಲಿಲ್ಲ. ಎಂತಹ ಕಷ್ಟ ಬಂದ್ರೂ ಅದನ್ನೇ ಬೇರೋಬ್ಬರತ್ತ ಬೊಟ್ಟು ಮಾಡುತ್ತಿರಲಿಲ್ಲ. ತಾನೇ ಎಲ್ಲದರ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ರು.

ನಾಯಕನಾಗಿ 48 ದಿನದಲ್ಲೆ ಟಿ20 ವಿಶ್ವಕಪ್​​​​​​​​ ಗೆದ್ದ ‘ಮಹೇಂದ್ರ’

ಇನ್ನು ಟೆಸ್ಟ್​ ವಿಶ್ವಕಪ್​ ಸೋಲಿನ ಬಳಿಕ ಹೆಡ್​ ಕೋಚ್​ ರಾಹುಲ್​ ದ್ರಾವಿಡ್​ ಏನ್​ ಹೇಳ್ತಾರೆ ಗೊತ್ತಾ ? ವೇಳಾಪಟ್ಟಿ ತುಂಬಾನೇ ಟೈಟ್ ಇತ್ತು. ಐಪಿಎಲ್​ ಬಳಿಕ ಕೆಲವು ವಾರಗಳಲ್ಲೇ ಸಿದ್ಧತೆ ನಡೆಸಿದೆವು. ಜೊತೆಗೆ WTC ಫೈನಲ್​​ಗೂ ಮುನ್ನ ಯಾವುದೇ ಪ್ರವಾಸ ಕೈಗೊಳ್ಳದಿರೋದು ಹಿನ್ನಡೆ ಆಯ್ತು ಎಂದು ಕೋಚ್​ ದ್ರಾವಿಡ್ ಸಬೂಬು ನೀಡ್ತಾರೆ.

ಆದರೆ ಅದೇ ಧೋನಿ ಟಿ20 ವಿಶ್ವಕಪ್​​ನಲ್ಲಿ ತಂಡವನ್ನ ಮುನ್ನಡೆಸಿದಾಗ ನಾಯಕನಾಗಿ ಜಸ್ಟ್​ 48 ದಿನವಷ್ಟೇ ಆಗಿತ್ತು. ಆದರೂ ಮಾಹಿ ದೃಢಗೆಡಲಿಲ್ಲ. ಕಡಿಮೆ ಸಮಯವಿದೆ ಎಂದು ನಾಯಕತ್ವದಿಂದ ಹಿಂದೆ ಸರಿಯಲಿಲ್ಲ. ಬದಲಿಗೆ 2007 ಟಿ20 ವಿಶ್ವಕಪ್ ಜಯಿಸಿ ಜಗತ್ತಿಗೆ ತನ್ನ ತಾಕತ್ತು ಪ್ರೂವ್ ಮಾಡಿದ್ರು.

ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಏನು ಗೊತ್ತಾ..? ಈಗಿನ ಟೀಮ್ ಇಂಡಿಯಾ ಆಟಗಾರರಿಗೆ ಸಕಲ ಸೌಲಭ್ಯವಿದೆ. ಆದರೆ ಅದೇ ಲೆಜೆಂಡ್​ ಧೋನಿ ಚೊಚ್ಚಲ ಟಿ20 ವಿಶ್ವಕಪ್​ ಗೆದ್ದಾಗ ತಂಡಕ್ಕೆ ಯಾವ ಕೋಚು ಇರಲಿಲ್ಲ, ಯಾವ ಮೆಂಟರ್ ಕೂಡ ಇರಲಿಲ್ಲ. ಯಾರು ಇಲ್ಲದೆಯೂ ಮಾಹಿ ಅಂದು ಜಗತ್ತನ್ನೇ ಗೆದ್ದರು.

ಭಾರತ ಇನ್ಮುಂದೆ ಐಸಿಸಿ ಟ್ರೋಫಿ ಗೆಲ್ಲೋದು ಕಷ್ಟನಾ..?

ಮಾಜಿ ಕೋಚ್​ ರವಿಶಾಸ್ತ್ರಿ ಹೇಳಿದ ಮಾತೊಂದು ಇಂತಹ ಪ್ರಶ್ನೆಯನ್ನ ಹುಟ್ಟುಹಾಕಿದೆ. ಐಸಿಸಿ ಟ್ರೋಫಿಗಳನ್ನ ಗೆಲ್ಲುವುದು ನಿಜಕ್ಕೂ ಸುಲಭವಲ್ಲ. ಆದರೆ ಧೋನಿ ಅದನ್ನ ಸುಲಭವಾಗಿಸಿಕೊಂಡಿದ್ದರು. ಹೀಗಂತ ಶಾಸ್ತ್ರಿ, ಮಾಹಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡ್ತಾರೆ. ಇದು ಹಂಡ್ರೆಂಡ್​ ಪರ್ಸೆಂಜ್​ ನಿಜ. ಯಾಕಂದ್ರೆ ಧೋನಿ ಆಡಿದ 4 ಐಸಿಸಿ ಟೂರ್ನಿ ಫೈನಲ್​​​​ನಲ್ಲಿ ಮೂರರಲ್ಲಿ ಟ್ರೋಫಿ ಗೆಲ್ಲಿಸಿಕೊಟ್ಟು, ಒಂದರಲ್ಲಿ ಸೋತಿದ್ದಾರೆ. ಆದರೆ ಉಳಿದೆಲ್ಲ ನಾಯಕರು 7 ಪಂದ್ಯಗಳಲ್ಲಿ ಬರೀ ಒಂದು ಸಲ ಮಾತ್ರ ಕಪ್​ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮಾಹಿ ಆಲ್​ಟೈಮ್ ಗ್ರೇಟೆಸ್ಟ್​ ಕ್ಯಾಪ್ಟನ್​​.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೋಲಿನ ಹೊಣೆ ಹೊರಲು ಸಿದ್ಧರಿಲ್ಲ ರೋಹಿತ್​, ದ್ರಾವಿಡ್​; ಆದ್ರೆ ಅಂದು ಧೋನಿ ಏನು ಮಾಡಿದ್ರು ಗೊತ್ತಾ?

https://newsfirstlive.com/wp-content/uploads/2023/06/Rahul-Rohit.jpg

Load More