/newsfirstlive-kannada/media/post_attachments/wp-content/uploads/2024/10/DHRUVA.jpg)
ಆಯುಧ ಪೂಜೆಯಂದೇ ಅಂದರೆ ಇಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಕರ್ನಾಟಕ ಸೇರಿದಂತೆ ವಿಶ್ವದ್ಯಾಂತ ರಿಲೀಸ್ ಆಗುತ್ತಿದೆ. ಇಂತಹ ಒಂದು ಸಂಭ್ರಮಕ್ಕಾಗಿ ಕಾಯುತ್ತಿದ್ದ ಧ್ರುವ ಅಭಿಮಾನಿಗಳು ಫುಲ್ ಜೋಶ್ನಲ್ಲಿದ್ದಾರೆ. ಅಲ್ಲದೇ ಸಿನಿಮಾ ಇಂದು ಬೆಳ್ಳಿತೆರೆಗೆ ಅಪ್ಪಳಿಸುತ್ತಿದ್ದರಿಂದ ಥಿಯೇಟರ್ಗಳ ಮುಂದೆ ಧ್ರುವ ಫ್ಯಾನ್ಸ್ ಸಂಭ್ರಮ ಜೋರಾಗಿದೆ.
ಬಹುಕೋಟಿ ವೆಚ್ಚದ ಮಾರ್ಟಿನ್ ಸಿನಿಮಾವನ್ನು ಎ.ಪಿ ಅರ್ಜುನ್ ನಿರ್ದೇಶನ ಮಾಡಿದ್ದು ಉದಯ್ ಕೆ ಮೆಹ್ತಾ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಕೂಡ ಭರ್ಜರಿಯಾಗಿ ಮೂಡಿಬಂದಿದೆ ಎಂದು ಹೇಳಲಾಗುತ್ತಿದ್ದು ಅಭಿಮಾನಿಳು ಟಿಕೆಟ್ಗಾಗಿ ಥಿಯೇಟರ್ಗಳ ಮುಂದೆ ಮುಗಿಬಿದ್ದಿದ್ದಾರೆ. ಅಲ್ಲದೇ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿವೆ. ವಿಶ್ವದ್ಯಾಂತ 3,500 ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಆಗಿದ್ದು ರಾಜ್ಯದ 280ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಆ್ಯಕ್ಷನ್ ಪ್ರಿನ್ಸ್ ಅರ್ಭಟಿಸಲಿದ್ದಾನೆ. ಮೆಜೆಸ್ಟಿಕ್ನ ಕೆ.ಜಿ.ರಸ್ತೆಯಲ್ಲಿರುವ ನರ್ತಕಿ ಸಿನಿಮಾ ಮಂದಿರದಲ್ಲಿ ಮಾರ್ಟಿನ್ ಅದ್ಧೂರಿ ಎಂಟ್ರಿ ಕೊಟ್ಟಿದ್ದಾನೆ.
ಇದನ್ನೂ ಓದಿ:Martin: ಧ್ರುವ ಸರ್ಜಾ ಫ್ಯಾನ್ಸ್ ಹಬ್ಬ.. ರಿಲೀಸ್‌ಗೂ ಮೊದಲೇ ಮಾರ್ಟಿನ್ ಹವಾ ಹೇಗಿದೆ ಗೊತ್ತಾ?
ಧ್ರುವ ಸರ್ಜಾ ಅವರ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸಿನಿಮಾವೇ ಮಾರ್ಟಿನ್ ಆಗಿದೆ. ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊಂಡರೇ ಧ್ರುವ ನೂರಕ್ಕೆ 100ರಷ್ಟು ಯಶಸ್ವಿಯಾಗುತ್ತಾರೆ. ಇದಕ್ಕೆಲ್ಲ ಈ ಹಿಂದಿನ ಸಿನಿಮಾಗಳನ್ನ ಗಮನಿಸಬಹುದು. ಹೀಗಾಗಿ ಮಾರ್ಟಿನ್ಗೆ ಸತತ 3 ವರ್ಷಗಳು ಶ್ರಮ ವಹಿಸಿದ್ದಾರೆ. ಹಾಲಿವುಡ್ ಮಟ್ಟದಲ್ಲಿ ಸಿನಿಮಾ ಇರಬಹುದೆಂದು ಪ್ಯಾನ್ಸ್ ನಿರೀಕ್ಷೆ ಮಾಡಿದ್ದಾರೆ. ಪೋಸ್ಟರ್ಗಳಲ್ಲಿ ಧ್ರುವ ಸರ್ಜಾ ಮಾಸ್ ಲುಕ್ನಲ್ಲೇ ಹೆಚ್ಚಾಗಿ ಕಣಿಸಿಕೊಂಡಿದ್ದರಿಂದ ಮಾಸ್ ಅಭಿಮಾನಿಗಳೆಲ್ಲ ಥಿಯೇಟರ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ಧ್ರುವ ಸರ್ಜಾ ಮತ್ತೊಂದು ಗೆಲುವು ಕಾಣುವುದು ಪಕ್ಕಾ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ