newsfirstkannada.com

ಪಂದ್ಯ ಗೆಲ್ಲಿಸಿಕೊಟ್ಟ ಜಡೇಜಾರನ್ನು ಕಣ್ಣೀರಿನಿಂದ ಅಪ್ಪಿಕೊಂಡ ದಿ ಲೆಜೆಂಡ್ ಧೋನಿ..!

Share :

Published May 30, 2023 at 8:11am

    ಜಡೇಜಾರನ್ನು ಎತ್ತಿಕೊಂಡು ಸಂಭ್ರಮಿಸಿದ ಧೋನಿ

    CSK ಪಾಲಿಗೆ ಮರೆಯಲಾಗದ ಇನ್ನಿಂಗ್ಸ್ ಕೊಟ್ಟ ಜಡ್ಡು..!

    ಆ ಭಾವನಾತ್ಮಕ ವಿಡಿಯೋದಲ್ಲಿ ಏನಿದೆ..?

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಹಾನ್ ನಾಯಕ ಎಂ.ಎಸ್​. ಧೋನಿ, ತಾವೊಬ್ಬ ಯಶಸ್ವಿ ನಾಯಕ ಅನ್ನೋದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಐದನೇ ಬಾರಿಗೆ ಸಿಎಸ್​ಕೆ ‘ಐಪಿಎಲ್​ ಕಪ್’​​ಗೆ ಮುತ್ತಿಡುವಂತೆ ತಂಡವನ್ನು ಕಟ್ಟಿದ ಸರಾದರ. ನಿನ್ನೆಯ ಫೈನಲ್​ನಲ್ಲಿ ಸಿಎಸ್​​ಕೆ ಗುಜರಾತ್ ತಂಡವನ್ನು ಮಣಿಸಿ, ವಿಜಯಶಾಲಿ ಆಗ್ತಿದ್ದಂತೆ ಧೋನಿಯ ಕಣ್ಣುಗಳಲ್ಲಿ ನೀರು ತಂಬಿದ್ದವು.

ಎರಡನೇ ಇನ್ನಿಂಗ್ಸ್​ನಲ್ಲಿ ಮಳೆ ಬಂದ ಪರಿಣಾಮ DLS ನಿಯಮದ ಪ್ರಕಾರ ಸಿಎಸ್​​ಕೆಗೆ 15 ಓವರ್​​ನಲ್ಲಿ 171 ರನ್​ ಬೇಕಿತ್ತು. ಅದರಂತೆ ಅದ್ಭುತವಾಗಿ ಆಡಿದ್ದ ಸಿಎಸ್​ಕೆಗೆ ಕೊನೆಯ 15ನೇ ಓವರ್​ನಲ್ಲಿ 13 ರನ್ ಬೇಕಿತ್ತು. ಅಂತಿಮ ಓವರ್ ಎಸೆಯಲು ಗುಜರಾತ್ ಟೈಟನ್ಸ್​ ತಂಡದಿಂದ ಮೋಹಿತ್ ಶರ್ಮಾ ಬಂದಿದ್ದರು. ಮೊದಲನೇ ಬಾಲ್​ನಲ್ಲಿ ಯಾವುದೇ ರನ್ ಬರಲಿಲ್ಲ. ಎರಡನೇ ಬಾಲ್​ನಲ್ಲಿ ಶಿವಂ ದುಬೆ ಒಂದು ರನ್ ಗಳಿಸುವಲ್ಲಿ ಯಶಸ್ವಿಯಾದರು. ಮೂರನೇ ಬಾಲ್​​ನಲ್ಲಿ ಜಡೇಜಾ ಒಂದು ರನ್ ಪಡೆದ್ರೆ, ನಾಲ್ಕನೇ ಬಾಲ್​ನಲ್ಲೂ ಒಂದು ರನ್ ಸಿಎಸ್​ಕೆಗೆ ಬಂದಿತ್ತು.

ಹೀಗಿರುವಾಗ ಗುಜರಾತ್ ಗೆದ್ದೇಬಿಡ್ತು ಅನ್ನೋ ಭಿಗುಮಾನದಲ್ಲಿತ್ತು. ಯಾಕಂದ್ರೆ ಸಿಎಸ್​ಕೆಗೆ ಗೆಲ್ಲಲು 10 ರನ್​​ಗಳ ಅಗತ್ಯ ಇತ್ತು. ಆದರೆ ಐದನೇ ಬಾಲ್​ನಲ್ಲಿ ಜಡೇಜಾ ಅದ್ಭುತ ಸಿಕ್ಸರ್ ಬಾರಿಸಿದರು. ಈ ಮೂಲಕ ರವೀಂದ್ರ ಜಡೇಜಾ ಸಿಎಸ್​ಕೆಗೆ ಮರೆಯಲಾಗ ವಿಕ್ಟರಿ ತಂದುಕೊಟ್ಟರು.

ಯಾವಾಗ ಜಡೇಜಾ ಬೌಂಡರಿ ಬಾರಿಸಿ ಸಂಭ್ರಮಿಸುತ್ತಿದ್ದಂತೆಯೇ ಸಿಎಸ್​ಕೆ ಕ್ಯಾಂಪ್​​ನಲ್ಲಿ ಸಂಭ್ರಮ ಮೇಳೈಸಿತ್ತು. ಎಲ್ಲರೂ ಮೈದಾನದಲ್ಲಿ ಬಂದು ಕುಣಿದು ಕಪ್ಪಳಿಸುತ್ತಿದ್ದರು. ಪೇವಿಲಿಯನ್​ನಲ್ಲಿ ಕೂತಿದ್ದ ಧೋನಿಯನ್ನ ಜಡೇಜಾ ಸಂಭ್ರಮಿಸುತ್ತಾ ಹುಡುಕಿಕೊಂಡು ಬರುತ್ತಾರೆ. ಜಡೇಜಾ ಬರುತ್ತಿದ್ದಂತೆಯೇ, ಧೋನಿ ಎದ್ದುನಿಂತು ಅವರನ್ನು ಮೇಲಕ್ಕೆತ್ತಿಕೊಳ್ತಾರೆ. ಈ ವೇಳೆ ಧೋನಿ ಕಣ್ಣುಗಳಲ್ಲಿ ನೀರು ತುಂಬಿದ್ದವು. ಧೋನಿ ಜಡೇಜಾರನ್ನು ತಬ್ಬಿಕೊಂಡು ಭಾವುಕರಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಫೈನಲ್ ಪಂದ್ಯದಲ್ಲಿ ಧೋನಿಗೆ ಫಿನಿಶ್ ಮಾಡುವ ದೊಡ್ಡ ಅವಕಾಶ ಸಿಕ್ಕಿತ್ತು. ಆದರೆ, ಅದನ್ನ ಧೋನಿ ಸುಲಭವಾಗಿ ಕೈಚೆಲ್ಲಿದರು. ಮೊದಲ ಬಾಲ್​ನಲ್ಲೇ ಡಕೌಟ್ ಆಗುವ ಮೂಲಕ ಕ್ರೀಸ್​ನಿಂದ ಹೊರ ಹೋದರು. ಸುಲಭವಾಗಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಬಿಟ್ಟ ಅನ್ನೋ ಬೇಜಾರದಲ್ಲಿ ಧೋನಿ, ಪೆವಿಲಿಯನ್​ನಲ್ಲಿ ಬೇಸರಿದಿಂದ ಕೂತಿದ್ದರು. ಯಾವಾಗ ಕೊನೆಯ ಎರಡನೇ ಬಾಲ್​ನಲ್ಲಿ ಮ್ಯಾಜಿಕ್ ಮಾಡ್ತಿದ್ದಂತೆ, ಧೋನಿಯ ಸಂಭ್ರಮ ಉಮ್ಮಳಿಸಿ ಬಂದಿತ್ತು. ಅದೇ ಖುಷಿಯಲ್ಲಿ ಗೆಲುವು ತಂದುಕೊಟ್ಟ ಜಡೇಜಾರನ್ನು ಎತ್ತಿಕೊಂಡು ಭಾವಪರವಶರಾಗಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಪಂದ್ಯ ಗೆಲ್ಲಿಸಿಕೊಟ್ಟ ಜಡೇಜಾರನ್ನು ಕಣ್ಣೀರಿನಿಂದ ಅಪ್ಪಿಕೊಂಡ ದಿ ಲೆಜೆಂಡ್ ಧೋನಿ..!

https://newsfirstlive.com/wp-content/uploads/2023/05/DHONI123.jpg

Load More