/newsfirstlive-kannada/media/post_attachments/wp-content/uploads/2024/10/Team-India-2.jpg)
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳ ಹೀನಾಯ ಪ್ರದರ್ಶನ ಟೀಕೆಗೆ ಗುರಿಯಾಗುತ್ತಿದೆ. ಅದರಲ್ಲೂ ವಿಕೆಟ್ ಕೀಪರ್ ರಿಷಬ್ ಪಂತ್ ಬೇಕಾಬಿಟ್ಟಿ ಬ್ಯಾಟ್ ಬೀಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಪಂತ್ ಅವರನ್ನು ತಂಡದಿಂದ ಕೈ ಬಿಡುವ ಮಾತುಗಳು ಕೇಳಿ ಬರುತ್ತಿವೆ.
ಪಂತ್ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರ ಲೂಸ್ ಶಾಟ್‌ಗಳು ಟೀಂ ಇಂಡಿಯಾಗೆ ಸಮಸ್ಯೆ ಹೆಚ್ಚಿಸುತ್ತಿವೆ. ಆಸ್ಟ್ರೇಲಿಯಾ ವಿರುದ್ಧ ಪಂತ್ ಆಡಿದ 4 ಟೆಸ್ಟ್ ಪಂದ್ಯಗಳಲ್ಲಿ 22ರ ಸರಾಸರಿಯಲ್ಲಿ 154 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಅರ್ಧಶತಕ ಮಾತ್ರ ಸೇರಿದೆ. ಹೀಗಾಗಿ ಈಗ ಸಿಡ್ನಿ ಟೆಸ್ಟ್‌ನಿಂದ ಪಂತ್ ಕೈಬಿಡಬಹುದು ಎಂಬ ಸುದ್ದಿ ಬರುತ್ತಿದೆ.
ಪಂತ್ ಬದಲಿಗೆ ಯಾರಿಗೆ ಸ್ಥಾನ?
ರಿಷಬ್ ಪಂತ್ ಬೇಜವಾಬ್ದಾರಿ ಆಟದಿಂದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬೇಸತ್ತಿದೆ. ಹೀಗಾಗಿ ಇವರ ಸ್ಥಾನದಲ್ಲಿ ಯುವ ಆಟಗಾರ ಧ್ರುವ್ ಜುರೇಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿವೆ.
ಭಾರತದ ಪರ ಜುರೆಲ್ ಸ್ಥಿರ ಪ್ರದರ್ಶನ
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಧೃವ್ ಜುರೆಲ್. ಇವರು ಭಾರತ ಎ ತಂಡದ ಪರ ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಈ ವೇಳೆ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಮನಮೋಹಕ ಪ್ರದರ್ಶನ ನೀಡಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆ ಉಳಿಸಿಕೊಂಡಿದ್ದರು.
ಧೃವ್ ಜುರೆಲ್ ಸಾಧನೆ
ಇನ್ನು, ಧ್ರುವ್ ಜುರೆಲ್ ಅವರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು 22 ಪಂದ್ಯಗಳಲ್ಲಿ 45.74 ಸರಾಸರಿಯಲ್ಲಿ 1235 ರನ್ ಗಳಿಸಿದ್ದಾರೆ. ಜುರೆಲ್ ಭಾರತ ತಂಡದ ಪರ 6 ಇನ್ನಿಂಗ್ಸ್‌ಗಳಲ್ಲಿ 40.40 ಸರಾಸರಿಯಲ್ಲಿ 202 ರನ್ ಗಳಿಸಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಮತ್ತೊಂದು ಆಘಾತ; 5ನೇ ಟೆಸ್ಟ್‌ನಿಂದ ಸ್ಟಾರ್ ಪ್ಲೇಯರ್ ಔಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ