newsfirstkannada.com

6, 6, 6 ಕೊನೇ ಓವರ್‌ನಲ್ಲಿ M.S ಧೋನಿ ಮ್ಯಾಜಿಕ್‌.. ಮುಂಬೈ ಇಂಡಿಯನ್ಸ್‌ಗೆ CSK ಸಖತ್‌ ಸವಾಲ್‌!

Share :

Published April 14, 2024 at 9:36pm

Update April 14, 2024 at 9:39pm

    ವಾಂಖೆಡೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ

    CSK ಪರ ಋತುರಾಜ್ ಗಾಯಕವಾಡ, ಶಿವಂ ದುಬೆ ಉತ್ತಮ ಜೊತೆಯಾಟ

    ಬ್ಯಾಕ್ ಟು ಬ್ಯಾಕ್ 3 ಸಿಕ್ಸರ್ ಬಾರಿಸಿ ಮಿಂಚಿದ ಮಹೇಂದ್ರ ಸಿಂಗ್ ಧೋನಿ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ CSK 4 ವಿಕೆಟ್ ಕಳೆದುಕೊಂಡು 206 ರನ್ ಕಲೆ ಹಾಕಿದ್ದು, ಮುಂಬೈ ಇಂಡಿಯನ್ಸ್‌ ತವರಿನಲ್ಲಿ ಬಿಗ್ ಚಾಲೆಂಜ್ ಎದುರಾಗಿದೆ.

ಮೊದಲು ಬ್ಯಾಟಿಂಗ್‌ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಋತುರಾಜ್ ಗಾಯಕವಾಡ, ಶಿವಂ ದುಬೆ ಉತ್ತಮ ಜೊತೆಯಾಟದ ಕೊಡುಗೆ ನೀಡಿದರು. ಋತುರಾಜ್ ಗಾಯಕವಾಡ ಅವರು 5 ಬೌಂಡರಿ, 5 ಸಿಕ್ಸರ್ ನೆರವಿನಿಂದ 69 ರನ್ ಸಿಡಿಸಿದರೆ, ಶಿವಂ ದುಬೆ 10 ಬೌಂಡರಿ, 2 ಸಿಕ್ಸರ್ ಸಿಡಿಸಿ ಸಿಎಸ್‌ಕೆ ತಂಡಕ್ಕೆ 66 ರನ್‌ಗಳ ಕಾಣಿಕೆ ನೀಡಿದರು.

ಋತುರಾಜ್ ಗಾಯಕವಾಡ, ಶಿವಂ ದುಬೆ ಜೊತೆಯಾಟ ಬ್ರೇಕ್ ಆಗುತ್ತಿದ್ದಂತೆ ಎಂ.ಎಸ್‌ ಧೋನಿ ಫೀಲ್ಡ್‌ಗೆ ಇಳಿದರು. ಕೊನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಮಹೇಂದ್ರ ಸಿಂಗ್ ಧೋನಿ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. ಕೊನೇಯ 4 ಎಸೆತದಲ್ಲಿ 3 ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಇದನ್ನೂ ಓದಿ: ಫಿಲಿಪ್ ಸಾಲ್ಟ್ ಭರ್ಜರಿ ಬ್ಯಾಟಿಂಗ್‌.. ಕೋಲ್ಕತ್ತಾ ವಿರುದ್ಧ ಕನ್ನಡಿಗ ಕೆ.ಎಲ್‌ ರಾಹುಲ್ ಪಡೆಗೆ ಹೀನಾಯ ಸೋಲು

ಮಹೇಂದ್ರ ಸಿಂಗ್ ಧೋನಿ ಅವರು ಬ್ಯಾಕ್ ಟು ಬ್ಯಾಕ್ 3 ಸಿಕ್ಸರ್ ಬಾರಿಸಿದ್ದು ಅಮೋಘವಾಗಿತ್ತು. ಎಂ.ಎಸ್‌ ಧೋನಿ ಬ್ಯಾಟಿಂಗ್ ನೋಡಲು ಕಾಯುತ್ತಿದ್ದ ಅಭಿಮಾನಿಗಳು ವಾಂಖೆಡೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6, 6, 6 ಕೊನೇ ಓವರ್‌ನಲ್ಲಿ M.S ಧೋನಿ ಮ್ಯಾಜಿಕ್‌.. ಮುಂಬೈ ಇಂಡಿಯನ್ಸ್‌ಗೆ CSK ಸಖತ್‌ ಸವಾಲ್‌!

https://newsfirstlive.com/wp-content/uploads/2024/04/dhoni1.jpg

Load More