/newsfirstlive-kannada/media/post_attachments/wp-content/uploads/2024/10/MS-Dhoni_Rohit.jpg)
ಇತ್ತೀಚೆಗೆ ನಡೆದ ದಿ ಗ್ರೇಟ್ ಕಪಿಲ್ ಶರ್ಮಾ ಶೋನಲ್ಲಿ ಟೀಮ್ ಇಂಡಿಯಾದ ಆಟಗಾರರು ಭಾಗಿಯಾಗಿದ್ದರು. ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಪಾರ್ಟಿಸಿಪೇಟ್ ಮಾಡಿದ್ದರು. ಶೋನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ ಕೂಡ ಇದ್ದರು.
ಇನ್ನು, ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಶಿವಂ ದುಬೆಗೆ ಪ್ರಶ್ನೆಯೊಂದು ಕೇಳಿ ಇಕ್ಕಟ್ಟಿಗೆ ಸಿಲುಕಿಸಿದ್ರು. ನೀವು ಚೆನ್ನೈ ತಂಡದಲ್ಲಿ ಧೋನಿ ಕ್ಯಾಪ್ಟನ್ಸಿ ಅಡಿಯಲ್ಲಿ ಆಡುತ್ತಿರೀ. ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾದಲ್ಲಿ ಅಡಿಯಲ್ಲಿ ಆಡಿದ್ದೀರಿ. ನಿಮ್ಮ ಪ್ರಕಾರ ಧೋನಿ, ರೋಹಿತ್ ಶರ್ಮಾ ಇಬ್ಬರಲ್ಲಿ ಬೆಸ್ಟ್ ಕ್ಯಾಪ್ಟನ್ ಎಂಬ ಪ್ರಶ್ನೆ ದುಬೆಗೆ ಕಪಿಲ್ ಶರ್ಮಾ ಕೇಳಿದ್ರು.
ಕಪಿಲ್ ಶರ್ಮಾ ಪ್ರಶ್ನೆಗೆ ದುಬೆ ಉತ್ತರ ಹೀಗಿತ್ತು. ನಾನು ಕ್ರಿಕೆಟ್‌ಗೆ ಬಂದ ಕ್ರೆಡಿಟ್ ನನ್ನ ತಂದೆಗೆ ನೀಡುತ್ತೇನೆ. ನಾನು ಚೆನ್ನೈನಲ್ಲಿ ಆಡುತ್ತಿದ್ದಾಗ ಧೋನಿ, ಟೀಮ್ ಇಂಡಿಯಾದಲ್ಲಿ ಆಡುವಾಗ ರೋಹಿತ್ ಬೆಸ್ಟ್ ಕ್ಯಾಪ್ಟನ್ ಎಂದು ಭಾವಿಸುತ್ತೇನೆ ಎಂದರು. ಇದಕ್ಕೆ ರೋಹಿತ್ ಸೇರಿದಂತೆ ಎಲ್ಲರೂ ಖುಷ್ ಆದ್ರು.
ದುಬೆ ಕಾಲೆಳೆದ ರೋಹಿತ್!
ಉತ್ತರವನ್ನು ಕೇಳಿದ ಬಳಿಕ ರೋಹಿತ್ ಶರ್ಮಾ ಶಿವಂ ದುಬೆ ಕಾಲೆಳೆದರು. ಈ ಪ್ರಶ್ನೆಗೆ ಉತ್ತರಿಸಲು ನೀನು ಎರಡು ದಿನ ಪ್ರ್ಯಾಕ್ಟಿಸ್ ಮಾಡಿದಿಯಾ ಅಲ್ಲವೇ ಎಂದರು. ಈ ಸಂದರ್ಭದಲ್ಲಿ ಶೋನಲ್ಲಿ ಇದ್ದ ಎಲ್ಲಾ ಆಟಗಾರರು ನಕ್ಕರು.
ಇದನ್ನೂ ಓದಿ:ಖುಷಿಯಲ್ಲಿ ತಾಯಿ ಜೊತೆ ಸಖತ್ ಸ್ಟೆಪ್ಸ್ ಹಾಕಿದ ಕೊಹ್ಲಿ; ವಿರಾಟ್ ಡ್ಯಾನ್ಸ್ ವಿಡಿಯೋ ವೈರಲ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ