/newsfirstlive-kannada/media/post_attachments/wp-content/uploads/2024/10/Team-India-Dube.jpg)
ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಟೀಮ್​ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಇಂಗ್ಲೆಂಡ್​ ತಂಡ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ.
ಮೈದಾನದಲ್ಲಿ ತೇವಾಂಶ ಇರೋ ಕಾರಣ ಚೇಸಿಂಗ್ ಮಾಡಲು ನಿರ್ಧಾರ ಮಾಡಿದ್ದೇವೆ ಎಂದರು ಟೀಮ್​ ಇಂಡಿಯಾ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​. ಇದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2024/01/Dhruv-Jurel.jpg)
ಪ್ಲೇಯಿಂಗ್​ ಎಲೆವೆನ್​​ನಿಂದ ಸ್ಟಾರ್​ ಆಟಗಾರರಿಗೆ ಕೊಕ್​
ಇನ್ನು, ಟೀಮ್​ ಇಂಡಿಯಾದಿಂದ ಸ್ಟಾರ್​ ಆಟಗಾರರಿಗೆ ಕೊಕ್​ ನೀಡಲಾಗಿದೆ. ಮೊಹಮ್ಮದ್ ಶಮಿ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಅವರನ್ನು ಬೆಂಚ್​ ಕಾಯಿಸಲಾಗಿದೆ. ಅದರಲ್ಲೂ ವಿರಾಟ್ ಕೊಹ್ಲಿ ಆಪ್ತ ಧೃವ್​ ಜುರೆಲ್​ಗೆ ಇದು ನಿರಾಸೆ ಆಗಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಯುವ ವಿಕೆಟ್ ಕೀಪರ್, ಬ್ಯಾಟರ್ ಧ್ರುವ್ ಜುರೆಲ್. ಇವರು ವೈಟ್ ಬಾಲ್ ಕ್ರಿಕೆಟ್​​ನತ್ತ ತಮ್ಮ ಗಮನ ಹರಿಸಿದ್ದಾರೆ. ಟೆಸ್ಟ್ ಕ್ರಿಕೆಟ್​​ಗೆ ನನ್ನ ಆದ್ಯತೆ ಎಂದು ಜುರೆಲ್ ಎಂದಿದ್ದರು. ಆದ್ರೂ ಇವರನ್ನು ಟಿ20 ಕ್ರಿಕೆಟ್​ಗೆ ಆಯ್ಕೆ ಮಾಡಿದ್ದು, ಬೆಂಚ್​​ ಕಾಯಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us