ಈ ಬಾರಿ ಸೋಲುವುದರಲ್ಲೇ ಧೋನಿ ದಾಖಲೆ.. ಚೆನ್ನೈಗೆ ನಿನ್ನೆ ಎಷ್ಟನೇ ಸೋಲು..?

author-image
Ganesh
Updated On
ಈ ಬಾರಿ ಸೋಲುವುದರಲ್ಲೇ ಧೋನಿ ದಾಖಲೆ.. ಚೆನ್ನೈಗೆ ನಿನ್ನೆ ಎಷ್ಟನೇ ಸೋಲು..?
Advertisment
  • ಹೈದರಾಬಾದ್ ತಂಡದ ವಿರುದ್ಧ ಸಿಎಸ್​​ಕೆಗೆ ಸೋಲು
  • ಮ್ಯಾಚ್ ವೀಕ್ಷಿಸಲು ಬಂದ ಸ್ಟಾರ್​ ನಟರಿಗೆ ನಿರಾಸೆ
  • ಪ್ಲೇ-ಆಫ್ ಕನಸು ಕೈಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್

ಎಂ.ಎಸ್​.ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ಗೆ ಮತ್ತೊಂದು ಸೋಲಾಗಿದೆ. ನಿನ್ನೆ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಸೋಲುವ ಮೂಲಕ ಈ ಬಾರಿಯ ಐಪಿಎಲ್​​ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.

ಇಲ್ಲಿಯವರೆಗೆ ಒಟ್ಟು 9 ಪಂದ್ಯಗಳನ್ನು ಆಡಿರುವ ಚೆನ್ನೈ ಸೂಪರ್​ ಕಿಂಗ್ಸ್, 7 ರಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಟಾಸ್​​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೈ 20 ಓವರ್​ಗಳಲ್ಲಿ ಕೇವಲ 154 ರನ್ಸ್ ಕಲೆ ಹಾಕಿತ್ತು. 18.4 ಓವರ್​​ಗಳಲ್ಲಿ ಗುರಿ ತಲಪುವ ಮೂಲಕ ಹೈದ್ರಾಬಾದ್​ ಐದು ವಿಕೆಟ್​​ಗಳ ಗೆಲುವು ಸಾಧಿಸಿತು. ಈ ಮೂಲಕ ಚೆನ್ನೈ ತಂಡ ಪ್ಲೇ ಆಫ್ ಕನಸು ಭಗ್ನಗೊಂಡಿದೆ.

ಇದನ್ನೂ ಓದಿ: ನಿನ್ನೆಯೂ ಕೋಪಿಸಿಕೊಂಡ ವಿರಾಟ್ ಕೊಹ್ಲಿ.. ಕೈಮುಗಿದು ಆಕ್ರೋಶ ವ್ಯಕ್ತಪಡಿಸಿದ್ದು ಯಾರಿಗೆ?

ತಮಿಳು ನಟರಾದ ಅಜಿತ್​ ನಿನ್ನೆ ಚೆನ್ನೈನಲ್ಲಿ ನಡೆದ ಸಿಎಸ್​​ಕೆ ಮತ್ತು ಎಸ್​​ಆರ್​ಹೆಚ್​​ ನಡುವಿನ ಪಂದ್ಯವನ್ನ ವೀಕ್ಷಿಸಿದ್ದಾರೆ. ಚೆಪಾಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಜೊತೆ ಅಜಿತ್ ಹಾಗೂ ಪತ್ನಿ ಶಾಲಿನಿ ಪಂದ್ಯ ವೀಕ್ಷಿಸಿದರು. ಮತ್ತೊಬ್ಬ ನಟ ಶಿವಕಾರ್ತಿಕೇಯನ್ ಕೂಡ ಪತ್ನಿ ಸಮೇತರಾಗಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಇಬ್ಬರು ನಟರನ್ನ ಒಟ್ಟಿಗೆ ಕಂಡ ಅಭಿಮಾನಿಗಳು ಖುಷಿಪಟ್ಟರು.

ಇದನ್ನೂ ಓದಿ: ಆರ್​ಆರ್ ವಿರುದ್ಧ ಗೆದ್ದ ಬೆನ್ನಲ್ಲೇ ಆರ್​ಸಿಬಿಗೆ ಮತ್ತೊಂದು ಖುಷಿ ಸುದ್ದಿ; ಫ್ಯಾನ್ಸ್ ಖುಷ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment