/newsfirstlive-kannada/media/post_attachments/wp-content/uploads/2025/02/dhruva_sarja.jpg)
ಸ್ಯಾಂಡಲ್ವುಡ್ನ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮೂವಿಗಳ ಶೂಟಿಂಗ್ನಲ್ಲಿ ಯಾವಾಗಲೂ ಬ್ಯುಸಿ ಇರುತ್ತಾರೆ. ಆದರೂ ಅವಾಗ ಅವಾಗ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಟ್ರಿಪ್ ಹೋಗುತ್ತಿರುತ್ತಾರೆ. ಇದೇ ರೀತಿ ಸಣ್ಣ ಪ್ರವಾಸಕ್ಕೆ ಹೋಗಿದ್ದಾಗ ಬುಡಕಟ್ಟು ಮಕ್ಕಳ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ, ಶಿಕ್ಷರಿಗೆ ಸರ್ಪ್ರೈಸ್ ನೀಡಿದ್ದಾರೆ. ಇಷ್ಟೇ ಅಲ್ಲದೇ ಆ ಶಾಲೆಗೆ ಸ್ಪೋರ್ಟ್ಸ್ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಜೊತೆ ನಾಗರಹೊಳೆ ಸಫಾರಿಗೆ ಹೋಗಿ ಎಲ್ಲ ಸುತ್ತಾಡಿ ನೋಡಿದ್ದರು. ಇದಾದ ಮೇಲೆ ಚಾಮರಾಜನಗರದ ಉದ್ಬೂರ್ ಆಡಿ ಎನ್ನುವ ಗ್ರಾಮದ ಸರ್ಕಾರಿ ಶಾಲೆಗಳಿಗೆ ಸಡನ್ ಭೇಟಿ ನೀಡಿದ್ದಾರೆ. ಇದರಿಂದ ಅಲ್ಲಿದ್ದ ಮಕ್ಕಳು ಹಾಗೂ ಶಿಕ್ಷಕರು ಅಚ್ಚರಿ ಆಗಿದ್ದಾರೆ. ಸಿನಿಮಾದಲ್ಲಿನ ಹೀರೋ ಕಣ್ಣ ಮುಂದೆ ಬಂದಾಗ ಎಲ್ಲರೂ ಮೂಕವಿಸ್ಮಿತರಾಗಿದ್ದಾರೆ.
ಧ್ರುವ ಸರ್ಜಾ, ಪತ್ನಿ ಪ್ರೇರಣಾ ಅವರು ತಮ್ಮ ಶಾಲೆಗೆ ಬಂದಿದ್ದಕ್ಕೆ ಎಲ್ಲರೂ ಖುಷಿ ಪಟ್ಟಿದ್ದಾರೆ. ಈ ವೇಳೆ ಮಕ್ಕಳ ಜೊತೆ ಧ್ರುವ ಸರ್ಜಾ ಅವರು ಖುಷಿ ಖುಷಿ ಮಾತನಾಡುತ್ತಾ, ಅವರ ಜೊತೆ ಸಮಯ ಕಳೆದು ಅವರ ಸಮಸ್ಯೆಗಳನ್ನೆಲ್ಲಾ ಒಂದೊಂದೆ ಕೇಳಿಕೊಂಡಿದ್ದಾರೆ. ಅವರಿಗೆ ಅಗತ್ಯ ಇರುವ ವಸ್ತುಗಳ ಕುರಿತು ಶಿಕ್ಷಕರೊಂದಿಗೆ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಆದ್ರೆ ನಟ ಬಂದ ಸಂಸತಸದಲ್ಲಿದ್ದ ಶಾಲೆಯ ಮಕ್ಕಳು, ಶಿಕ್ಷಕರು ಏನನ್ನು ನಿರೀಕ್ಷಿಸಿರಲಿಲ್ಲ.
ಇದನ್ನೂ ಓದಿ:BJP-JDS ನಾಯಕರ ಮಹತ್ವದ ಸಭೆ.. ‘ಕೈ’ ಸರ್ಕಾರ ಕಟ್ಟಿ ಹಾಕಲು ಏನೆಲ್ಲಾ ಚರ್ಚೆ ಮಾಡಲಾಗಿದೆ?
ಆದರೆ ಧ್ರುವ ಸರ್ಜಾ ಅವರು ಮಕ್ಕಳು ತಮ್ಮ ಮುಂದೆ ಏನೇನು ಹೇಳಿಕೊಂಡಿದ್ದರು ಅದನ್ನೆಲ್ಲಾ ನೆನಪಿಟ್ಟುಕೊಂಡು ನಗರದಲ್ಲಿ ಖರೀದಿ ಮಾಡಿ ಶಾಲೆಗೆ ಪಾರ್ಸಲ್ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿಡಿಯೋ ಮಾಡುವ ಮೂಲಕ ಧ್ರುವ ಸರ್ಜಾ ಅವರಿಗೆ ಧನ್ಯವಾದ ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ