RCB ಎದುರಾಳಿ ಆದ್ರೂ ಯಂಗ್​ ಪ್ಲೇಯರ್​ನ ಬ್ಯಾಟಿಂಗ್ ಮೆಚ್ಚಿದ ಕಿಂಗ್​ ಕೊಹ್ಲಿ.. ಯಾಕೆ ಗೊತ್ತಾ?

author-image
Bheemappa
Updated On
RCB ಎದುರಾಳಿ ಆದ್ರೂ ಯಂಗ್​ ಪ್ಲೇಯರ್​ನ ಬ್ಯಾಟಿಂಗ್ ಮೆಚ್ಚಿದ ಕಿಂಗ್​ ಕೊಹ್ಲಿ.. ಯಾಕೆ ಗೊತ್ತಾ?
Advertisment
  • ವಿರಾಟ್ ಕೊಹ್ಲಿ ಅಷ್ಟು ಸಾಮಾನ್ಯವಾಗಿ ಯಾರನ್ನ ಹೊಗಳುವುದಿಲ್ಲ!
  • ಎದುರಾಳಿ ಆದರೂ ಯುವ ಪ್ಲೇಯರ್​ನ​ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ
  • ಯುವ ಪ್ಲೇಯರ್​ನ ವಿಕೆಟ್​ ಉರುಳಿದ್ದೇ RCB ಗೆಲುವಿಗೆ ಕಾರಣ

ರಾಜಸ್ಥಾನ್ ರಾಯಲ್ಸ್​ ಜೊತೆಗಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 11 ರನ್​ಗಳಿಂದ ರೋಚಕ ಗೆಲುವು ಪಡೆದಿದೆ. ಕೊನೆಯ ಹಂತದಲ್ಲಿ ಪಂದ್ಯ ರಾಜಸ್ಥಾನ್​ ಪರವಾಗಿತ್ತು. ಆದ್ರೆ ಈ ವೇಳೆ ಪ್ರಮುಖ ವಿಕೆಟ್​ಗಳು ಉರುಳಿದ್ದು ತಂಡಕ್ಕೆ ದೊಡ್ಡ ಹೊಡೆತ ಕೊಟ್ಟಿತು. ವಿಕೆಟ್​ ಕೀಪರ್ ಧೃವ್​ ಜುರೆಲ್ ಪಂದ್ಯದಲ್ಲಿ ಗೆಲುವಿಗಾಗಿ ಮಾಡಿದ್ದ ಬ್ಯಾಟಿಂಗ್​ ಹೋರಾಟವನ್ನು ಕಿಂಗ್ ಕೊಹ್ಲಿ ಮೆಚ್ಚಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಏಪ್ರಿಲ್​ 24 ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಧೃವ್​ ಜುರೇಲ್​ ವಿರೋಚಿತ ಹೋರಾಟ ನಡೆಸಿದರು. ರಾಜಸ್ಥಾನ್​ ತಂಡವನ್ನು ಗೆಲ್ಲಿಸಲು ಬ್ಯಾಟಿಂಗ್​ನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಿದರು. ಜುರೇಲ್​ ಕ್ರೀಸ್​​ನಲ್ಲಿ ಇರುವವರೆಗೆ ಪಂದ್ಯ ರಾಜಸ್ಥಾನ್​ ತಂಡದ್ದೇ ಆಗಿತ್ತು. ಯಾವಾಗ ಜುರೇಲ್ ವಿಕೆಟ್​ ಒಪ್ಪಿಸಿದರೋ ಅವಾಗ ಆರ್​ಸಿಬಿ ಗೆಲುವಿನ ಕನಸು ದೊಡ್ಡದಾಗುತ್ತ ಹೋಯಿತು.

ಇದನ್ನೂ ಓದಿ:ಭಾರತ- ಪಾಕ್​ ಪಂದ್ಯಗಳಿಗೆ ಶಾಶ್ವತ ಬ್ರೇಕ್​..? ಟೀಮ್ ಇಂಡಿಯಾದ ಲೆಜೆಂಡರಿ ಕ್ರಿಕೆಟರ್​ ಹೇಳಿದ್ದೇನು?

publive-image

ಆರ್​ಸಿಬಿ ಜೊತೆಗಿನ ಪಂದ್ಯದಲ್ಲಿ ಜುರೇಲ್​ 34 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಬಿಗ್​ ಸಿಕ್ಸರ್​ಗಳಿಂದ 47 ರನ್​ಗಳಿಸಿ ಚಚ್ಚಿದ್ದರು. ತಂಡವನ್ನು ಗೆಲ್ಲಿಸುವ ಹಂತದಲ್ಲಿದ್ದ ಜುರೇಲ್​, ಜೋಶ್​ ಹ್ಯಾಜಲ್ವುಡ್​ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್​ ಕೊಟ್ಟು ನಿರಾಶೆಯಿಂದ ಹೊರ ನಡೆದರು. ಇನ್ನೊಂದು ಓವರ್ ಇದ್ದರೆ ಮ್ಯಾಚ್​ ಆರ್​ಸಿಬಿಯಿಂದ ಕೈ ಜಾರಿ ಹೋಗುವ ಎಲ್ಲ ಲಕ್ಷಣಗಳು ಇದ್ದವು.

ಪಂದ್ಯ ಮುಗಿದ ಮೇಲೆ ಧೃವ್​​ ಜುರೇಲ್ ಅವರು ವಿರಾಟ್​​ ಕೊಹ್ಲಿ ಇದ್ದಲ್ಲಿಗೆ ಬಂದಿದ್ದಾರೆ. ಆಗ ಇಬ್ಬರು ಪಂದ್ಯದಲ್ಲಿನ ಸೋಲು, ಗೆಲುವಿನ ಬಗ್ಗೆ ಚರ್ಚೆ ಮಾಡಿದ್ದಾರೆ. ಗೆಲುವಿಗಾಗಿ ಒಳ್ಳೆಯ ಬ್ಯಾಟಿಂಗ್ ಮಾಡಿದೆ. ಇದೇ ಪರ್ಫಾಮೆನ್ಸ್​ ಮುಂದುವರೆಸು ಎಂದು ಬ್ಯಾಟಿಂಗ್​ನಲ್ಲಿ ಧೃವ್​ ಜುರೇಲ್ ಮಾಡಿದ ಹೋರಾಟವನ್ನು ಕಿಂಗ್ ಕೊಹ್ಲಿ ಅವರು ಪ್ರಶಂಸಿಸಿದ್ದಾರೆ. ಇನ್ನು ಕ್ರೀಸ್​ನಲ್ಲಿ ಇರುವಾಗ ಫಿನಿಶಿಂಗ್ ಯಾವ ರೀತಿ ಮಾಡಬೇಕು, ಬ್ಯಾಟಿಂಗ್​ ಹೇಗೆ ಇರಬೇಕು ಎನ್ನುವುದರ ಕುರಿತು ಕೆಲ ಟಿಪ್ಸ್​ಗಳನ್ನು ಯುವ ಆಟಗಾರನಿಗೆ ಕೊಹ್ಲಿ ಧಾರೆ ಎರೆದಿದ್ದಾರೆ.


">April 25, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment